ರನ್​ ಬಾರಿಸೋದ್ರಲ್ಲಿ ದಾಖಲೆಗಳ ಸರದಾರ SRH; ಎಷ್ಟು ಬಾರಿ 280ಕ್ಕೂ ಹೆಚ್ಚು ರನ್​​ ಬಾರಿಸಿದೆ..?

author-image
Bheemappa
Updated On
ರನ್​ ಬಾರಿಸೋದ್ರಲ್ಲಿ ದಾಖಲೆಗಳ ಸರದಾರ SRH; ಎಷ್ಟು ಬಾರಿ 280ಕ್ಕೂ ಹೆಚ್ಚು ರನ್​​ ಬಾರಿಸಿದೆ..?
Advertisment
  • 2024ರಲ್ಲಿ RCBಗೆ ಅವಮಾನ ಮಾಡಿದ್ದ ಎಸ್​ಆರ್​ಹೆಚ್ ತಂಡ
  • ಆರ್​ಸಿಬಿ ಹೆಸರಲ್ಲಿ ಇದ್ದ ದಾಖಲೆ ಕಸಿದುಕೊಂಡ ಹೈದ್ರಾಬಾದ್
  • ಪಂದ್ಯದಲ್ಲಿ 280+ ರನ್ ಬಾರಿಸೋದರಲ್ಲಿ ಎಸ್​ಆರ್​ಹೆಚ್ ಎತ್ತಿದ ಕೈ

ಇಡೀ ಐಪಿಎಲ್​ನಲ್ಲಿ ರನ್​ಗಳ ದಾಖಲೆ ಮಾಡುವಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್ ಬಿಟ್ಟರೇ ಬೇರೆ ತಂಡವೇ ಇಲ್ಲ ಅನಿಸುತ್ತದೆ. ಆ ಮಟ್ಟಿಗೆ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್ ರನ್​​ಗಳನ್ನು ಬಾರಿಸುತ್ತಿದೆ. ಒಂದಲ್ಲ, ಎರಡಲ್ಲ ಸಾಲು ಸಾಲು ರನ್​ಗಳ ಶಿಖರಗಳನ್ನು ಕಟ್ಟುತ್ತಿದೆ. ಇದರಿಂದ ಎದುರಾಳಿ ತಂಡಗಳು ಭಯದಲ್ಲೇ ಬೌಲಿಂಗ್ ಮಾಡುತ್ತಿವೆ ಎನ್ನಬಹುದು.

ಸನ್​ರೈಸರ್ಸ್​ ಹೈದ್ರಾಬಾದ್ ತಂಡದಲ್ಲಿ ಈಗ ಬ್ಯಾಟಿಂಗ್​ ಬಲವೇ ಅತ್ಯಂತ ಮುಖ್ಯ ಪಾತ್ರ ವಹಿಸುತ್ತಿದೆ. ಕ್ರೀಸ್​ಗೆ ಬರುವ ಪ್ರತಿ ಬ್ಯಾಟರ್ ಕುಟ್ಟಿ ಕುಟ್ಟಿ ಬ್ಯಾಟಿಂಗ್ ಮಾಡುವುದೇ ಇಲ್ಲ. ಬಂದ ಬಂದವರೇ ಬಾಲ್​ ಮೇಲೆ ಸವಾರಿ ನಡೆಸಲು ಆರಂಭಿಸುತ್ತಾರೆ. ಹೀಗಾಗಿ ಪ್ರತಿ ಸೀಸನ್​ ಅಲ್ಲೂ ಎಸ್​ಆರ್​ಹೆಚ್​ ಭಾರೀ ರನ್​ಗಳ ಹೊಳೆಯನ್ನೇ ಅಹರಿಸುತ್ತಿದೆ. ಎಸ್​ಆರ್​ಹೆಚ್ ಎದುರು ಬೌಲರ್​ಗಳು ಥಂಡಾ ಹೊಡೆಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ರಾಕ್ಷತನದಂತಹ ಬ್ಯಾಟಿಂಗ್ ಪರಾಕ್ರಮ.

2024ರ ಐಪಿಎಲ್​ ಸೀಸನ್​- 17ರಲ್ಲಿ ಆರ್​ಸಿಬಿ ಮೇಲೆ ಬ್ಯಾಟಿಂಗ್ ಶೌರ್ಯ, ಸಾಹಸ ತೋರಿಸಿದ್ದ ಎಸ್​ಆರ್​ಹೆಚ್ ತಂಡ ಕೇವಲ 3 ವಿಕೆಟ್​ಗೆ 287 ರನ್​ಗಳನ್ನು ಗಳಿಸಿದ್ದರು. ಇದು ಈಗಲೂ ಇಡೀ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಆಗಿ ಉಳಿದುಕೊಂಡಿದೆ. ಈ ಸಲ ಐಪಿಎಲ್​ ಸೀಸನ್​- 18ರಲ್ಲಿ ರಾಜಸ್ಥಾನ್​ ಮೇಲೆ ಮುಗಿಬಿದ್ದ ಎಸ್​ಆರ್​ಹೆಚ್ ಟೀಮ್ 286 ರನ್​ಗಳ ಬಾರಿಸಿದೆ. ಇದು 2ನೇ ಅತ್ಯಧಿಕ ರನ್​ ಆಗಿದೆ. ಕೇವಲ ಎರಡೇ 2 ರನ್​ಗಳಿಂದ ತನ್ನ ದಾಖಲೆಯನ್ನ ಉಡೀಸ್ ಮಾಡುವಲ್ಲಿ ಎಡವಿದೆ ಎನ್ನಬಹುದು.

ಇದನ್ನೂ ಓದಿ:0.12 ಸೆಕೆಂಡ್, MS ಧೋನಿ ಸೂಪರ್ ಫಾಸ್ಟ್​ ಸ್ಟಂಪ್ ಔಟ್.. ಸೂರ್ಯ ಕುಮಾರ್ ಬೇಸರ! -Video

publive-image

ಐಪಿಎಲ್​ನಲ್ಲಿ ಅತ್ಯಧಿಕ ರನ್​ ಸಿಡಿಸಿದ ತಂಡಗಳು

  • 287/3- ಆರ್​ಸಿಬಿ ವಿರುದ್ಧ ಹೈದ್ರಾಬಾದ್- 2024
  • 286/6 - ಆರ್​ಆರ್ ವಿರುದ್ಧ ಹೈದ್ರಾಬಾದ್- 2025
  • 277/3 - ಮುಂಬೈ ವಿರುದ್ಧ ಹೈದ್ರಾಬಾದ್- 2024
  • 272/7 - ಡೆಲ್ಲಿ ವಿರುದ್ಧ ಕೆಕೆಆರ್- 2024
  • 266/7 - ಡೆಲ್ಲಿ ವಿರುದ್ಧ ಹೈದ್ರಾಬಾದ್- 2024
  • 263/5 - ಪುಣೆ ವಾರಿಯರ್ಸ್ ವಿರುದ್ಧ ಆರ್​ಸಿಬಿ- 2013

ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಸಿದವರಲ್ಲಿ ಆರ್​ಸಿಬಿಯೇ 2024ರ ವರೆಗೆ ಮೊದಲ ಸ್ಥಾನದಲ್ಲಿ ಇತ್ತು. ಪುಣೆ ವಾರಿಯರ್ಸ್ ವಿರುದ್ಧ 263 ರನ್​ಗಳನ್ನು ಆರ್​ಸಿಬಿ ಗಳಿಸಿದ್ದು ಹೆಚ್ಚು ರನ್ ಆಗಿತ್ತು. ಆದರೆ 2024ರಲ್ಲಿ ಹೈದ್ರಾಬಾದ್ ತಂಡ ಇಡೀ ಐಪಿಎಲ್​ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತು. ಇದರಿಂದ ಕೇವಲ 2024ರಲ್ಲಿ ಮಾತ್ರ ಹೈದ್ರಾಬಾದ್ ತಂಡ, 3 ಬಾರಿ ಅತ್ಯಧಿಕ ರನ್​ಗಳನ್ನು ಗಳಿಸಿ ಐತಿಹಾಸಿಕ ಸ್ಥಾನ ಪಡೆದುಕೊಂಡಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment