/newsfirstlive-kannada/media/post_attachments/wp-content/uploads/2024/05/SRH_KAVYA_MARAN.jpg)
ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯೂಟಿ ಹಾಗೂ ಓನರ್ ಕಾವ್ಯ ಮಾರನ್ ಆಕ್ಷನ್ನಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ರನ್ನು 20.50 ಕೋಟಿ ರೂಪಾಯಿಗೆ ಖರೀದಿಸಿದ್ದರು. ಆಗ ಆಕ್ಷನ್ನಲ್ಲಿದ್ದ ಅಂಬಾನಿ, ಗೋಯೆಂಕಾ, ಕುಮಾರ್ ಸಂಗಕ್ಕಾರ್ ಸೇರಿದಂತೆ ಇತರೆ ತಂಡದ ಮಾಲೀಕರು ಕಾವ್ಯರನ್ನ ನೋಡಿ ಅಪಹಾಸ್ಯ ಮಾಡಿದ್ದರು. ಆದರೆ ಅದಕ್ಕೆ ಈಗ ಕಾವ್ಯ ಮಾರನ್ ಸರಿಯಾದ ಉತ್ತರ ಕೊಟ್ಟಿದ್ದಾರೆ ಎನ್ನಬಹುದು.
ಆಕ್ಷನ್ನಲ್ಲಿ ಕಾವ್ಯ ಮಾರನ್ರನ್ನ ಅಪಹಾಸ್ಯ ಮಾಡಿದ್ದ ಮಾಲೀಕರ ತಂಡಗಳು ಪ್ಲೇಆಫ್ಗೂ ಬಂದಿಲ್ಲ. ಆದ್ರೆ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಈ ಬಾರಿ ಫೈನಲ್ಗೆ ಎಂಟ್ರಿಕೊಟ್ಟಿದೆ. ಇದಕ್ಕೆ ಕಾರಣ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್. 3 ಐಪಿಎಲ್ನಲ್ಲಿ ಕೊನೆ ಸ್ಥಾನದಲ್ಲಿದ್ದ ಹೈದ್ರಾಬಾದ್ ಅನ್ನು ಇವತ್ತು ಕಪ್ ಗೆಲ್ಲುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಆದರೆ ಆಸಿಸ್ ಕ್ಯಾಪ್ಟನ್ನನ್ನ ಖರೀದಿ ಮಾಡಿದ್ದಾಗ ಕಾವ್ಯರನ್ನ ನೋಡಿ ನಕ್ಕಿದ್ದ ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ, ರಾಜಸ್ಥಾನ ರಾಯಲ್ಸ್ ಕೋಚ್ ಕುಮಾರ್ ಸಂಗಕ್ಕಾರ, ಮುಂಬೈಯ ಅಂಬಾನಿ ನಗುತ್ತಿದ್ದರು. ಇವತ್ತು ಇವರೆಲ್ಲ ಬಾಯಿ ಮುಚ್ಚಿಕೊಂಡು ಇದ್ದಾರೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
When Kavya Maran bought Pat Cummins at a high price, it was met with skepticism. Now, he has led the team to the finals, proving his worth and silencing critics.#KKRvsSRH#IPLFINAL#KavyaMaranpic.twitter.com/ly4445kY8d
— MSDIAN?? (@223Chetry17096) May 26, 2024
2023ರಲ್ಲಿ ಭಾರತವನ್ನು ಫೈನಲ್ನಲ್ಲಿ ಬಗ್ಗು ಬಡಿದು ಏಕದಿನ ವಿಶ್ವಕಪ್ಗೆ ಮುತ್ತಿಟ್ಟಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಇಂದು ಐಪಿಎಲ್ ಕಪ್ ಗೆಲ್ಲೋ ಭರವಸೆಯಲ್ಲಿದ್ದಾರೆ. ಆಕ್ಷನ್ನಲ್ಲಿ ಕಮಿನ್ಸ್ರನ್ನ ಒಳ್ಳೆಯ ಬೌಲರ್ ಆಗಿ ಖರೀದಿ ಮಾಡಲು ಚೆನ್ನೈ, ಮುಂಬೈ 7 ಕೋಟಿಗೆ ಬಿಡ್ ಮಾಡಿದ್ದರು. ಆದ್ರೆ ಕೊನೆಗೆ ಕಾವ್ಯ ಬರೋಬ್ಬರಿ 20.50 ಕೋಟಿಗೆ ಕಮಿನ್ಸ್ರನ್ನ ಖರೀದಿ ಮಾಡಿ ತಂಡದ ನಾಯಕನನ್ನಾಗಿ ಅಖಾಡಕ್ಕೆ ಇಳಿಸಿದ್ದರು. ಆ ಮೇಲೆ ಐಪಿಎಲ್ನಲ್ಲಿ ಆಗಿದ್ದೇಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ