/newsfirstlive-kannada/media/post_attachments/wp-content/uploads/2025/04/SIDDALINGA.jpg)
ತುಮಕೂರು: ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಇದೀಗ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ 10 ವರ್ಷದ ಹಿಂದಿನದ್ದನ್ನು ಪ್ರಕಟ ಮಾಡುವುದು ನ್ಯಾಯೋಚಿತವಲ್ಲ. ಹೊಸ ಸಮೀಕ್ಷೆ ಮಾಡಿದರೆ ಒಳ್ಳೆಯದು. ಜಾತಿಗಣತಿ ಮಾಡಿ, ಮತ್ತೊಮ್ಮೆ ವೈಜ್ಞಾನಿಕವಾಗಿ ಎಲ್ಲರನ್ನೂ ಕೇಳಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಕ್ತಿ ಮಾರ್ಗ, ‘ಧರ್ಮ’ ರಾಜಕಾರಣ.. ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಏನು..?
10 ವರ್ಷದ ಹಿಂದೆ ಮಾಡಿರುವ ಸಮೀಕ್ಷೆಯನ್ನು ಈಗ ಯಾಕೆ ಪ್ರಕಟ ಮಾಡುತ್ತಿದ್ದಾರೆ ಎಂಬುವುದು ಅರ್ಥವಾಗ್ತಿಲ್ಲ. 10 ವರ್ಷದಿಂದ ಇಲ್ಲಿಯವರೆಗೆ ಅದೆಷ್ಟೋ ಬದಲಾವಣೆಗಳು ಆಗಿರಬಹುದು. ಜನಸಂಖ್ಯೆ ಹೆಚ್ಚಿರಬಹುದು. ಅದೆಲ್ಲವೂ ಇಂದು ವ್ಯತ್ಯಾಸ ಆಗಲಿದೆ. ಹಾಗಾಗಿ 10 ವರ್ಷದ ಹಿಂದಿನದ್ದನ್ನ ಇಂದು ಪ್ರಕಟ ಮಾಡುವಂತದ್ದು ನ್ಯಾಯೋಚಿತವಲ್ಲ ಎಂದಿದ್ದಾರೆ.
ಸರ್ಕಾರ ಸಮಿತಿ ರಚನೆ ಮಾಡಿ, ಜಾತಿಗಣನೆ ಮಾಡಿ. ಅದರ ಆಧಾರದ ಮೇಲೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹಿನ್ನೆಲೆ ತಿಳಿದುಕೊಂಡು ಆಯಾ ವರ್ಗಗಳಿಗೆ ನ್ಯಾಯ ಒದಗಿಸಬೇಕು ಅನ್ನೋದು ಶ್ಲಾಘನೀಯ. ಈಗಿನ ಜಾತಿ ಗಣತಿಯ ಬಗ್ಗೆ ಬಹುತೇಕರು ಗೊತ್ತಿಲ್ಲ ಎನ್ನುತ್ತಿದ್ದಾರೆ. ಎಲ್ಲೋ ಒಂದು ಕಡೆ ಅದು ಎಲ್ಲರನ್ನೂ ತಲುಪಿಲ್ಲ.
ಇದನ್ನೂ ಓದಿ: ಆರಂಭದಲ್ಲೇ ಮಾತಿನ ಜಟಾಪಟಿ, ಜಾತಿಗಣತಿ ಸಭೆ ಫೇಲ್.. ಸಂಪುಟ ಚರ್ಚೆಯ ಇನ್ಸೈಡ್ ಸ್ಟೋರಿ..!
ಈ ಗೊಂದಲವನ್ನು ನಿವಾರಣೆ ಮಾಡಿ ಪ್ರತಿಯೊಬ್ಬರನ್ನೂ ಭೇಟಿ ಮಾಡಬೇಕು. ಎಲ್ಲರಿಗೂ ನ್ಯಾಯ ಒದಗಿಸಿಕೊಡುವಂತಹ ಕೆಲಸ ಮಾಡಬೇಕು. ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು, ನಿರ್ಗತಿಕರಿದ್ದಾರೆ. ಅವರೆಲ್ಲರನ್ನೂ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅವರಿಗೆ ನೌಕರಿ, ಉತ್ತಮ ಶಿಕ್ಷಣ ಒದಗಿಸಿಕೊಡಬೇಕಿದೆ. ಆಗಾದರೆ ಮಾತ್ರ ಆರೋಗ್ಯಪೂರ್ಣ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಅಸಮಾನತೆ ಹೋಗಲಾಡಿಸಬೇಕು, ಸಮಾನತೆಯನ್ನ ತರಬೇಕು. ಹಿಂದುಳಿದವರನ್ನ ಮುಂದೆ ತರಬೇಕು, ಬಡವರನ್ನ ಮೇಲೆತ್ತಬೇಕು ಎನ್ನುವ ಉದ್ದೇಶ ಒಳ್ಳೆಯದಾಗಿದೆ. ನಮ್ಮ ಸಂವಿಧಾನದ ನೀತಿಯೂ ಅದೇ ಆಗಿದೆ. ಆ ಹಿನ್ನೆಲೆಯಲ್ಲಿ ಜಾತಿಗಣತಿ ಮಾಡಿ ಅದನ್ನ ಮತ್ತೊಮ್ಮೆ ವೈಜ್ಞಾನಿಕವಾಗಿ ಮಾಡಲಿ. ಪ್ರತಿಯೊಬ್ಬರನ್ನ ವಿಚಾರ ಮಾಡಿ ಆ ಮೂಲಕ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಸರ್ಕಾರದ ಮೇಲಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ