/newsfirstlive-kannada/media/post_attachments/wp-content/uploads/2024/05/SRH_RCB_KKR.jpg)
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ 17ನೇ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಇಂಟರ್​​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ರೋಚಕ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್​​​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಸೆಣಸಾಡಲಿವೆ.
ಇನ್ನು, ಇಂದು ಗೆದ್ದ ತಂಡ ನೇರ ಫೈನಲ್​ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್​​ ಮತ್ತೆ ಕಣಕ್ಕಿಳಿಯಲಿದೆ.
ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​​ ಮತ್ತು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದವು. ಇಂದು ಫೈನಲ್​ಗಾಗಿ ಎರಡು ತಂಡಗಳು ಬಿಗ್​ ಫೈಟ್​ ಮಾಡಲಿದ್ದು, ಯಾರು ಸೋತ್ರೂ ಮತ್ತೊಂದು ಅವಕಾಶ ಇದೆ.
ಇಂದು ಹೈದರಾಬಾದ್​ ಗೆಲ್ಲಬೇಕು, ನಾಳೆ ಆರ್​​ಸಿಬಿ ಗೆಲ್ಲಬೇಕು. ನಂತರ ನಡೆಯೋ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​​ಸಿಬಿ ಗೆಲುವು ಸಾಧಿಸಬೇಕು. ಫೈನಲ್​ ಪಂದ್ಯದಲ್ಲಿ ಆರ್​​ಸಿಬಿ, ಹೈದರಾಬಾದ್​​ ತಂಡಗಳು ಮುಖಾಮುಖಿ ಆಗಬೇಕು. ಅಂದು ಹೈದರಾಬಾದ್​ ವಿರುದ್ಧ ಆರ್​​ಸಿಬಿ ಗೆದ್ದು 2016ರ ಸೇಡು ತೀರಿಸಿಕೊಳ್ಳಬೇಕು ಅನ್ನೋದು ಬೆಂಗಳೂರು ಅಭಿಮಾನಿಗಳ ಆಸೆ. ಹಾಗಾಗಿ ಇಂದು ಹೈದರಾಬಾದ್​​ ಗೆದ್ದರೆ ಆರ್​​ಸಿಬಿಗೆ ಒಳ್ಳೆಯದು ಎನ್ನಬಹುದು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us