ಕಾವ್ಯಾ ಮಾರನ್​, ಸನ್‌ರೈಸರ್ಸ್ ಹೈದರಾಬಾದ್​ ತಂಡಕ್ಕೆ ಸಂಕಷ್ಟ ಎದುರಾಗುತ್ತಾ.. ಕಾರಣವೇನು?

author-image
Bheemappa
Updated On
ಕಾವ್ಯಾ ಮಾರನ್​, ಸನ್‌ರೈಸರ್ಸ್ ಹೈದರಾಬಾದ್​ ತಂಡಕ್ಕೆ ಸಂಕಷ್ಟ ಎದುರಾಗುತ್ತಾ.. ಕಾರಣವೇನು?
Advertisment
  • BCCI ಹೈದರಾಬಾದ್ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ
  • ಹೈದರಾಬಾದ್ ತಂಡದ ಜೊತೆ ಇನ್ನೊಂದು T20 ಟೀಮ್ ಕೂಡ ಇದೆ
  • ಸನ್​ನೆಟ್​ವರ್ಕ್​ ಸ್ವಾಧೀನ ಪಡಿಸಿಕೊಳ್ಳುವಾಗ ಮೋಸ ಮಾಡಲಾಯಿತಾ?

2024ರಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದ, ಈ ಬಾರಿ ಲೀಗ್​ ಹಂತದಲ್ಲಿ ಐಪಿಎಲ್​ನಿಂದ ಹೊರ ಬಂದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸನ್‌ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್ ಅವರ ತಂದೆ ಸನ್​ ನೆಟ್​ವರ್ಕ್​ನ ಮಾಲೀಕ ಕಲಾನಿಧಿ ಮಾರನ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ.

ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದ ದಯಾನಿಧಿ ಮಾರನ್ ಅವರು ತನ್ನ ಸಹೋದರ ಕಲಾನಿಧಿ ಮಾರನ್ ಮೇಲೆ​ ಆರ್ಥಿಕ ಅಪರಾಧಗಳ ಆರೋಪ ಮಾಡಿದ್ದಾರೆ. ಸನ್ ಟಿವಿ ಹಾಗೂ ಇದಕ್ಕೆ ಸಂಬಂಧಿಸಿದ ಕಂಪನಿಗಳ ಸಂಪೂರ್ಣ ಷೇರುಗಳನ್ನು ಮೂಲ ಸ್ಥಿತಿಗೆ ಮರುಸ್ಥಾಪಿಸಬೇಕು. ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

2003ಕ್ಕಿಂತಲೂ ಮೊದಲು ಸನ್​ ನೆಟ್​ವರ್ಕ್​​ನಲ್ಲಿ ಮಾರನ್ ಹಾಗೂ ಕರುಣಾನಿಧಿ ಕುಟುಂಬ ಸಮವಾಗಿ ಷೇರುಗಳನ್ನು ಹಂಚಿಕೊಂಡಿದ್ದರು. ಸದ್ಯ ಈಗ ಈ ಷೇರುಗಳ ಬಗ್ಗೆ ವಿವಾದ ಎದ್ದಿದೆ. 2003ರ ನಂತರ ಸನ್ ಡೈರೆಕ್ಟ್ ಟಿವಿ, ಸನ್ ಪಿಕ್ಚರ್ಸ್, ಎಫ್‌ಎಂ ಚಾನೆಲ್ ಹಾಗೂ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನಂತಹ ಉದ್ಯಮಗಳನ್ನು ಪ್ರಾರಂಭಿಸಲು ಕಂಪನಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಸನ್​ಟಿವಿ ಸ್ವಾಧೀನಪಡಿಸಿಕೊಳ್ಳುವಾಗ ಸಹೋದರ ಕಲಾನಿಧಿ ಸಂಘಟಿತ ಆರ್ಥಿಕ ವಂಚನೆ ಮಾಡಿದ್ದಾರೆ. ಇದರಲ್ಲಿ ಮೋಸವಾಗಿದೆ ಎಂದು ದಯಾನಿಧಿ ಮಾರನ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?

publive-image

ಸನ್​ನೆಟ್​ವರ್ಕ್​ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಟಿವಿ ನೆಟ್​ವರ್ಕ್ ಆಗಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಇದೆ. ಇದೇ ನೆಟ್​ವರ್ಕ್​​​ ಭಾರತದಾದ್ಯಂತ ಎಫ್​​​ಎಂ ರೇಡಿಯೋ ಕೇಂದ್ರಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಐಪಿಎಲ್​ನ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ದಕ್ಷಿಣ ಆಫ್ರಿಕಾದ T20 ಲೀಗ್‌ನ ತಂಡವಾದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ನ ಒಡೆತನ ಇವರದ್ದೇ ಆಗಿವೆ.

ಒಂದು ವೇಳೆ ದಯಾನಿಧಿ ಮಾರನ್ ಮಾಡಿದ ಈ ಎಲ್ಲ ಆರೋಪಗಳು ಸಾಬೀತಾದರೆ, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾವ್ಯಾ ಮಾರನ್ ಹಾಗೂ ಅವರ ಐಪಿಎಲ್ ಟೀಮ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment