/newsfirstlive-kannada/media/post_attachments/wp-content/uploads/2024/07/SHIVA_NEW.jpg)
ಇಂದಿನಿಂದ ಹಿಂದೂಗಳ ಪವಿತ್ರ ತಿಂಗಳು ಎಂದೇ ಕರೆಯಲ್ಪಡುವ ಶ್ರಾವಣ ಮಾಸವು ಆರಂಭವಾಗಿದೆ. ಶ್ರಾವಣ ಮಾಸಕ್ಕೆ ಅನೇಕ ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳು ಇವೆ. ಈ ಶ್ರಾವಣ ಮಾಸ ಸಹಜವಾಗಿ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳುಗಳ ನಡುವೆ ಬಂದು ಹೋಗುತ್ತದೆ. ಈ ವರ್ಷ ಇಂದಿನಿಂದ ಅಂದ್ರೆ ಜುಲೈ 22 ರಿಂದ ಶುರುವಾಗಲಿರುವ ಶ್ರಾವಣ ಮಾಸ ಆಗಸ್ಟ್ 19ಕ್ಕೆ ಮುಗಿಯಲಿದೆ. ಒಟ್ಟು 5 ಸೋಮವಾರಗಳು ಹಾಗೂ 4 ಮಂಗಳವಾರಗಳು ಈ ಬಾರಿ ಶ್ರಾವಣ ಮಾಸದಲ್ಲಿ ಬರಲಿರೋದು ವಿಶೇಷ, ಶ್ರಾವಣ ಮಾಸವೆಂದರೆ ಭಾರತೀಯ ಮಹಿಳೆಯರಿಗೆ ಒಂದು ರೀತಿಯ ಪ್ರಿಯವಾದ ಮಾಸ. ಈ ಮಾಸದಲ್ಲಿ ಅನೇಕ ವ್ರತಗಳನ್ನು ವಿಶೇಷ ಪೂಜೆ ಪುನಸ್ಕಾರಗಳನ್ನು ಮಹಿಳೆಯರು ಕೈಗೊಳ್ಳುತ್ತಾರೆ. ಈ ಶ್ರಾವಣ ಮಾಸದ ಸಮಯದಲ್ಲಿ ಭಾರತೀಯ ನಾರಿಯರು ಯಾವೆಲ್ಲ ವ್ರತಗಳನ್ನು ಕೈಗೊಳ್ಳುತ್ತಾರೆ ಅಂತ ತಿಳಿಯುವುದಕ್ಕೂ ಮೊದಲು ಈ ಶ್ರಾವಣ ಮಾಸಕ್ಕೆ ಇಷ್ಟೊಂದು ಮಹತ್ವ ಹಾಗೂ ಶ್ರೇಷ್ಠತೆ ಬಂದಿದ್ದು ಹೇಗೆ? ಇದರ ಹಿಂದಿರುವ ಪೌರಾಣಿಕ ಹಿನ್ನೆಲೆ ಏನು ಅನ್ನೋದನ್ನ ಮೊದಲಿಗೆ ತಿಳಿದುಕೊಳ್ಳೋಣ.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಶ್ರಾವಣ ಮಾಸಕ್ಕೆ ಇಷ್ಟೊಂದು ಶ್ರೇಷ್ಠತೆ ಇರೋದು ಏಕೆ?
ಶ್ರಾವಣ ಮಾಸದ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇದೆ. ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನ ಪೂಜೆಗಳು ನಡೆಯುತ್ತವೆ. ಅದಕ್ಕೆ ಕಾರಣವೂ ಇದೆ. ದೇವ-ದಾನವರು ಸೇರಿ ಸಮುದ್ರ ಮಂಥನ ಮಾಡುವ ವೇಳೆ ಅಮೃತಕ್ಕೂ ಮೊದಲು ಹಾಲಾಹಲ ಅಂದ್ರೆ ವಿಷವೂ ಹೊರಗೆ ಬರುತ್ತದೆ. ಇಡೀ ಸೃಷ್ಟಿಯ ವಿನಾಶಕ್ಕೆಂದೆ ಆಚೆ ಬಂದಿದ್ದ ಆ ಹಾಲಹಾಲವನ್ನು ಶಿವನು ಕುಡಿದು ಬಿಡುತ್ತಾನೆ. ಇದರಿಂದ ಆತಂಕಗೊಂಡ ಪಾರ್ವತಿ ಹಾಲಾಹಲವು ಶಿವನು ಹೊಟ್ಟೆ ಸೇರುವ ಮೊದಲು ಅದನ್ನು ತನ್ನ ಶಕ್ತಿಯಿಂದ ಗಂಟಲಿನಲ್ಲಿ ತಡೆದುಬಿಡುತ್ತಾಳೆ. ಹೀಗಾಗಿ ನೀಲಿರೂಪ ಪಡೆದುಕೊಂಡು ಹಾಲಾಹಲವು ಶಿವನ ಗಂಟಲಿನಲ್ಲಿಯೇ ಉಳಿದುಕೊಂಡು ಬಿಡುತ್ತೆ. ಇದೇ ಕಾರಣಕ್ಕೆ ಶಿವನನ್ನು ನೀಲಕಂಠ ಎಂದು ಕೂಡ ಕರೆಯುತ್ತಾರೆ. ಹೀಗಾಗಿ ಶ್ರಾವಣ ಮಾಸವನ್ನು ಅಂದಿನಿಂದ ಶಿವನಿಗೆ ಅರ್ಪಿತವಾಗುತ್ತದೆ. ಇದರ ಜೊತೆ ಜೊತೆಗೆ ಮತ್ತೊಂದು ಪೌರಾಣಿಕ ಹಿನ್ನೆಲೆಯೂ ಕೂಡ ಈ ಶ್ರಾವಣ ಸೋಮವಾರಕ್ಕಿದೆ. ಇದೇ ತಿಂಗಳಲ್ಲಿ ಶಿವನು ಮಂಗಳಗೌರಿಯನ್ನು ಪೂಜಿಸಿ ತ್ರಿಪುರಾಂತಕ ರಾಕ್ಷಸನನ್ನು ಸಂಹರಿಸಿದನು ಎಂದು ಕೂಡ ಒಂದು ಪ್ರತೀತಿ ಇದೆ. ಹೀಗಾಗಿ ಎಲ್ಲೆಡೆ ಪರಮಶಿವನಿಗಾಗಿ ವಿಶೇಷ ಪೂಜೆಗಳು ನಡೆಯುತ್ತವೆ. ರುದ್ರಪಠಣಗಳು ನಮಗೆ ಎಲ್ಲ ಶಿವನ ದೇವಸ್ಥಾನಗಳಲ್ಲಿ ಮಾರ್ಧನಿಸುತ್ತವೆ. ಇನ್ನು ಇದೇ ಶ್ರಾವಣ ಮಾಸದಲ್ಲಿ ಭಾರತೀಯ ಮಹಿಳೆಯರು ವಿಶೇಷ ಪೂಜೆ ಪುನಸ್ಕಾರಗಳಲ್ಲಿ ತೊಡಗುತ್ತಾರೆ.
ಇದನ್ನೂ ಓದಿ:ಅಮೆರಿಕದ ಅಧ್ಯಕ್ಷರಾಗ್ತಾರಾ ಭಾರತ ಮೂಲದ ಕಮಲಾ ಹ್ಯಾರಿಸ್.. ಜೋ ಬೈಡನ್ ಹೇಳಿದ್ದೇನು?
ಮಹಿಳೆಯರು ಕೈಗೊಳ್ಳುವ ವ್ರತಗಳು ಯಾವವು..?
ಪುಣ್ಯಮಾಸವೆಂದೇ ಕರೆಯಲ್ಪಡುವ ಶ್ರಾವಣ ಮಾಸದಲ್ಲಿ ಮಹಿಳೆಯರು ವಿಶೇಷವಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ. 5 ಸೋಮವಾರ, 4 ಮಂಗಳವಾರಗಳು ಬರೋದ್ರಿಂದ ಮಂಗಳಗೌರಿ ವ್ರತಗಳನ್ನು ಕೂಡ ಮಹಿಳೆಯರು ಕೈಗೊಳ್ಳುತ್ತಾರೆ. ಇನ್ನು ವಿಶೇಷವಾಗಿ ಇದೇ ಸಮಯದಲ್ಲಿಯೇ 16 ಸೋಮವಾರಗಳ ವ್ರತವನ್ನು ಮಹಿಳೆಯರು ಶ್ರಾವಣದ ಮೊದಲ ಸೋಮವಾರದಂದೆ ಕೈಗೊಳ್ಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ