IPL 2025: ಹೈದರಾಬಾದ್‌ ಆಸೆಗೆ ತಣ್ಣೀರು.. ಪ್ಲೇ ಆಫ್ ರೇಸ್‌ನಿಂದಲೇ SRH ಕಿಕ್‌ ಔಟ್‌!

author-image
admin
Updated On
IPL 2025: ಹೈದರಾಬಾದ್‌ ಆಸೆಗೆ ತಣ್ಣೀರು.. ಪ್ಲೇ ಆಫ್ ರೇಸ್‌ನಿಂದಲೇ SRH ಕಿಕ್‌ ಔಟ್‌!
Advertisment
  • ಕೇವಲ 134 ರನ್ ಟಾರ್ಗೆಟ್‌ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌
  • IPL ಸೀಸನ್ 18ರಿಂದ ಸನ್‌ ರೈಸರ್ಸ್ ಹೈದರಾಬಾದ್ ಔಟ್
  • ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇ ಆಫ್ ಹಾದಿ ಕೂಡ ಈಗ ಬಹಳ ಕಠಿಣ

IPL ಸೀಸನ್ 18ರ ಪ್ಲೇ ಆಫ್ ರೇಸ್‌ನಿಂದ ಸನ್‌ ರೈಸರ್ಸ್ ಹೈದರಾಬಾದ್ ಔಟ್ ಆಗಿದೆ. ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಡೆಲ್ಲಿ ವಿರುದ್ಧ SRH ಡೆಡ್ಲಿ ಅಟ್ಯಾಕ್ ಮಾಡಿತ್ತು. ಆದರೆ ಮೊದಲರ್ಧದ ಪಂದ್ಯದ ಬಳಿಕ ಮಳೆರಾಯ ಎಂಟ್ರಿ ಕೊಟ್ಟಿದ್ದು, ಹೈದರಾಬಾದ್‌ ತಂಡದ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ಪ್ಯಾಟ್ ಕಮ್ಮಿನ್ಸ್ ಪವರ್‌ ಪ್ಲೇಯಲ್ಲಿ 3 ವಿಕೆಟ್ ಪಡೆಯೋ ಮೂಲಕ ಡೆಲ್ಲಿಗೆ ಬಿಗ್ ಶಾಕ್ ಕೊಟ್ಟರು.

ಡೆಲ್ಲಿಗೆ ಆರಂಭದಲ್ಲೇ ಆಘಾತ ಕೊಟ್ಟ ಪ್ಯಾಟ್ ಕಮ್ಮಿನ್ಸ್ ಫಾಫ್ ಡುಪ್ಲೆಸಿಸ್‌, ಅಭಿಷೇಕ್ ಪೊರೆಲ್ ವಿಕೆಟ್ ಕಿತ್ತು ಡೆಲ್ಲಿ ಢರ್‌ಗಯಾ ಆಗುವಂತೆ ಮಾಡಿದರು. ಪವರ್ ಪ್ಲೇಯಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 100 ರ ಗಡಿ ದಾಟಲು ಪರದಾಟ ನಡೆಸಿತು.  ಅಂತಿಮವಾಗಿ 20 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು. 

ಕೇವಲ 134 ರನ್ ಟಾರ್ಗೆಟ್‌ ಅನ್ನು ಬಹಳ ಬೇಗ ಚೇಸ್ ಮಾಡಿ ಗೆಲ್ಲೋ ಉತ್ಸಾಹದಲ್ಲಿ ಹೈದರಾಬಾದ್‌ ತಂಡ ಕಣಕ್ಕಿಳಿಯ ಪ್ಲಾನ್ ಮಾಡಿತ್ತು. ಆದರೆ ಹೈದರಾಬಾದ್‌ ತಂಡ ಬ್ಯಾಟಿಂಗ್‌ಗೂ ಮುನ್ನ ಮಳೆ ಆರಂಭವಾಗಿದ್ದು, ಪಂದ್ಯವೇ ರದ್ದಾಗುವಂತೆ ಮಾಡಿದೆ. ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಪಂದ್ಯ ರದ್ದಾಗಿದ್ದು, ಎರಡು ತಂಡಕ್ಕೆ ನಿರಾಸೆ ಮೂಡಿಸಿದೆ. 

ಇದನ್ನೂ ಓದಿ: ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್ ಹೇಳಿದ ಹರ್ಭಜನ್ ಸಿಂಗ್.. ಫೈನಲ್ ಪ್ರವೇಶ ಮಾಡೋ ತಂಡ ಯಾವುದು..? 

ಡೆಲ್ಲಿ ವಿರುದ್ಧ ಹೈದರಾಬಾದ್ ಪಂದ್ಯ ರದ್ದಾಗಿದ್ದರಿಂದ SRH ಈ ಬಾರಿಯ ಐಪಿಎಲ್‌ ಸೀಸನ್‌ನಿಂದಲೇ ಔಟ್ ಆಗಿದೆ. ಅಷ್ಟೇ ಅಲ್ಲ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇ ಆಫ್ ಹಾದಿ ಕೂಡ ಇದರಿಂದ ಕಠಿಣವಾಗಿದೆ. ಉಳಿದ 3 ಪಂದ್ಯಗಳಲ್ಲಿ 2ರಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಡೆಲ್ಲಿ ತಂಡ ಸಿಲುಕಿದೆ. 

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment