ಸಿರಾಜ್​ ದಾಳಿಗೆ ಮಕಾಡೆ ಮಲಗಿದ ಹೈದ್ರಾಬಾದ್ ಬ್ಯಾಟರ್ಸ್​.. ಟಾರ್ಗೆಟ್ ಇಷ್ಟೇನಾ?

author-image
Bheemappa
Updated On
ಸಿರಾಜ್​ ದಾಳಿಗೆ ಮಕಾಡೆ ಮಲಗಿದ ಹೈದ್ರಾಬಾದ್ ಬ್ಯಾಟರ್ಸ್​.. ಟಾರ್ಗೆಟ್ ಇಷ್ಟೇನಾ?
Advertisment
  • ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದ್ರಾಬಾದ್​ಗೆ ಮುಖಭಂಗ
  • ಆರಂಭದಲ್ಲೇ ಓಪನರ್​ಗಳಿಗೆ​ ಶಾಕ್ ಕೊಟ್ಟ ಮೊಹಮ್ಮದ್ ಸಿರಾಜ್
  • ಹೈದ್ರಾಬಾದ್​ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಪಂದ್ಯ

ತವರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಸಿರಾಜ್​ ಬೌಲಿಂಗ್​ ದಾಳಿಗೆ ಸನ್​ರೈಸರ್ಸ್​ ಹೈದ್ರಾಬಾದ್​ ತಂಡ ಅಲ್ಪ ಮೊತ್ತದ ಗುರಿ ನೀಡಿದೆ. ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಹೈದ್ರಾಬಾದ್ 153 ರನ್​ಗಳ ಟಾರ್ಗೆಟ್ ಅನ್ನು ಗುಜರಾತ್​ ಟೈಟನ್ಸ್​ಗೆ ನೀಡಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್​ ಟೈಟನ್ಸ್ ನಾಯಕ ಶುಭಮನ್​ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಹ್ವಾನದಂತೆ ಬ್ಯಾಟಿಂಗ್​ಗೆ ಆಗಮಿಸಿದ ಹೈದ್ರಾಬಾದ್ ಪರ ಓಪನರ್ಸ್​ ಆರಂಭದಲ್ಲೇ ಬಿಗ್ ಶಾಕ್​ಗೆ ಒಳಗಾದರು. ಸ್ಫೋಟಕ ಬ್ಯಾಟ್ಸ್​ಮನ್​ಗಳಾದ ಟ್ರಾವಿಸ್ ಹೆಡ್​ 8 ಹಾಗೂ ಅಭಿಷೇಕ್ ಶರ್ಮಾ 18 ರನ್​ಗೆ ಸಿರಾಜ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದು ಹೈದ್ರಾಬಾದ್​ಗೆ ತುಂಬಲಾರದ ನಷ್ಟವಾಯಿತು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಬಳಿ ಭಾರೀ ಮೌಲ್ಯದ ಡೈಮೆಂಡ್ ಉಂಗುರ.. ಗಿಫ್ಟ್ ಮಾಡಿದ್ದು ಯಾರು..?

publive-image

ಇಶನ್ ಕಿಶನ್ 17 ಹಾಗೂ ನಿತೀಶ್ ಕುಮಾರ್ 31 ಕೆಲ ಹೊತ್ತು ಗುಜರಾತ್ ಬೌಲರ್​ಗಳನ್ನು ಕಾಡಿದರು. ಹೆನ್ರಿಚ್ ಕ್ಲಾಸಿನ್ ಕೂಡ ಉತ್ತಮ ಬ್ಯಾಟಿಂಗ್ ಮಾಡುವಾಗ ಸಾಯಿ ಕಿಶೋರ್ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಕ್ಲಾಸಿನ್ 27 ರನ್​ಗೆ ಔಟ್ ಆದ್ರೆ ಅನಿಕೇತ್ ವರ್ಮಾ ಕೇವಲ 18 ರನ್​ಗೆ ಎಲ್​ಬಿಗೆ ಬಲಿಯಾಗಿ ಪೆವಿಲಿಯನ್ ಸೇರಿದರು. ನಾಯಕ ಕಮಿನ್ಸ್​ 22 ರನ್​ಗಳಿಂದ ಹೈದ್ರಾಬಾದ್ 8 ವಿಕೆಟ್​ಗೆ 153 ರನ್​ಗಳ ಟಾರ್ಗೆಟ್ ಅನ್ನು ಶುಭ್​ಮನ್​ ಗಿಲ್ ಪಡೆಗೆ ನೀಡಿದೆ.

ಗುಜರಾತ್​ ಟೈಟನ್ಸ್ ಪರ ಬೌಲರ್ ಮೊಹಮ್ಮದ್ ಸಿರಾಜ್​ ಅವರ ಅತ್ಯದ್ಭುತವಾದ ಬೌಲಿಂಗ್​ ದಾಳಿಯಿಂದ ಹೈದ್ರಾಬಾದ್ ಚೇತರಿಸಿಕೊಳ್ಳಲು ಆಗಲಿಲ್ಲ. ಏಕೆಂದರೆ ಕ್ರೀಸ್​ನಲ್ಲಿ ಸ್ಟ್ಯಾಂಡ್ ಆಗುತ್ತಿರುವ ಬ್ಯಾಟ್ಸ್​ಮನ್​ಗಳನ್ನ ಸಿರಾಜ್ ಬಲಿ ಪಡೆದರು. ಹೀಗಾಗಿ ಈ ಪಂದ್ಯದಲ್ಲಿ ಸಿರಾಜ್ 4 ಓವರ್ ಮಾಡಿ ಕೇವಲ 17 ರನ್​ ನೀಡಿ ಅತೀ ಮುಖ್ಯವಾದ 4 ವಿಕೆಟ್ ಪಡೆದು ಖುಷಿ ಪಟ್ಟರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment