newsfirstkannada.com

SRH: ಇವರನ್ನ ಕಟ್ಟಿಹಾಕೋದೆ ಕೆಕೆಆರ್​ಗಿರುವ ಬಿಗ್​ ಚಾಲೆಂಜ್​.. ಟ್ರೋಫಿ ಗೆಲ್ಲೋಕೆ ಪ್ಲಾನ್​ ಮಾಡಿದ್ದಾರೆ ಇವ್ರು!

Share :

Published May 26, 2024 at 2:21pm

    ಮೆಗಾ ಫೈನಲ್​​ನಲ್ಲಿ KKR-SRH ಮುಖಾಮುಖಿ

    8 ವರ್ಷಗಳ ನಂತ್ರ ಟ್ರೋಫಿ ಕನವರಿಕೆಯಲ್ಲಿ SRH ತಂಡ

    ಚೆಪಾಕ್​ ಮೈದಾನದಲ್ಲಿ ಟ್ರೋಫಿ ಗೆಲ್ಲೋಕೆ ಕಾವ್ಯ ಮಾರನ್​ ಪ್ಲಾನ್​

2024ನೇ ಐಪಿಎಲ್​​ ಅಧಿಪತಿ ಯಾರು ? ಈ ಸಿಂಹಾಸನ ಪಟ್ಟಕ್ಕೆ ಇಂದು ಚೆಪಾಕ್​ನಲ್ಲಿ ಬಿಗ್ ಫೈಟ್​ ನಡೆಯಲಿದೆ. ಕೆಕೆಆರ್​​​​​ ಕಪ್​ ನಮ್ದೆ ಅಂತ ಆತ್ಮವಿಶ್ವಾಸದಲ್ಲಿದೆ. ಆದ್ರೆ ಹೈದರಾಬಾದ್​ ಒಂದು ಕೈ ನೋಡೆ ಬಿಡೋಣ ಅಂತಿದೆ. 2016 ರಿಂದ ಇದ್ರೂ ಇಲ್ಲದಂತಿದ್ದ ಆರೆಂಜ್​ ಆರ್ಮಿ, ಈ ಸಲ ಫೈನಲ್​​ ರೇಸ್​​ಗೆ ಎಂಟ್ರಿಕೊಟ್ಟಿದ್ದೇಗೆ ? ಅದಕ್ಕೆ ಕಾರಣಗಳೇನು ? ಬನ್ನಿ ನೋಡೋಣ.

ಐಪಿಎಲ್​ ಅಧಿಪತಿ ಪಟ್ಟಕ್ಕೆ ಏರಲು ಉಳಿದಿರೋದು, ಇನ್ನು ಒಂದೇ ಒಂದು ಹೆಜ್ಜೆ. ಇಂದು ನಡೆಯುವ ಫೈನಲ್​ ಹಂಗಾಮದಲ್ಲಿ, ಡೇಂಜರಸ್​​ ಹೈದರಾಬಾದ್​ ತಂಡ ಕೆಕೆಆರ್​​​​​​​​​​​​​​ ಅನ್ನ ಎದುರಿಸಲಿದೆ. 2016ರ ನಂತರ ಆರೆಂಜ್​ ಆರ್ಮಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. 8 ವರ್ಷಗಳಿಂದ ಆಘಾತ ಮೇಲೆ ಆಘಾತ ಕಂಡಿದ್ದ ಹೈದ್ರಾಬಾದ್,​​​​ ಈ ಸಲ ಕಪ್​ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ಹಾಗಾದ್ರೆ ಫ್ಯಾನ್ಸ್ ಕಮಿನ್ಸ್ ಬಳಗದ ಫೈನಲ್​​ಗೆ ಎಂಟ್ರಿಕೊಡಲು ಕಾರಣಗಳೇನು ಅನ್ನೋದನ್ನ ತಿಳಿಯೋಣ.

ಹೆಡ್-ಅಭಿಷೇಕ್ ಶರ್ಮಾ ಭರ್ಜರಿ ಜೊತೆಯಾಟ

ಅಭಿಷೇಕ್​ ಶರ್ಮಾ ಹಾಗೂ ಟ್ರಾವಿಸ್ ಹೆಡ್​​ರ​​ ಸ್ಫೋಟಕ ಆಟವೇ, ಹೈದ್ರಾಬಾದ್​​ಗೆ ಟ್ರೋಫಿ ಆಸೆ ಚಿಗುರಿಸಿದೆ. ಉಭಯ ಜೋಡಿ ಟೂರ್ನಿಯಲ್ಲಿ ವಿಧ್ವಂಸಕ ಆಟವಾಡ್ತಿದೆ. 15 ಇನ್ನಿಂಗ್ಸ್​ಗಳಿಂದ ಇಬ್ಬರೂ ಆರಂಭಿಕರಾಗಿ, 482 ರನ್​ ಚಚ್ಚಿದ್ದಾರೆ. 3 ಬಾರಿ ಅರ್ಧಶತಕದ ಆಟವಾಡಿದ್ದು, ಫೈನಲ್​​ ಬ್ಯಾಟಲ್​ನಲ್ಲು ಇವರ ಮೇಲೆ ಭಾರೀ ನಿರೀಕ್ಷೆ ಇದೆ.

ಮಿಡಲ್ ಆರ್ಡರ್​​ನಲ್ಲಿ ಕ್ಲಾಸೆನ್ ಆರ್ಭಟ

ಹೆನ್ರಿಚ್ ಕ್ಲಾಸೆನ್,​​​ ಹೈದ್ರಾಬಾದ್​​ನ ಬಿಗ್ಗೆಸ್ಟ್​​​​ ಬ್ಯಾಟಿಂಗ್ ವೆಪನ್​​​​. ಮಧ್ಯಮ ಕ್ರಮಾಂಕದಲ್ಲಿ ಬೌಲರ್​​​​ಗಳಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಎಲ್ಲಾ ಸನ್ನಿವೇಶದಲ್ಲೂ ನಿರ್ಭೀತಿ ಆಟವಾಡ್ತಿರೋ ಕ್ಲಾಸೆನ್,​​ ಈವರೆಗೆ 207.75 ಸ್ಟ್ರೈಕ್​ರೇಟ್​ನಲ್ಲಿ 463 ರನ್ ಗಳಿಸಿದ್ದಾರೆ. ಇಂದು ಕೂಡ ಕ್ಲಾಸೆನ್ ಕಟ್ಟಿಹಾಕುವುದು, ಕೆಕೆಆರ್​ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ.

ನಿತೀಶ್ ರೆಡ್ಡಿ, ಶಹಬಾಜ್, ಸಮದ್ ಕಾಣಿಕೆ

ಹೈದ್ರಾಬಾದ್​ ಫೈನಲ್​ ತಲುಪಲು, ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್​​​ ಹಾಗೂ ಅಬ್ದುಲ್ ಸಮಾದ್​​​​​​ ಪಾತ್ರ ದೊಡ್ಡದಿದೆ. ನಿತೀಶ್​ ಕುಮಾರ್​ 290 ರನ್​ ಜೊತೆ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗ್ತಿದ್ದಾರೆ. ಶಹಬಾಜ್ ಮತ್ತು ಸಮಾದ್​ ಕೂಡ ಸ್ಲಾಗ್ ಓವರ್​ಗಳಲ್ಲಿ ಆರ್ಭಟಿಸಿ, ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ.

ಎಡಗೈ ವೇಗಿ ನಟರಾಜನ್ ಸೂಪರ್ ಸ್ಪೆಲ್

ಟಿ ನಟರಾಜನ್​​​​​​​. ಪ್ರಸಕ್ತ ಐಪಿಎಲ್​ನಲ್ಲಿ ಅದ್ಭುತ ದಾಳಿ ನಡೆಸ್ತಿದ್ದಾರೆ. ಬ್ಯಾಟರ್​ಗಳನ್ನ ಕಂಗೆಡಿಸುವ ನಟರಾಜನ್, 19 ವಿಕೆಟ್ ಬೇಟೆಯಾಡಿದ್ದಾರೆ. ಹೈದ್ರಾಬಾದ್ ಪರ ಇವರೇ ಟಾಪ್​ ವಿಕೆಟ್ ಟೇಕರ್​​. ಇಂದು ತವರಿನ ಚೆಪಾಕ್​ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ನಟ್ಟು ಇನ್ನಷ್ಟು ಡೇಂಜರಸ್ ಆಗಿ ಪರಿಣಮಿಸಬಲ್ಲರು.

ಪ್ಯಾಟ್ ಕಮ್ಮಿನ್ಸ್ ಅತ್ಯಾದ್ಭುತ ನಾಯಕತ್ವ

ಪ್ಯಾಟ್​ ಕಮಿನ್ಸ್​ ಹೈದರಾಬಾದ್ ಚುಕ್ಕಾಣಿ ಹಿಡಿದ ಬಳಿಕ, ತಂಡದ ಚರಿಷ್ಮವೇ ಬದಲಾಗಿದೆ. ಆರಂಭದಲ್ಲೆ ಹೇಳಿದಂತೆ, ಇಡೀ ತಂಡ ಅಗ್ರೆಸ್ಸಿವ್​​ ಅಪ್ರೋಚ್​ ತೋರಿಸ್ತಿದೆ. ಆನ್​ಫೀಲ್ಡ್​ನಲ್ಲಿ ಕಮಿನ್ಸ್​ ಕ್ಯಾಪ್ಟನ್ಸಿ ಅದ್ಭುತ. ಎದುರಾಳಿ ತಂಡದ ವೀಕ್ನೆಸ್​​​​ಗೆ ತಕ್ಕಂತೆ ಸ್ಟ್ರಾಟಜಿ ರೂಪಿಸ್ತಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕಮಿನ್ಸ್,​​ 8 ವರ್ಷಗಳ ಬಳಿಕ ಹೈದ್ರಾಬಾದ್​​ ತಂಡವನ್ನ ಚಾಂಪಿಯನ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: KKR: ಈ ಬೌಲರ್ಸ್​ ಭಾರೀ ಡೇಂಜರ್ಸ್ ಗುರೂ..​ ಇವ್ರು ಸಿಡಿದೆದ್ರೆ SRH ತಂಡಕ್ಕೆ ಸೋಲು ಗ್ಯಾರೆಂಟಿ!

ಒಟ್ಟಿನಲ್ಲಿ ಬಲಾಢ್ಯ ಕೆಕೆಆರ್​​ಗೆ ಫೈನಲ್​ನಲ್ಲಿ ಬಲಿಷ್ಠ ಹೈದ್ರಾಬಾದ್​ ಎದುರಾಳಿಯಾಗಿದೆ. ಆಕ್ರಮಣಕಾರಿ ಆಟ ತಂಡದ ಬಿಗ್ಗೆಸ್ಟ್​​​ ಸ್ಟ್ರೆಂಥ್​​​​. ಈ ತಂತ್ರ ಫೈನಲ್​​​​​ನಲ್ಲಿ ವರ್ಕ್​ ಆಗುತ್ತಾ? 8 ವರ್ಷಗಳ ನಂತರ ಎಸ್​ಆರ್​ಎಚ್ ಟ್ರೋಫಿ ಎತ್ತಿ ಹಿಡಿಯುತ್ತಾ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

SRH: ಇವರನ್ನ ಕಟ್ಟಿಹಾಕೋದೆ ಕೆಕೆಆರ್​ಗಿರುವ ಬಿಗ್​ ಚಾಲೆಂಜ್​.. ಟ್ರೋಫಿ ಗೆಲ್ಲೋಕೆ ಪ್ಲಾನ್​ ಮಾಡಿದ್ದಾರೆ ಇವ್ರು!

https://newsfirstlive.com/wp-content/uploads/2024/05/SRH-2.jpg

Load More