ಮೊಳಕೆಯೊಡೆದ ಆಲೂಗಡ್ಡೆ ತುಂಬಾನೇ ಡೇಂಜರ್​; ಅಡುಗೆ ಮಾಡುವ ಮೊದಲು ಯೋಚಿಸಿ..!

author-image
Ganesh
Updated On
ಮೊಳಕೆಯೊಡೆದ ಆಲೂಗಡ್ಡೆ ತುಂಬಾನೇ ಡೇಂಜರ್​; ಅಡುಗೆ ಮಾಡುವ ಮೊದಲು ಯೋಚಿಸಿ..!
Advertisment
  • ಆಲೂಗಡ್ಡೆ ತಿನ್ನೋದ್ರಿಂದ ಏನೆಲ್ಲ ಪ್ರಯೋಜನ ಇದೆ?
  • ಆಲೂಗಡ್ಡೆ ಸಂಗ್ರಹಿಸುವ ವಿಚಾರದಲ್ಲಿ ಈ ತಪ್ಪು ಮಾಡಬೇಡಿ
  • ನೀವು ಮಾಡುವ ಒಂದು ಸಣ್ಣ ತಪ್ಪು ಆರೋಗ್ಯಕ್ಕೆ ಭಾರೀ ಪೆಟ್ಟು

ಆಲೂಗಡ್ಡೆ ಬಹುತೇಕರ ನೆಚ್ಚಿನ ತರಕಾರಿ. ಮನೆಗಳಲ್ಲಿ ಪ್ರತಿಬಾರಿ ಸ್ಟಾಕ್ ಇರುವ ಏಕೈಕ ತರಕಾರಿ ಅಂದರೆ ಅದು ಆಲೂಗಡ್ಡೆ. ಕೆಲವರು ಆಲೂಗಡ್ಡೆ ಶೇಖರಣೆ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತಿದ್ದಾರೆ. ಇದರಿಂದ ಆರೋಗ್ಯಕ್ಕೆ ತುಂಬಾನೇ ಡೇಂಜರ್​ ಆಗಿದೆ.

ಕೆಲವರು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರೆ, ಇನ್ನೂ ಕೆಲವರು ಚೀಲಗಳಲ್ಲಿ ಮುಚ್ಚಿಡುತ್ತಾರೆ. ಕೆಲವರು ಅಡುಗೆ ಮನೆಯ ಮೂಲೆ ಒಂದರಲ್ಲಿ ಹಾಗೇ ಬಿಸಾಡಿರುತ್ತಾರೆ. ಹಣ್ಣುಗಳು ಮತ್ತು ತರಕಾರಿಗಳಿಗೆ ಹೋಲಿಸಿದರೆ ಆಲೂಗಡ್ಡೆಯನ್ನು ದೀರ್ಘ ಕಾಲದವರೆಗೆ ಸಂಗ್ರಹಿಸಬಹುದು. ಅದೇ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚೇ ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.

ಇದನ್ನೂ ಓದಿ:BOB; ಖಾಲಿ ಉದ್ಯೋಗಗಳ ಭರ್ತಿಗೆ ಅರ್ಹರಿಂದ ಅರ್ಜಿ ಅಹ್ವಾನ.. ಇಂದೇ ಅಪ್ಲೇ ಮಾಡಿ!

ಆದರೆ ಆಲೂಗಡ್ಡೆ ಶೇಖರಣೆಯಲ್ಲಿ ಸರಿಯಾದ ಕ್ರಮ ಅನುಸರಿಸದಿದ್ದರೆ ಅದರ ಮೇಲೆ ಮೊಳಕೆ ಬರುತ್ತದೆ. ಬಣ್ಣ ಬದಲಾಗುತ್ತದೆ. ಇದರಿಂದ ಅದು ತಾಜಾತನ ಮತ್ತು ರುಚಿ ಕಳೆದುಕೊಳ್ಳುತ್ತದೆ. ಕೊನೆಗೆ ಅದು ಅಡುಗೆಗೆ ನಿಷ್ಪ್ರಯೋಜಕ ಆಗುತ್ತದೆ. ಮೊಳಕೆಯೊಡೆದ ಆಲೂಗಡ್ಡೆಯನ್ನು ಅನೇಕರು ಅಡುಗೆಗೆ ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಧ್ಯಯನಗಳು ಹೇಳಿವೆ. ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಳಕೆಯೊಡೆದ ನಂತರ ಅದು, ಸೋಲನೈನ್ ಮತ್ತು ಚಾಕೋನಿನ್ (solanine and chaconine) ಉತ್ಪಾದಿಸುತ್ತವೆ.

ಆಗ ಆಲೂಗಡ್ಡೆ ವಿಷಕಾರಿ ಆಗಿರುತ್ತದೆ. ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ತಲೆನೋವು ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಕೂಡ ಆಗುತ್ತದೆ. ಇನ್ಮುಂದೆ ಆಲೂಗಡ್ಡೆ ಬಳಸುವಾಗ ಈ ವಿಚಾರ ಗಮನದಲ್ಲಿಟ್ಟುಕೊಂಡು ಅಡುಗೆ ಮಾಡಿ. ಇಲ್ಲದಿದ್ದರೆ ಅನಗತ್ಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಆರೋಗ್ಯದ ದೃಷ್ಟಿಯಿಂದ ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ಅದನ್ನು ಎಣ್ಣೆಯಲ್ಲಿ ಕರಿದು ತಿನ್ನುವುದು ಒಳ್ಳೆಯದಲ್ಲ. ಬೇಯಿಸಿ ತಿನ್ನುವುದು ಒಳ್ಳೆಯದು. ಹಾಗಿದ್ದೂ ಮಾರುಕಟ್ಟೆಯಿಂದ ಆಲೂಗಡ್ಡೆ ಖರೀದಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ:ಡ್ರೈಫ್ರೂಟ್ಸ್ ಹಾಗೂ ಡೈರಿ ಹಾಲು ಇವುಗಳಲ್ಲಿ ಆರೋಗ್ಯಕ್ಕೆ ಯಾವುದು ಶ್ರೇಷ್ಠ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment