/newsfirstlive-kannada/media/post_attachments/wp-content/uploads/2025/04/Klaasen.jpg)
ಪಂದ್ಯದ ಆರಂಭದಿಂದಲೂ ಸತತ ವಿಕೆಟ್​ಗಳು ಉರುಳಿದರೂ ಎದೆ ಗುಂದದ ಸ್ಫೋಟಕ ಬ್ಯಾಟರ್​ ಹೆನ್ರಿಚ್ ಕ್ಲಾಸೆನ್ ಅವರು ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್​ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದ್ರಾಬಾದ್​ ಬ್ಯಾಟರ್​ಗಳು ದೊಡ್ಡ ವಿಫಲಕ್ಕೆ ಒಳಗಾಗಿದ್ದಾರೆ.
ಹೈದರಾಬಾದ್​​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಎಸ್​ಆರ್​ಹೆಚ್​ ಅನ್ನು ಬ್ಯಾಟಿಂಗ್​​​ಗೆ ಆಹ್ವಾನ ಮಾಡಿದರು. ಆರಂಭಿಕರಾಗಿ ಬ್ಯಾಟಿಂಗ್​​​ಗೆ ಆಗಮಿಸಿದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್​ ಶರ್ಮಾ ತಂಡಕ್ಕೆ ಓಪನಿಂಗ್ ಒದಗಿಸುವಲ್ಲಿ ವಿಫಲರಾದರು.
ಇದನ್ನೂ ಓದಿ: 4 ತಿಂಗಳ ಹಿಂದೆ ಮದುವೆಯಾಗಿದ್ದ IAF ಅಧಿಕಾರಿ.. ಪತ್ನಿ ಜತೆ ಪ್ರವಾಸದಲ್ಲಿದ್ದಾಗ ಉಗ್ರರ ಗುಂಡಿಗೆ ಬಲಿ
/newsfirstlive-kannada/media/post_attachments/wp-content/uploads/2025/04/Heinrich_Klaasen.jpg)
ತಂಡದ ಮೊತ್ತ 35 ರನ್​ ಆಗಿದ್ದಾಗ 5 ವಿಕೆಟ್​ ಹೋದರೂ ತಲೆ ಕೆಡಿಸಿಕೊಳ್ಳದ ಹೆನ್ರಿಚ್ ಕ್ಲಾಸೆನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಮುಂಬೈ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ ಸ್ಫೋಟಕ ಬ್ಯಾಟರ್​​​ ಹಾಫ್​ಸೆಂಚುರಿ ಬಾರಿಸಿದರು. ಅಲ್ಪ ಮೊತ್ತಕ್ಕೆ ಆಲೌಟ್​ ಆಗುತ್ತಿದ್ದ ತಂಡಕ್ಕೆ ವಿಕೆಟ್​ ಕೀಪರ್​ ಹೆನ್ರಿಚ್ ಕ್ಲಾಸೆನ್ ಬೆನ್ನುಲುಬಾಗಿ ನಿಂತು ಬ್ಯಾಟಿಂಗ್ ಮಾಡಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್​ನಿಂದ 50 ರನ್​ಗಳನ್ನು ಹೆನ್ರಿಚ್ ಕ್ಲಾಸೆನ್ ಬಾರಿಸಿದರು. ಇನ್ನು ಇಂದಿನ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ಮಾತ್ರ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನ ಮಾಡಿದರು ಎನ್ನಬಹುದು. ಏಕೆಂದರೆ, ಓಪನರ್ಸ್​ ಆದ ಟ್ರಾವಿಸ್​ ಹೆಡ್​ ಡಕೌಟ್​, ಅಭಿಷೇಕ್ ಶರ್ಮಾ 8, ಇಶನ್ ಕಿಶನ್ 1, ನಿತೀಶ್ ಕುಮಾರ್ 2 ಅನಿಕೇತ್ ವರ್ಮಾ 12 ರನ್​ಗೆ ಔಟ್​ ಆಗಿದ್ದಾರೆ. ಸದ್ಯ ತಂಡದ ಮೊತ್ತ 15 ಓವರ್​​ಗೆ 5 ವಿಕೆಟ್​ ನಷ್ಟಕ್ಕೆ 90 ರನ್​ಗಳಿಂದ ಹೈದ್ರಾಬಾದ್ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us