ಪಂತ್​​​ಗೆ ಭಾರೀ ಅವಮಾನ, ಲಕ್ನೋ ಪ್ಲೇ ಆಫ್​ ಕನಸು ಭಗ್ನ.. ಹೈದ್ರಾಬಾದ್​ ಗೆಲುವು ವ್ಯರ್ಥ!

author-image
Bheemappa
Updated On
ಪಂತ್​​​ಗೆ ಭಾರೀ ಅವಮಾನ, ಲಕ್ನೋ ಪ್ಲೇ ಆಫ್​ ಕನಸು ಭಗ್ನ.. ಹೈದ್ರಾಬಾದ್​ ಗೆಲುವು ವ್ಯರ್ಥ!
Advertisment
  • ಹೋಮ್​​​ ಗ್ರೌಂಡ್​ನಲ್ಲಿ ​​ಮುಖಭಂಗ ಅನುಭವಿಸಿದ ಪಂತ್
  • ಮೊದಲ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಮಾರ್ಷ್,​ ಮರ್ಕರಮ್
  • ಬೃಹತ್​ ಟಾರ್ಗೆಟ್​ ಅನ್ನ ಈಜಿಯಾಗಿ ತಲುಪಿದ ಸರ್​ರೈಸರ್ಸ್​​

ಸನ್​ರೈಸರ್ಸ್​​ ಹೈದ್ರಾಬಾದ್​ ತಂಡದ ಅಬ್ಬರಕ್ಕೆ ಲಕ್ನೋ ಸೂಪರ್​ ಜೈಂಟ್ಸ್​​ನ ಪ್ಲೇ ಆಫ್​​ ಎಂಟ್ರಿಯ ಕನಸು ನುಚ್ಚು ನೂರಾಗಿದೆ. ಬಿಗ್​ ಟಾರ್ಗೆಟ್​​ನ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಪರದಾಡಿದ ಲಕ್ನೋ ಹೋಮ್​​​ಗ್ರೌಂಡ್​ನಲ್ಲಿ ​​ಮುಖಭಂಗ ಅನುಭವಿಸಿತು. ಏಕಾನ ಮೈದಾನದಲ್ಲಿ ಹೈದ್ರಾಬಾದ್​​ನ ಪರ್ಫಾಮನ್ಸ್​ ಹೇಗಿತ್ತು, ಲಕ್ನೋ ಎಲ್ಲಿ ಎಡವಿಬಿತ್ತು?.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗೆ ಬಂದ ಲಕ್ನೋ ಸೂಪರ್​​ ಜೈಂಟ್ಸ್​ ಬೊಂಬಾಟ್​ ಓಪನಿಂಗ್​ ಪಡೆದುಕೊಂಡಿತು. ಮಿಚೆಲ್​ ಮಾರ್ಷ್, ಎಡೆನ್​ ಮರ್ಕರಮ್​​ ಅಬ್ಬರದ ಆಟವಾಡಿದರು. ಹೈದ್ರಾಬಾದ್​​ ಬೌಲರ್​ಗಳನ್ನ ಚಿಂದಿ ಉಡಾಯಿಸಿದ ಈ ಜೋಡಿ ಪವರ್​​ಪ್ಲೇನಲ್ಲಿ 69 ರನ್​ ಗಳಿಸಿತು.

publive-image

6 ಬೌಂಡರಿ, 4 ಸಿಕ್ಸರ್​ ಸಿಡಿಸಿ ಮಿಂಚಿದ ಮಿಚೆಲ್​ ಮಾರ್ಷ್​​ ಹಾಫ್​ ಸೆಂಚುರಿ ಸಿಡಿಸಿದರು. 166.66ರ ಸ್ಟ್ರೈಕ್​ರೇಟ್​​​ನಲ್ಲಿ ಅಬ್ಬರಿಸಿದ ಮಾರ್ಷ್​​ 39 ಎಸೆತಗಳಲ್ಲಿ 65 ರನ್​ಗಳಿಸಿದರು. ಎಡೆನ್​ ಮರ್ಕರಮ್​ ಕೂಡ ಜಬರ್ದಸ್ತ್​ ಇನ್ನಿಂಗ್ಸ್​ ಕಟ್ಟಿದರು. 4 ಬೌಂಡರಿ, 4 ಸಿಕ್ಸರ್​​​ ಸಿಡಿಸಿದ ಮರ್ಕರಮ್​​ 38 ಎಸೆತಗಳಲ್ಲಿ 61 ರನ್​ಗಳಿಸಿದರು.

ಮರ್ಕರಮ್​, ಮಾರ್ಷ್​ ಪತನದ ಬಳಿಕ ಲಕ್ನೋ ತಂಡ ಕುಸಿತ ಕಂಡಿತು. ನಾಯಕ ರಿಷಭ್​ ಪಂತ್​, ಆಯುಷ್​​ ಬದೋನಿ ಕೈ ಕೊಟ್ಟರು. ಇದರ ನಡುವೆ ಅಬ್ಬರಿಸಿದ ಪೂರನ್​ 45 ರನ್​ಗಳಿಸಿದರು. ಕೊನೆಯ ಹಂತದಲ್ಲಿ ಕಣಕ್ಕಿಳಿದ ಅಬ್ದುಲ್​ ಸಮದ್​, ಶಾರ್ದೂಲ್​ ಠಾಕೂರ್​ ಅಲ್ಪ ಮೊತ್ತಕ್ಕೆ ಸುಸ್ತಾದ್ರು. 20 ಓವರ್​​ಗಳ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ಲಕ್ನೋ ಸೂಪರ್​ ಜೈಂಟ್ಸ್​ 205 ರನ್​ಗ ಳಿಸಿತು.

206 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಸನ್​ರೈಸರ್ಸ್​ ಹೈದ್ರಾಬಾದ್​ಗೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಅಥರ್ವ ಟೈಡೆ 13 ರನ್​ಗಳಿಸಿ ನಿರ್ಗಮಿಸಿದರು. ಆ ಬಳಿಕ ಜೊತೆಯಾದ ಅಭಿಶೇಕ್​ ಶರ್ಮಾ -ಇಶಾನ್​ ತಂಡಕ್ಕೆ ಚೇತರಿಕೆ ನೀಡಿದರು. ಅಬ್ಬರಿಸಿ ಬೊಬ್ಬಿರಿದ ಅಭಿಶೇಕ್​ ಶರ್ಮಾ 20 ಎಸೆತಗಳಲ್ಲೇ ಹಾಫ್​​ ಸೆಂಚುರಿ ಸಿಡಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಮಳೆಯಿಂದ ಬೇಸರ; BBMPಗೆ 50 ಲಕ್ಷ ರೂಪಾಯಿ ನೋಟಿಸ್ ಕಳುಹಿಸಿದ ಮಹಿಳೆ

publive-image

ಅಭಿಶೇಕ್​ ಶರ್ಮಾ 6 ಸಿಕ್ಸರ್​​, 4 ಬೌಂಡರಿ ಸಿಡಿಸಿ ಮಿಂಚಿದರು. 3 ಬೌಂಡರಿ, 2 ಸಿಕ್ಸರ್​ ಬಾರಿಸಿದ ಇಶಾನ್​ ಕಿಶನ್​ 28 ರನ್​ಗಳಿಸಿದರು. ಅಬ್ಬರದ ಆಟದೊಂದಿಗೆ ಮುನ್ನುಗ್ತಿದ್ದ ಇವರ ಅಟಕ್ಕೆ ದಿಗ್ವೇಶ್​​ ರಾಥಿ ಬ್ರೇಕ್​ ಹಾಕಿದರು. ಆ ಬಳಿಕ ಜೊತೆಯಾದ ಹೆನ್ರಿಚ್​ ಕ್ಲಾಸೆನ್​, ಕಮಿಂಡು ಮೆಂಡಿಸ್​ ಸಾಲಿಡ್​ ಜೊತೆಯಾಟವಾಡಿದರು. 4 ಬೌಂಡರಿ, 1 ಸಿಕ್ಸರ್​​ ಸಿಡಿಸಿದ ಹೆನ್ರಿಚ್​ ಕ್ಲಾಸೆನ್​ 47 ರನ್​ಗಳಿಸಿ ಔಟಾದರು. 21 ಎಸೆತಗಳಲ್ಲಿ 32 ರನ್​ಗಳಿಸಿದ ಕಮಿಂಡು ಮೆಂಡೀಸ್ ಗೆಲುವಿಗೆ 9 ರನ್​ ಬೇಕಿದ್ದಾಗ ಇಂಜುರಿಗೆ ತುತ್ತಾಗಿ ರಿಟೈರ್ಡ್​ ಹರ್ಟ್​ ಆದರು,.

ಬಳಿಕ ಬ್ಯಾಟಿಂಗ್​ಗೆ ಬಂದ ನಿತೀಶ್​ ರೆಡ್ಡಿ ವಿನ್ನಿಂಗ್​ ಶಾಟ್​​​ ಬಾರಿಸಿ ಹೈದ್ರಾಬಾದ್​ನ ಗೆಲುವಿನ ದಡ ಸೇರಿಸಿದರು. 18.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿದ ಹೈದ್ರಾಬಾದ್​, 6 ವಿಕೆಟ್​ಗಳ ಜಯ ಸಾಧಿಸಿತು. ಸೋತ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪ್ಲೇ ಆಫ್​ ಕನಸು ಭಗ್ನವಾಯ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment