ಕ್ಯಾಪ್ಟನ್​ ಬಿಟ್ಟು ಹೊಡಿಬಡಿ ಪ್ಲೇಯರ್​ ಮೇಲೆ ಕಣ್ಣು.. 3 ಪಟ್ಟು ಹೆಚ್ಚಿನ ಹಣ ನೀಡ್ತಿದೆಯಾ ಈ ಫ್ರಾಂಚೈಸಿ?

author-image
Bheemappa
Updated On
ಕ್ಯಾಪ್ಟನ್​ ಬಿಟ್ಟು ಹೊಡಿಬಡಿ ಪ್ಲೇಯರ್​ ಮೇಲೆ ಕಣ್ಣು.. 3 ಪಟ್ಟು ಹೆಚ್ಚಿನ ಹಣ ನೀಡ್ತಿದೆಯಾ ಈ ಫ್ರಾಂಚೈಸಿ?
Advertisment
  • ಮೂವರು ಪ್ಲೇಯರ್​ಗೆ ದೊಡ್ಡ ಮೊತ್ತ ಕೊಡಲು ಫ್ರಾಂಚೈಸಿ ರೆಡಿನಾ?
  • ಅಚ್ಚರಿಯ ನಡೆ ಅನುಸರಿಸಿರುವ ಐಪಿಎಲ್​ನ ರನ್ನರ್ ಅಪ್ ತಂಡ
  • ಕಳೆದ ಬಾರಿಗಿಂತ 3 ಪಟ್ಟು ಹೆಚ್ಚು ಹಣ ನೀಡುತ್ತಿದೆಯಾ ಫ್ರಾಂಚೈಸಿ?

ಐಪಿಎಲ್ ರಿಟೈನ್​ ಡೆಡ್​ಲೈನ್​ ಡೇಟ್ ಹತ್ತಿರವಾಗುತ್ತಿದೆ. ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳುವುದು, ಯಾರನ್ನು ತಂಡದಿಂದ ಕೈಬಿಡುವುದು ಎಂಬ ಲೆಕ್ಕಾಚಾರದಲ್ಲಿ ಮಗ್ನವಾಗಿವೆ. ಈ ನಡುವೆ ಸನ್ ರೈಸರ್ಸ್ ಅಚ್ಚರಿಯ ನಡೆ ಅನುಸರಿಸಿದೆ.

IPL ರಿಟೈನ್, ರಿಲೀಸ್..! ಸದ್ಯ ಇಂಡಿಯನ್ ಕ್ರಿಕೆಟ್ ಲೋಕದಲ್ಲೇ ಇದರದ್ದೇ ಚರ್ಚೆ.. ಯಾರು ಯಾರನ್ನು ಉಳಿಸಿಕೊಳ್ಳುತ್ತಾರೆ. ಯಾರನ್ನು ಕೈಬಿಡುತ್ತಾರೆ ಅನ್ನೋ ಕ್ಯುರಿಯಾಸಿಟಿ ಫ್ಯಾನ್ಸ್​ ಮನದಲ್ಲಿ ಮನೆ ಮಾಡಿದೆ. ಈ ನಡುವೆಯೇ ಫ್ರಾಂಚೈಸಿ ಮೂಲಗಳಿಂದ ಹೊರ ಬೀಳುತ್ತಿರುವ ಸುದ್ದಿಗಳು ಅಚ್ಚರಿಗೆ ದೂಡುತ್ತಿವೆ. ಅಷ್ಟೇ ಅಲ್ಲ, ಕೆಲ ದಿಗ್ಗಜರ ಲೆಕ್ಕಾಚಾರ, ಭವಿಷ್ಯಗಳನ್ನೇ ತಲೆಕೆಳಗಾಗಿಸುತ್ತಿವೆ. ಇದಕ್ಕೆ ಲೆಟೆಸ್ಟ್​ ಎಕ್ಸಾಂಪಲ್ ಸನ್​ ರೈಸರ್ಸ್ ಹೈದ್ರಾಬಾದ್​.

ಇದನ್ನೂ ಓದಿ: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್​ನಲ್ಲಿ ಉದ್ಯೋಗ ಅವಕಾಶ.. ಶುಲ್ಕವಿಲ್ಲ, ಈಗಲೇ ಅಪ್ಲೇ ಮಾಡಿ

publive-image

ಕೆಲವೇ ದಿನಗಳಲ್ಲಿ ಐಪಿಎಲ್ ತಂಡಗಳ ರಿಟೈನ್​ ಲಿಸ್ಟ್ ಹೊರಬೀಳಲಿದೆ. ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಸನ್‌ ರೈಸರ್ಸ್ ಹೈದ್ರಾಬಾದ್​​ ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​ ಭಾರೀ ಕುತೂಹಲ ಕೆರಳಿಸಿದೆ.

ಕ್ಲಾಸೆನ್​ಗೆ ಮೊದಲ ಆದ್ಯತೆ.. ₹18 ಅಲ್ಲ.. ₹23 ಕೋಟಿ..!

ಸನ್ ರೈಸರ್ಸ್ ಹೈದ್ರಾಬಾದ್ ರಿಟೈನ್ ಲಿಸ್ಟ್ ರೆಡಿಯಾಗಿದೆ. ಸದ್ಯ ಮೂವರು ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಮುಂದಾಗಿರುವ ಸನ್ ರೈಸರ್ಸ್ 20 ಕೋಟಿ ಒಡೆಯ ಪ್ಯಾಟ್ ಕಮಿನ್ಸ್​ಗೆ ಶಾಕ್ ನೀಡಿದೆ. ಮೊದಲ ರಿಟೈನ್ ಆಯ್ಕೆಯಾಗಿ ಹೆನ್ರಿಚ್ ಕ್ಲಾಸೆನ್​ ಉಳಿಸಿಕೊಳ್ಳಲು ಮುಂದಾಗಿರುವ ಸನ್​ರೈಸರ್ಸ್​​, ಬರೋಬ್ಬರಿ 23 ಕೋಟಿ ನೀಡಲು ಸಿದ್ಧವಾಗಿದೆ.

ಇನ್ನು 20.5 ಕೋಟಿಯ ಒಡೆಯ ಪ್ಯಾಟ್ ಕಮಿನ್ಸ್​, ಸನ್ ರೈಸರ್ಸ್ ಫ್ರಾಂಚೈಸಿಯ 2ನೇ ಆಯ್ಕೆಯಾಗಿದ್ರೆ, ಯಂಗ್ ಮಿಸೈಲ್ ಅಭಿಷೇಕ್ ಶರ್ಮಾ 3ನೇ ರಿಟೈನ್ ಆಟಗಾರನಾಗಿ ತಂಡದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ.

ಅಭಿಷೇಕ್​ ಶರ್ಮಾಗೂ ಡಬಲ್ ಅಮೌಂಟ್ ಫಿಕ್ಸ್.!

ಸನ್ ರೈಸರ್ಸ್ ತಂಡದ ಈ ನಡೆಯಿಂದ ಹೆನ್ರಿಚ್ ಕ್ಲಾಸೆನ್​ಗೆ ಬಂಪರ್ ಜಾಕ್​ಪಾಟ್ ಹೊಡೆದಿದ್ರೆ. ಕ್ಯಾಪ್ಟನ್ ಪ್ಯಾಟ್ ಕಮಿನ್ಸ್​ಗೆ ಕಳೆದ ಬಾರಿಗಿಂತ ಕಡಿಮೆ ಮೊತ್ತದ ಹಣದ ಸಿಗಲಿದೆ. ಇನ್ನು ತಂಡದ ಯಂಗ್​ಸ್ಟರ್​ ಅಭಿಷೇಕ್ ಶರ್ಮಾಗೂ ಗುಡ್​ ನ್ಯೂಸ್ ನೀಡಲಿರುವ ಸನ್ ರೈಸರ್ಸ್, ಕೋಟಿ ಕೋಟಿ ಹಣ ನೀಡಲು ರೆಡಿಯಾಗಿದೆ.

ಸನ್ ರೈಸರ್ಸ್ ರಿಟೈನ್ ಪ್ಲೇಯರ್ಸ್​..?

ಇಂಟ್ರೆಸ್ಟಿಂಗ್ ಅಂದ್ರೆ. ಈ ಹಿಂದಿನ ಸೀಸನ್​ ಕೇವಲ ₹5.25 ಕೋಟಿ ಹಣ ಪಡೆದಿದ್ದ ಹೆನ್ರಿಚ್ ಕ್ಲಾಸೆನ್​​, ಫಸ್ಟ್​ ಚಾಯ್ಸ್ ಪ್ಲೇಯರ್​ ಆಗಿ ₹23 ಕೋಟಿ ಹಣ ಪಡೆಯಲಿದ್ದಾರೆ. ಇದರಿಂದ ಶೇಕಡ 338ರಷ್ಟು ಹೆಚ್ಚುವರಿ ಹಣ ಪಡೆದಂತಾಗುತ್ತೆ. ಇನ್ನು ಕಳೆದ ಸೀಸನ್ ₹20.5 ಕೋಟಿ ಜೇಬಿಗಿಳಿಸಿದ್ದ ಪ್ಯಾಟ್ ಕಮಿನ್ಸ್​, ಈ ಸಲ ₹18 ಕೋಟಿ ಪಡೆಯೋ ಸಾಧ್ಯತೆ ಇದೆ. ಇದರಿಂದ 12.2ರಷ್ಟು ಕಳೆದುಕೊಳ್ಳುವಂತಾಗುತ್ತೆ. ಇನ್ನು ₹6.5 ಕೋಟಿ ಪಡೆದಿದ್ದ ಅಭಿಷೇಕ್​, 3ನೇ ರಿಟೈನ್ ಆಟಗಾರನಾಗಿ ₹14 ಕೋಟಿ ಪಡೆಯುವ ಸಾಧ್ಯತೆ ಇದೆ. ಇದರಿಂದ ಅಭಿಷೇಕ್ 115ರಷ್ಟು ಹೆಚ್ಚುವರಿ ಹಣ ಪಡೆಯಲಿದ್ದಾರೆ.

ಈ ಮೂವರನ್ನೂ ರಿಟೈನ್​ನಲ್ಲಿ ಉಳಿಸಿಕೊಳ್ಳುವ ಲೆಕ್ಕಚಾರದಲ್ಲಿರುವ ಸನ್ ರೈಸರ್ಸ್, ಆರ್​ಟಿಎಮ್​ ಮೂಲಕ ಟ್ರಾವಿಸ್ ಹೆಡ್​​​​​​​​​​​, ನಿತಿಶ್ ರೆಡ್ಡಿಯನ್ನೂ ವಾಪಾಸ್ ಖರೀದಿಸಲು ಚಿಂತಿಸುತ್ತಿದೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆದ್ರೆ, ಇದಕ್ಕೆ ಕಾರಣ ಭವಿಷ್ಯದ ತಂಡ ಕಟ್ಟುವ ಪ್ಲಾನ್ ಎನ್ನಲಾಗ್ತಿದೆ.

publive-image

ಹೆಡ್ ಬದಲಿಗೆ ಕ್ಲಾಸೆನ್​ ಮೇಲ್ಯಾಕೆ ಸನ್ ರೈಸರ್ಸ್ ಒಲವು..?

ಇದು ಬಹುತೇಕರ ಪ್ರಶ್ನೆಯಾಗಿದೆ. ಯಾಕಂದ್ರೆ, ಕಳೆದ ಸೀಸನ್​ನಲ್ಲಿ ಸನ್ ರೈಸರ್ಸ್ ತಂಡದ ದಿಕ್ಕು ದೆಸೆಯನ್ನೇ ಬದಲಿಸಿದ ಆಟಗಾರ ಟ್ರಾವಿಸ್ ಹೆಡ್. ಈತನ ಸ್ಫೋಟಕ ಆಟ ಎದುರಾಳಿಗಳ ನಿದ್ದೆ ಕೆಡಿಸಿತ್ತು. ಹೀಗಾಗಿ ಟ್ರಾವಿಸ್ ಹೆಡ್ ಫಸ್ಟ್​ ರಿಟೈನ್ ಚಾಯ್ಸ್ ಆಗ್ತಾರೆ ಅನ್ನೋದು ಬಹುತೇಕರ ನಿರೀಕ್ಷೆಯಾಗಿತ್ತು. ಆದ್ರೆ, ಸನ್ ರೈಸರ್ಸ್ ತಂಡದ ಮಿಡಲ್ ಆರ್ಡರ್​ನ ಬಲವಾಗಿರುವ ಕ್ಲಾಸೆನ್​ಗೆ ಮಣೆ ಹಾಕಿದೆ. ಇದಕ್ಕೆ ಕಾರಣ ಕ್ಲಾಸೆನ್​​ ಕನ್ಸಿಸ್ಟೆನ್ಸಿ ಆಟ.

ಕಳೆದ 2 ವರ್ಷಗಳಿಂದ ಸನ್ ರೈಸರ್ಸ್ ಪರ ಕ್ಲಾಸೆನ್, ಗೇಮ್ ಚೇಂಜರ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ 400 ಪ್ಲಸ್ ರನ್ ಚಚ್ಚಿರುವ ಈ ಹಿಟ್ಟರ್, ತಂಡದ ಯಶಸ್ಸಿನ ಹಿಂದಿದ್ದಾರೆ. ಪೇಸರ್ಸ್​ ಆ್ಯಂಡ್ ಸ್ಪಿನ್ನರ್​ಗಳನ್ನ ಸಮಾನವಾಗಿ ದಂಡಿಸುವ ಕ್ಲಾಸೆನ್, ಟ್ರಾವಿಸ್​​ ಹೆಡ್​ಗಿಂತಲೂ ಡೇಂಜರಸ್. ಇದೇ ಕ್ಲಾಸೆನ್​ಗೆ ಫಸ್ಟ್ ಪ್ರಿಪರೆನ್ಸ್ ನೀಡಿರುವ ಹಿಂದಿನ ರಿಯಲ್ ರೀಸನ್ ಎನ್ನಲಾಗ್ತಿದೆ. ಈತನ ಜೊತೆ ಟ್ರಾವಿಸ್ ಹೆಡ್ ಉಳಿಸಿಕೊಂಡ್ರೆ, ಮುಂದಿನ ಸೀಸನ್ ಕೂಡ ರನ್ ಸುನಾಮಿ ಫಿಕ್ಸ್. ಆದ್ರೆ, ಅಂತಿಮ ಕ್ಷಣದಲ್ಲಿ ಏನೆಲ್ಲಾ ನಿರ್ಣಯ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment