/newsfirstlive-kannada/media/post_attachments/wp-content/uploads/2025/05/Jyoti-Malhotra.jpg)
ಪಾಕ್ ಪರ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಜ್ಯೋತಿ ಮಲ್ಹೋತ್ರಾಳ ತನಿಖೆಯು ತೀವ್ರಗೊಂಡಿದೆ. ಇದೀಗ ತನಿಖಾಧಿಕಾರಿಗಳು ಆಕೆಯ ಡೈರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಕೆಲವು ಮಹತ್ವದ ವಿಚಾರಗಳನ್ನು ಪತ್ತೆ ಮಾಡಿದ್ದಾರೆ.
ಪಾಕ್ ಪ್ರವಾಸ ಮಾಡಿ ಬಂದ ಬಳಿಕ ಬರೆದಿರುವ ಡೈರಿ ಅದಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದಿರುವ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಾಕ್ ಬಗ್ಗೆ, ಅಲ್ಲಿನ ಜನರ ಬಗ್ಗೆ, ಭಾರತೀಯರು ಪಾಕ್ಗೆ ಹೋಗುವ ಬಗ್ಗೆ ಜ್ಯೋತಿ ಡೈರಿ ಬರೆದಿದ್ದಾಳೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಗೌರವ ಸಲ್ಲಿಸಿದ ನಟಿ ರುಚಿ ಗುಜ್ಜರ್; Cannes 2025 ಫೋಟೋಗಳು ಇಲ್ಲಿವೆ
ನಾವೆಲ್ಲಾ ಒಂದೇ ಭೂಮಿಗೆ ಸೇರಿದವರು, ಒಂದೇ ಮಣ್ಣಿಗೆ ಸೇರಿದವರು ಅಂತಾ ಜ್ಯೋತಿ ಬರೆದಿದ್ದಾಳೆ. ಅಲ್ಲದೇ ಪಾಕಿಸ್ತಾನದಲ್ಲಿ ಕೊಟ್ಟ ಅತಿಥ್ಯವನ್ನು ಹೊಗಳಿ ಡೈರಿಯಲ್ಲಿ ನಮೂಸಿದಿದ್ದಾಳೆ ಎನ್ನಲಾಗಿದೆ. ಇನ್ನು, ವಶಕ್ಕೆ ಪಡೆದಿರುವ ಡೈರಿಯು 10 ರಿಂದ 11 ಪುಟಗಳು ಇದೆ ಎಂದು ತಿಳಿದುಬಂದಿದೆ.
ಇನ್ನು ಪೊಲೀಸರು, ಎನ್‌ಐಎ ಅಧಿಕಾರಿಗಳ ತನಿಖೆಗೆ ಜ್ಯೋತಿ ಸರಿಯಾಗಿ ಸಹಕಾರ ನೀಡ್ತಿಲ್ಲ. ಪಹಲ್ಗಾಮ್ ದಾಳಿಗೆ ಸೇನೆ ಹಾಗೂ ಪ್ರವಾಸಿಗರೇ ಕಾರಣ ಅಂತಾ ಜ್ಯೋತಿ ಹೇಳಿದ್ದಳು. ಈ ಬಗ್ಗೆಯೂ ಜ್ಯೋತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೈಕ್ರೋವೇವ್ನಲ್ಲಿ ಆಹಾರ ಮಾತ್ರ ಬಿಸಿ ಆಗ್ತದೆ.. ಪಾತ್ರೆ ಯಾಕೆ ಹೀಟ್ ಆಗಲ್ಲ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ