/newsfirstlive-kannada/media/post_attachments/wp-content/uploads/2025/04/SRH_PBKS.jpg)
ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಪಂಜಾಬ್​ ಕಿಂಗ್ಸ್​ ಇದುವರೆಗೆ ಆಡಿದ ಪಂದ್ಯಗಳಲ್ಲಿ ಒಂದು ಮಾತ್ರ ಸೋತಿದೆ. ಆದರೆ 300 ರನ್​ಗಳ ಗಡಿ ಇಟ್ಟುಕೊಂಡು ಐಪಿಎಲ್​ ಅಖಾಡಕ್ಕೆ ಧುಮುಕಿದ್ದ ಹೈದ್ರಾಬಾದ್​ ಒಂದು ಪಂದ್ಯ ಗೆದ್ದು ಎಲ್ಲ ಪಂದ್ಯಗಳಲ್ಲಿ ಡುಮುಕಿ ಹೊಡೆದಿದೆ. ಇಂದು ಸಂಜೆ ನಡೆಯುವ ಪಂದ್ಯದಲ್ಲಿ ಹೈದ್ರಾಬಾದ್ ಗೆಲುವಿನ ಟ್ರ್ಯಾಕ್​ಗೆ ಮರಳಲು ಕಾಯುತ್ತಿದೆ.
ಪಂಜಾಬ್ ಕಿಂಗ್ಸ್​ ಮೇಲೆ ಸವಾರಿ ಮಾಡೋಕೆ ಹೈದ್ರಾಬಾದ್​ ರೆಡಿಯಾಗಿದೆ. ಮೊದಲ ಪಂದ್ಯದಲ್ಲಿ ಸಾಲಿಡ್ ಆಟವಾಡಿದ್ದ ಸನ್ ರೈಸರ್ಸ್ ಕಳೆದ 4 ಪಂದ್ಯಗಳಿಂದ ಸೋಲಿನ ಸುಳಿಯಲ್ಲಿ ನರಳಾಡುತ್ತಿದೆ. ಟಾರ್ಗೆಟ್ 300 ಎಂಬ ಮಿಷನ್​ನಲ್ಲಿ ಸತತ ವೈಫಲ್ಯ ಅನುಭವಿಸ್ತಿರುವ ಸನ್​ ರೈಸರ್ಸ್​ಗೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶನ್ ಕಿಶನ್, ನಿತಿಶ್ ಕುಮಾರ್ ರೆಡ್ಡಿಯ ಫ್ಲಾಫ್ ಶೋ ಕಗ್ಗಂಟ್ಟಾಗಿ ಮಾರ್ಪಟ್ಟಿದೆ.
/newsfirstlive-kannada/media/post_attachments/wp-content/uploads/2024/05/SRH.jpg)
ಇವತ್ತು ಸನ್ ರೈಸ್ ಆಗಬೇಕಾದ್ರೆ ಒಗ್ಗಟ್ಟಿನ ಆಟ ಬಹುಮುಖ್ಯ. ಸನ್ ರೈಸರ್ಸ್ ತಂಡ ಎದುರಿಸ್ತಿರುವ ಪಂಜಾಬ್​ಗೂ ಗೆಲುವೇನೂ ಸುಲಭವಾಗಿಲ್ಲ. ಕಳೆದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಹೊರತು ಉಳಿದೆಲ್ಲ ಬ್ಯಾಟರ್​ಗಳು ಹೀನಾಯ ವೈಫಲ್ಯ ಕಂಡಿದ್ದರು. ಪ್ರಿಯಾಂಶ್​ ಆರ್ಯ ಭರ್ಜರಿ ಶತಕದಿಂದ ಪಂಜಾಬ್ 18 ರನ್​ಗಳ ಅಂತರದಲ್ಲೇ ಚೆನ್ನೈ ವಿರುದ್ಧ ಗೆಲುವು ಪಡೆದಿತ್ತು.
ಇಂದಿನ ಪಂದ್ಯದಲ್ಲಿ ಪಂಜಾಬ್ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್, ಆಲ್​ರೌಂಡರ್​ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯ್ನಿಸ್ ಇಂದು ಕಮ್​ಬ್ಯಾಕ್ ಮಾಡಬೇಕಿದೆ. ಬೌಲರ್​ಗಳು ಅರ್ಷ್​ದೀಪ್ ಸಿಂಗ್ ಹಾಗೂ ಲೂಕಿ ಫರ್ಗೂಸನ್ ಪೇಸ್ DUO ಸಖತ್ ವರ್ಕ್ ಆಗ್ತಿದೆ. ಇವರಿಬ್ಬರ ಮಾರಕ ದಾಳಿಯ ಜೊತೆಗೆ ಸ್ಪಿನ್ನರ್​​​ ಯಜುವೇಂದ್ರ ಚಹಲ್ ಮ್ಯಾಜಿಕ್ ಮಾಡಿದ್ರೆ ಪಂಜಾಬ್​​, ಹೈದ್ರಾಬಾದ್​​ಗೆ ದೊಡ್ಡ ಪಂಚ್​ ಕೊಡೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us