ರೇಣುಕಾ ಮರ್ಮಾಂಗದ ಫೋಟೋ, ದರ್ಶನ್ ಪ್ಯಾಂಟ್ ಬಿಚ್ಚು ಅಂತ ಹೇಳಿದ್ದಕ್ಕೆ ಸಾಕ್ಷಿ ಇದೆ; SPP ಪ್ರಸನ್ನ ಕುಮಾರ್

author-image
admin
ನಟ ದರ್ಶನ್‌ಗೆ ಕೊನೆಗೂ ನಿಟ್ಟುಸಿರು.. ಬೇಲ್ ಭವಿಷ್ಯಕ್ಕೆ ಹೈಕೋರ್ಟ್‌ ಬಿಗ್ ಟ್ವಿಸ್ಟ್; ಮಹತ್ವದ ನಿರ್ಧಾರ!
Advertisment
  • ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೋ ಪವಿತ್ರಾಗೆ ಕಳಿಸಿದ್ದಾನೆ
  • ಸಾವಿನ ಕಾರಣ ತಿಳಿಸಿಲ್ಲ ಎಂಬ ವಾದಕ್ಕೆ ಪ್ರಸನ್ನ ಕುಮಾರ್​ ಕೌಂಟರ್!
  • ಇಂದೂ ವಾದ ಮಂಡಿಸಲು ಮನವಿ ಮಾಡಿರುವ ಪ್ರಸನ್ನ ಕುಮಾರ್

ರೇಣುಕಾಸ್ವಾಮಿ ಕೊ*ಲೆ ಕೇಸ್​ನಲ್ಲಿ ಬಂಧಿಯಾಗಿರೋ ಆರೋಪಿಗಳು ಪಂಜರದಿಂದ ಹಾರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಜಾಮೀನೆಂಬ ರೆಕ್ಕೆ ಮಾತ್ರ ಸಿಗ್ತಿಲ್ಲ. ಬೇಲ್​ಗಾಗಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದು, ಅದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಅಡ್ಡಿಯಾಗಿದ್ದಾರೆ. SPP​ ಪ್ರತಿವಾದ ಮುಂದುವರೆದಿದ್ದು, ಜಾರ್ಮಿನು ಅರ್ಜಿ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ.

ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ಇಂದೂ ವಾದ ಮಂಡಿಸಲು ಮನವಿ ಮಾಡಿದ ಪ್ರಸನ್ನ ಕುಮಾರ್
ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪಿಗಳ ಬೇಲ್​ ಅರ್ಜಿ ವಿಚಾರಣೆ ನಡೆಯುತ್ತಿದೆ. ಈಗಾಗ್ಲೇ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ. ಪ್ರತಿವಾದ ಆರಂಭಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್​, ಆರೋಪಿಗಳ ಪರ ವಕೀಲರ ವಾದಕ್ಕೆ ಕೌಂಟರ್​ ನೀಡಿದ್ದಾರೆ. ಇಂದು ಮತ್ತೆ ವಾದಿಸಲು ಅವಕಾಶ ಕೊಡುವಂತೆ ಎಸ್​ಪಿಪಿ ಮನವಿ ಮಾಡಿದ್ರು. ನಂತರ ಕೋರ್ಟ್​ ದರ್ಶನ್​ ಜಾಮೀನು ಅರ್ಜಿ ವಿಚಾರಣೆಯನ್ನ ಇಂದಿಗೆ ಮುಂದೂಡಿ ಆದೇಶ ನೀಡಿದೆ. ನಿನ್ನೆ ಎಸ್​ಪಿಪಿ ಮಂಡಿಸಿದ ವಾದದಲ್ಲಿನ ಪ್ರಮುಖ ಅಂಶಗಳೇನು ಅಂತ ನೋಡೋದಾದ್ರೆ.

publive-image
ಪ್ರಸನ್ನ ಕುಮಾರ್​, ಎಸ್​ಪಿಪಿ: ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೋವನ್ನು ಪವಿತ್ರಾ ಗೌಡಗೆ ಕಳಿಸಿದ್ದಾನೆ. ಆಗ ಅದಕ್ಕೆ ಪವಿತ್ರಾ ಎಡಗೈ ಥಂಬ್ ಸಿಂಬಲ್ ಸೂಪರ್ ಅಂತಾ ಕಳಿಸಿದ್ದಾಳೆ. ಈ ರೀತಿ ಮೆಸೇಜ್ ಮಾಡಿದ್ರೆ ಏನು ಮಾಡಬೇಕು? ಬ್ಲಾಕ್ & ರಿಪೋರ್ಟ್ ಮಾಡಬೇಕು. ಇಲ್ಲಾ ಪೊಲೀಸ್ ಕಂಪ್ಲೇಂಟ್ ಕೊಡಬೇಕು. ಆಕೆ ಬ್ಲಾಕ್ ಮಾಡಲ್ಲ, ರಿಪೋರ್ಟ್ ಮಾಡಲ್ಲ, ಪೊಲೀಸ್ ಕಂಪ್ಲೇಂಟ್ ಕೂಡ ಕೊಡಲ್ಲ.
ಇದೇ ವೇಳೆ ಸಾವಿನ ಕಾರಣ ತಿಳಿಸಿಲ್ಲ ಎಂಬ ವಾದಕ್ಕೆ ಪ್ರಸನ್ನ ಕುಮಾರ್​ ಕೊಟ್ಟ ಕೌಂಟರ್​ ಹೀಗಿತ್ತು.

publive-image

ಪ್ರಸನ್ನ ಕುಮಾರ್​, ಎಸ್​ಪಿಪಿ: ಎಲ್ಲಾ ಗಾಯಗಳು ಸಾವಿಗೂ ಮೊದಲೇ ಆಗಿದ್ದು ಅಂತ ರಿಪೋರ್ಟ್​ ಬಂದಿದೆ. ಇಲ್ಲಿ ಡಿಲೇ ಮಾಡಲಾಗಿದೆ ಅನ್ನೋ ಪಾಯಿಂಟ್ಸ್ ಬರಲ್ಲ. ಸಾವಿನ ಬಳಿಕ ಆಗಿದ್ರೆ ಅನುಮಾನ ಇರುತ್ತೆ. ಆದರೆ ಇಲ್ಲಿ ಮೊದಲೇ ಆಗಿದೆ. ಹೀಗಾಗಿ ಆತ ಹೇಗೆ ಸಾವನ್ನಪ್ಪಿದ್ದ ಅನ್ನೋದಕ್ಕೆ ಸಾಕ್ಷಿ ಇದೆ. ಅವರ ದೇಹದ ಲಿವರ್ ಪೀಸ್​ನ ಡಿಎನ್ಎ ಟೆಸ್ಟ್‌ಗೆ ಕಾಯ್ದಿರಿಸಲಾಗಿದೆ. ದೇಹದ ಹೊರ ಭಾಗದಲ್ಲಿ 39 ಗಾಯಗಳಿವೆ. ಒಂದೇ ಒಂದು 2.5 ಸೆಂಟಿಮೀಟರ್ ಮಾತ್ರ ಇದೆ, ಅದರಿಂದ ಎಲ್ಲಾ ಆರೋಪಿಗಳಿಗೆ ಕಲೆ ಆಗಿದೆ ಅಂತಾ ಅನುಮಾನ ಅಂದ್ರು. ಆದರೆ, ಆತನ ದೇಹದ 13 ಹೊರ ಭಾಗದ ಗಾಯಗಳು ಸಾವಿಗೆ ಮುಂಚೆ ಆಗಿದೆ. ಅಷ್ಟು ಗಾಯಗಳು ದೇಹದ ಹೊರಗೆ ರಕ್ತ ಸುರಿಸಿವೆ. ಹೀಗಾಗಿ ರಕ್ತದ ಕಲೆಗಳು ಪತ್ತೆಯಾಗಿವೆ. ಹೊರಗಿನ ಮೊದಲ ಗಾಯ ಗಾಡಿಯ ಬಂಪರ್​ಗೆ ಗುದ್ದಿದ್ರಿಂದ ಆಗಿದೆ. ಮೂರನೇ ಗಾಯ ರಿಬ್ ಮುರಿತ ಆಗಿದೆ. ಅದು ಓರ್ವ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ ನಿಂತಾಗ ಆಗುತ್ತೆ ಅಂತಾ ವರದಿ ಇದೆ ಎಂದರು. ಇದೇ ವೇಳೆ ಎಸ್​ಪಿಪಿ ಪ್ರಸನ್ನ ಕುಮಾರ್​ ಮಾರ್ಮಾಂಗದ ಮೇಲೆ ನಡೆದ ಹಲ್ಲೆ ಬಗ್ಗೆಯೂ ವಿವರಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್.. ಪಟ್ಟಣಗೆರೆ ಶೆಡ್‌ ರಕ್ತಚರಿತ್ರೆಯ ಒಂದೊಂದು ಅಕ್ಷರವನ್ನೂ ಓದಿದ SPP ಪ್ರಸನ್ನ ಕುಮಾರ್ 

ಪ್ರಸನ್ನ ಕುಮಾರ್​, ಎಸ್​ಪಿಪಿ: ಮರ್ಮಾಂಗಕ್ಕೆ ಹೊಡೆದಿರುವುದು ಸಹ ಪ್ರಮುಖ ಗಾಯ. ದರ್ಶನ್ ಪ್ಯಾಂಟ್ ಬಿಚ್ಚು ಅಂತಾ ಹೇಳಿರುವ ಸಾಕ್ಷಿ ಇದೆ. ಇದೊಂದು ರಕ್ತ ಚರಿತ್ರೆಯ ರೀತಿಯಲ್ಲಿ ಆಗಿರುವ ಘಟನೆ. ಆತನ ಮಾರ್ಮಾಂಗದ ಬಲ ಬದಿಯ ಟೆಸ್ಟಿಕಲ್ ಹೊರಗೆ ಬಂದಿದೆ. ಅದು ದರ್ಶನ್ ನಡೆಸಿದ ಹಲ್ಲೆಯಿಂದ ಆಗಿದೆ. ಈ ಮೂಲಕ ಪ್ರಕರಣದ ಆರೋಪಿಗಳ ಪಾತ್ರವಿದೆ. ನಿಜವಾಗಲೂ ಸಿ.ವಿ ನಾಗೇಶ್ ಹೇಳಿದಂತೆ ಇದೊಂದು ಅರೆಬಿಯನ್ ನೈಟ್ಸ್ ಸ್ಟೋರಿ.

ಆರೋಪಿಗಳ ಪರ ವಕೀಲರ ಪ್ರಶ್ನೆಗಳಿಗೆ ಕೌಂಟರ್​ ಕೊಡುತ್ತಲೇ ಎಸ್​ಪಿಪಿ ಪ್ರಸನ್ನಕುಮಾರ್​, ಪ್ರಬಲವಾದ ಪ್ರತಿವಾದ ಮಂಡಿಸಿದ್ರು. ಇಂದಿನ ವಿಚಾರಣೆಯಲ್ಲಿ ಮತ್ಯಾವ ಅಂಶಗಳು ಪ್ರಸ್ತಾಪ ಆಗುತ್ತೆ ಅನ್ನೋ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment