ಸ್ಯಾಂಡಲ್‌ವುಡ್‌ ಕಿಸ್​ ಬೆಡಗಿಗೆ ಫಿಕ್ಸ್​ ಆಯ್ತಾ ಮದುವೆ? ಶ್ರೀಲೀಲಾ ಫೋಟೋ ನೋಡಿ ಫ್ಯಾನ್ಸ್ ಶಾಕ್‌!

author-image
Veena Gangani
Updated On
ಸ್ಯಾಂಡಲ್‌ವುಡ್‌ ಕಿಸ್​ ಬೆಡಗಿಗೆ ಫಿಕ್ಸ್​ ಆಯ್ತಾ ಮದುವೆ? ಶ್ರೀಲೀಲಾ ಫೋಟೋ ನೋಡಿ ಫ್ಯಾನ್ಸ್ ಶಾಕ್‌!
Advertisment
  • ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಹಾರಿದ ಕನ್ನಡದ ಸ್ಟಾರ್ ನಟಿ
  • ಫ್ಯಾನ್ಸ್​ಗೆ ಗುಡ್​ನ್ಯೂಸ್ ಕೊಡೋದಕ್ಕೆ ಮುಂದಾದ ನಟಿ ಶ್ರೀಲೀಲಾ
  • ಕಮಿಂಗ್​ ಸೂನ್​ ಅಂತ ಬರೆದು ಕುತೂಹಲ ಮೂಡಿಸಿದ ನಟಿ

ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಲಕ್​ ಬದಲಾಗಿದೆ. ಟಾಲಿವುಡ್​, ಬಾಲಿವುಡ್ ಅಂತ​ ಪರದೆಯ ಮೇಲೆ ಮಿಂಚುತ್ತಿದ್ದಾರೆ. ಆದ್ರೆ ಇದರ ಮಧ್ಯೆ ನಟಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಡೋದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ನಟ ದರ್ಶನ್​ ಅಮ್ಮ ನನ್ನ ದೊಡ್ಡ ಅಭಿಮಾನಿ.. ಸೀತಾರಾಮ ಖ್ಯಾತಿಯ ಗಗನ್​ ಚಿನ್ನಪ್ಪ ಹೇಳಿದ್ದೇನು..?

publive-image

ನಟಿ ಶ್ರೀಲೀಲಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿ ಶಾಕ್​ ಕೊಟ್ಟಿದ್ದಾರೆ. ಜೊತೆಗೆ ಕಮಿಂಗ್​ ಸೂನ್​ ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

publive-image

ಇತ್ತೀಚೆಗಷ್ಟೆ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟಿರೋ ಶ್ರೀಲೀಲಾ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂಬ ಮಾತುಗಳು ಹೇಳಿ ಬಂದಿದ್ದವು. ಅಷ್ಟೇ ಅಲ್ಲದೇ ಕಾರ್ತಿಕ್ ಆರ್ಯನ್ ಕುಟುಂಬದೊಡನೆ ಶ್ರೀಲೀಲಾ ಬಲು ಆಪ್ತವಾಗಿದ್ದಾರೆ. ಈ ಮಧ್ಯೆ ಶ್ರೀಲೀಲಾಳ ಮುಖಕ್ಕೆ ಕುಟುಂಬಸ್ಥರು ಅರಿಶಿಣ ಹಚ್ಚುತ್ತಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಹಲವರು ಶ್ರೀಲೀಲಾ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

publive-image

ಸದ್ಯ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದರ ನಡುವೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ವಂದತಿಗಳು ಸಹ ಹಬ್ಬಿವೆ. ಈ ಹಿಂದೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು, ಕಾರ್ತಿಕ್ ಆರ್ಯನ್ ತಾಯಿ ಸಹ, ನಮಗೆ ಡಾಕ್ಟರ್ ಸೊಸೆ ಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು. ಇದೆಲ್ಲದರ ನಡುವೆ ಇದೀಗ ಶ್ರೀಲೀಲಾ ಹಂಚಿಕೊಂಡಿರುವ ಚಿತ್ರಗಳು, ಅನುಮಾನಗಳಿಗೆ ಭಾರಿ ಪುಷ್ಟಿ ನೀಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment