/newsfirstlive-kannada/media/post_attachments/wp-content/uploads/2025/05/GT-3.jpg)
ಬೇಹುಗಾರಿಕೆ ಆರೋಪದ ಮೇಲೆ ಅಫೀಷಿಯಲ್ ಸೀಕ್ರೆಟ್ ಆಕ್ಟ್ ಮತ್ತು ಬಿಎನ್ಎಸ್ 152 ಅಡಿಯಲ್ಲಿ ಪೊಲೀಸರ ಅಧೀನದಲ್ಲಿರುವ ಜ್ಯೋತಿ ಮಲ್ಹೋತ್ರ, ಹರಿಸ್ ಕುಮಾರ್ ಮಲ್ಹೋತ್ರಾ ಎಂಬುವವರ ಪುತ್ರಿ. ಮಗಳ ಮೇಲೆ ಗಂಭೀರ ಆರೋಪ ಕೇಳಿ ಬಂದ ನಂತರ ಆಕೆಯ ತಂದೆ ಪ್ರತಿಕ್ರಿಯಿಸಿದ್ದಾರೆ.
‘ಅವಳ ಕೆಲಸ ಅವಳು ಮಾಡಿಕೊಂಡಿದ್ದವಳು ಆಕೆ’
ಜ್ಯೋತಿ ಯೂಟ್ಯೂಬ್ ವೀಡಿಯೊಗಳನ್ನ ಚಿತ್ರೀಕರಿಸೋಕೆ, ಪಾಕಿಸ್ತಾನ ಮತ್ತು ಇತರ ಸ್ಥಳಗಳಿಗೆ ಭೇಟಿ ಕೊಡ್ತಿದ್ದಳು. ತಮ್ಮ ಮಗಳು ತನ್ನಷ್ಟಕ್ಕೆ ತಾನು ವ್ಲಾಗ್ ಮಾಡಿಕೊಂಡು ಇದ್ದವಳು. ಪಾಕಿಸ್ತಾನಕ್ಕೂ ಸಹ ಯೂಟ್ಯೂಬ್ ಶೂಟ್ಗಾಗಿ, ಅದಕ್ಕೆ ಬೇಕಾದ ಎಲ್ಲಾ ಅನುಮತಿಗಳನ್ನ ಪಡೆದುಕೊಂಡೇ ಹೋಗಿದ್ದಳು. ಅವಳಿಗೆ ಪಾಕ್ನಲ್ಲಿ ಕೆಲವು ಸ್ನೇಹಿತರಿದ್ದರಬಹುದು, ಅವರಿಗೆ ಆಕೆ ಕರೆ ಮಾಡಬಾರದೇ? ಎಂದು ಹೇಳುತ್ತಾ ಜ್ಯೋತಿ ತಂದೆ ಪೊಲೀಸರ ಕ್ರಮವನ್ನ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ದಾಳಿಯ ಮಾಸ್ಟರ್ ಮೈಂಡ್ ಉಗ್ರ ಫಿನಿಶ್.. ದೇಶದ 3 ಕಡೆ ದಾಳಿ ಮಾಡಿಸಿದ್ದ ಈತ..!
ಜ್ಯೋತಿ ಮೇಲೆ ಬೇಹುಗಾರಿಕೆ ಸಂಶಯ ಬಂದ ಕೂಡಲೇ, ಹರಿಯಾಣ ಪೊಲೀಸರು ಜ್ಯೋತಿ ಮಲ್ಹೋತ್ರಾಳನ್ನ ಹಿಸಾರ್‌ನಲ್ಲಿ ಬಂಧಿಸಿದ್ದರು. ಆಕೆ ಪಾಕಿಸ್ತಾನಿ ಗುಪ್ತಚರ ಸಿಬ್ಬಂದಿಯೊಟ್ಟಿಗೆ ಕಾಂಟ್ಯಾಕ್ಟ್ನಲ್ಲಿದ್ದಾಳೆ. ಆಕೆ ದೆಹಲಿಯಲ್ಲಿ ಪಾಕಿಸ್ತಾನಿ ಅಧಿಕಾರಿಯನ್ನ ಭೇಟಿಯಾಗಿ, ನಂತರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಳು, ಆಗಿನಿಂದ ಪಾಕಿಸ್ತಾನಿ ನಿರ್ವಾಹಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಅಧಿಕಾರಿಗಳು ಹೇಳಿದ್ದರು.
ನಮ್ಮ ಫೋನ್ಸ್ ಲ್ಯಾಪ್ಟಾಪ್ಸ್ ವಾಪಸ್ ಕೊಟ್ಟುಬಿಡಿ
ಜ್ಯೋತಿಯ ಬಂಧನವಾದ ತಕ್ಷಣ ಹರಿಯಾಣ ಪೊಲೀಸರು, ಆಕೆಯ ಮನೆಯಲ್ಲಿದ್ದ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ದಾಖಲೆಗಳು ಮತ್ತು ಪಾಸ್‌ಪೋರ್ಟ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಫೋನ್ಸ್, ಲ್ಯಾಪ್ಟಾಪ್ಗಳಿಂದ ಕೆಲ ಅನುಮಾನಾಸ್ಪದ ವಿಷಯಗಳು ಪೊಲೀಸರಿಗೆ ಸಿಕ್ಕಿವೆ ಎನ್ನಲಾಗಿದೆ. ಈ ಬೆನ್ನಲ್ಲೇ ತನ್ನ ಮಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ನೀವು ಬೇಕಾದರೆ ವಿಚಾರಣೆ ನಡೆಸಿ. ನನಗೆ ಮಾತ್ರ ನಮ್ಮ ಫೋನ್‌ಗಳನ್ನ ವಾಪಸ್ ಕೊಡಿ ಎಂದು ಹರಿಸ್ ಕುಮಾರ್ ಮೆಲ್ಹೋತ್ರಾ ಕೇಳಿದ್ದಾರೆ. ಈಗಾಗಲೇ ಯೂಟ್ಯೂಬರ್ ಜ್ಯೋತಿ ಮೆಲ್ಹೋತ್ರಾಳನ್ನ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ಗೆ ನಾಯಕನ ಹೆಸರು ಫೈನಲ್.. ಅಧಿಕೃತ ಘೋಷಣೆ ಒಂದೇ ಬಾಕಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ