ಗ್ರಾಮೋದ್ಯೋಗ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ಆಶ್ರಯ; ಸಿರಿ ಸಂಸ್ಥೆ ಬೆಳೆದು ಬಂದ ಹಾದಿ

author-image
Ganesh Nachikethu
Updated On
ಗ್ರಾಮೋದ್ಯೋಗ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ಆಶ್ರಯ; ಸಿರಿ ಸಂಸ್ಥೆ ಬೆಳೆದು ಬಂದ ಹಾದಿ
Advertisment
  • ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ..!
  • ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ
  • ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿರಿ ಸಂಸ್ಥೆ

ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ರಿ.) ಗ್ರಾಮೀಣ ಮಹಿಳೆಯರ ಸಶಕ್ತಿಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಲಾಭರಹಿತ ಉದ್ದೇಶಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ 2000 ಸ್ವ-ಸಹಾಯ ಗುಂಪುಗಳ ಮಾಲಿಕತ್ವ ಹೊಂದಿರುವ ಕಲಂ 8ರ ಕಂಪನಿ ಕಾಯಿದೆ 2013ರ ಅಡಿಯಲ್ಲಿ ನೋಂದಾವಣೆಗೊಂಡ ಸಂಸ್ಥೆಯಾಗಿದೆ. ಸಿರಿ ಸಂಸ್ಥೆಯು ಯಾವುದೇ ಲಾಭದ ಉದ್ದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಆದಾಯ ತೆರಿಗೆ ಕಾಯಿದೆ-1961ರ ಅಡಿಯಲ್ಲಿ ವಿಶೇಷವಾಗಿ ಕೊಡಲ್ಪಡುವ ಕಲಂ 12ಎ ಮತ್ತು ಕಲಂ 80ಜಿಯ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿದೆ.

ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರಗಳ ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸಿನ ನೆರವಿನೊಂದಿಗೆ 2004ನೇ ಇಸವಿಯಲ್ಲಿ ಅರಂಭವಾದ ಸಿರಿ ಸಂಸ್ಥೆಯ ಉತ್ಪನ್ನಗಳನ್ನು ರಾಜ್ಯದಾದ್ಯಂತ ಸಿರಿ ಬ್ರ್ಯಾಂಡ್​​ನಲ್ಲಿ ಮಾರಾಟ ಮಾಡುತ್ತಿದೆ.

ಯಾವುದೇ ರೀತಿಯ ವಿಶೇಷ ತಜ್ಞತೆಯಿಲ್ಲದ ಗ್ರಾಮೀಣ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡಿ ಅವರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ಮಾಡುವುದು ಸಿರಿಯ ವಿಶೇಷತೆಯಾಗಿದ್ದು, ಸಿರಿ ಸಂಸ್ಥೆಯ ಸಿಬ್ಬಂದಿಗಳಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಮುದಾಯಕ್ಕೆ ಸೇರಿದ ಮಹಿಳೆಯರೂ ಸೇರಿದಂತೆ ಗ್ರಾಮೀಣ ಭಾಗದ ಬಡ ಹೆಣ್ಣುಮಕ್ಕಳೇ ಕಾರ್ಯನಿರ್ವಹಿಸುತ್ತಿರುವುದರಿಂದ ಸುಮಾರು 1000ಕ್ಕೂ ಹೆಚ್ಚು ಇಂತಹ ಮಹಿಳಾ ಸಿಬ್ಬಂದಿಗಳನ್ನು ಹೊಂದಿರುವ ಸಿರಿ ಸಂಸ್ಥೆಯು ಪ್ರತ್ಯಕ್ಷ /ಪರೋಕ್ಷವಾಗಿ 5000ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಶ್ರಯ ನೀಡಿ ಅವರ ಬಾಳು ಹಸನಾಗಿಸುವಲ್ಲಿ ಶ್ರಮಿಸುತ್ತಿದೆ.

ಸಿರಿ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಇರುವ ಹಳ್ಳಿ ಪ್ರದೇಶಗಳಲ್ಲಿರುವ ಗ್ರಾಹಕರಿಗೂ ಸಿರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿರುವ ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಸಿರಿ ಉತ್ಪನ್ನಗಳು ಪೂರೈಕೆಯಾಗಲು ಸಹಕಾರಿಯಾಗುವಂತೆ ಧಾರವಾಡದ ರಾಯಪುರದಲ್ಲಿ ಸಿರಿ ಸಂಸ್ಥೆಯ ವತಿಯಿಂದ ಪ್ರತ್ಯೇಕವಾಗಿ ಗೋದಾಮು ಸ್ಥಾಪಿಸಲಾಗಿರುತ್ತದೆ. ಅಂತೆಯೇ ದಕ್ಷಿಣ ಕರ್ನಾಟಕ ಭಾಗಕ್ಕೆ ಸಿರಿ ಉತ್ಪನ್ನ ಮತ್ತು ಸಿರಿಧಾನ್ಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ವಲಯವನ್ನು ಕೇಂದ್ರೀಕರಿಸಿ, ಸದ್ರಿ ವಲಯದಲ್ಲಿರುವ ಸೂಪರ್ ಸ್ಟಾಕಿಸ್ಟಾರರು, ವಿತರಕರು ಹಾಗೂ ರಿಟೇಲ್ ಮಾರಾಟ ಮಳಿಗೆಗಳಿಗೆ ಬೇಡಿಕೆಗನುಗುಣವಾಗಿ ಕ್ಲಪ್ತ ಸಮಯದಲ್ಲಿ ಉತ್ಪನ್ನಗಳನ್ನು ಸರಬರಾಜು ಮಾಡುವ ಸಲುವಾಗಿ ಬೆಂಗಳೂರಿನಲ್ಲಿ ಸಿರಿ ಗೋದಾಮು ತೆರೆಯಲು ಉದ್ದೇಶಿಸಲಾಗಿರುತ್ತದೆ.

ಪ್ರಸ್ತುತ ಸಿರಿ ಸಂಸ್ಥೆಯಲ್ಲಿ ವಾರ್ಷಿಕ ರೂ.30.00 ಕೋಟಿ ಮೊತ್ತದ ವ್ಯವಹಾರ ನಡೆಯುತ್ತಿದ್ದು, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಸಿರಿ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದೆಲ್ಲೆಡೆ ಸಿರಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

publive-image

ಸ್ವ ಉದ್ಯೋಗಕ್ಕೆ ಉತ್ತೇಜನ

ಸಿರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರಮುಖವಾಗಿ ಯುವಕ - ಯುವತಿಯರಿಗೆ ತಮ್ಮದೇ ಆದ ಅಂಗಡಿ ಮಳಿಗೆಯನ್ನು ತೆರೆದು, ಸಿರಿ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ವ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತಾ ಬಂದಿದೆ. ಒಟ್ಟಿನಲ್ಲಿ ಸಿರಿ ಸಂಸ್ಥೆಯ ಉತ್ಪನ್ನಗಳು, ಸಿರಿಧಾನ್ಯಗಳಿಗೆ ರಾಜ್ಯಾದ್ಯಂತ ಬಹುಬೇಡಿಕೆಯಿದ್ದು, ಸಿರಿ ಗ್ರಾಹಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.

ಸಿರಿ ಸಂಸ್ಥೆಯ ವಿವಿಧ ಉತ್ಪನ್ನಗಳ ಉತ್ಪಾದನಾ ಘಟಕಗಳು

ಆಹಾರೋತ್ಪನ್ನಗಳು: ಪ್ರಮುಖವಾಗಿ ಕೋಕಮ್ ಜ್ಯೂಸ್, ಅಕ್ಕಿರೊಟ್ಟಿ, ಪುಷ್ಠಿ(ಪೌಷ್ಠಿಕ ಆಹಾರ), ಮೆಣಸಿನಹುಡಿ, ಪುಳಿಯೊಗರೆ ಪುಡಿ, ಸಾಂಬಾರ್ ಪುಡಿ, ಗರಂ ಮಸಾಲ, ರಸಂ ಪುಡಿ, ಪಲಾವ್ ಮಸಾಲೆ, ಬಿಸಿಬೇಳೆ ಬಾತ್, ಉಪ್ಪಿಟ್ಟು ಮಿಕ್ಸ್, ರವೆ ಇಡ್ಲಿ ಮಿಕ್ಸ್, ಬಾದಾಮಿ ಹಾಲು ಮಿಕ್ಸ್, ಕೊಬ್ಬರಿ ಎಣ್ಣೆ, ಜೇನುತುಪ್ಪ ಹಾಗೂ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಶುಚಿಕಾರಕಗಳು: ವಿವಿಧ ಸುವಾಸನೆಯ ಫಿನಾಯಿಲ್‌ಗಳು, ಲಿಕ್ವಿಡ್ ಸೋಪ್‌ಗಳಾದ ಹ್ಯಾಂಡ್ ವಾಷ್, ಫ್ಲೋರ್ ವಾಷ್, ವೆಹಿಕಲ್ ವಾಷ್ ಮತ್ತು ಡಿಶ್ ವಾಷ್‌ಗಳು, ಬ್ಲೀಚಿಂಗ್ ಪೌಡರ್, ಡಿಶ್‌ವಾಷ್ ಪೌಡರ್, ಡಿಟರ್ಜೆಂಟ್ ಸೋಪ್, ಡಿಟರ್ಜೆಂಟ್ ಪೌಡರ್‌ಗಳನ್ನು ತಯಾರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ದೊಂಡೋಲೆ, ಬೆಳಾಲು, ಗೇರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಗರಬತ್ತಿಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ಉದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆಯರಿಗೆ ಅದಕ್ಕೆ ಪೂರಕವಾಗಿ ಅಗರಬತ್ತಿ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ಸಿರಿ ಸಂಸ್ಥೆಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಗರ್ಡಾಡಿ, ನೈನಾಡು, ಪೆರಿಯಡ್ಕ, ನಾವೂರು, ತುಂಬೆ ಮುಂತಾದ ಸ್ಥಳಗಳಲ್ಲಿ ಅಗರಬತ್ತಿ ಉತ್ಪನ್ನಗಳ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ರೋಸ್, ಶ್ರೀಗಂಧ, ಚಂಪಾ, ಮೋಗ್ರ, ಫ್ಯಾನ್ಸಿ ಇಂಟಿಮೆಟ್, ವಿಭೂತಿ ಸುವಾಸನೆಯ ಒಟ್ಟು 22 ಬಗೆಯ ಅಗರಬತ್ತಿಗಳನ್ನು ರೋಲ್, ಪೌಚ್ ಹಾಗೂ ಪ್ಯಾಕೆಟ್‌ಗಳಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ.

ಸಿದ್ಧ ಉಡುಪುಗಳು : ಪುರುಷರಿಗಾಗಿ ಫಾರ್ಮಲ್​​ ಶರ್ಟುಗಳು, ಕುರ್ತಾ, ಸಾಂಪ್ರದಾಯಿಕ ಉಡುಗೆಗಳು, ಬರ್ಮುಡಾ, ಜೀನ್ಸ್ ಪ್ಯಾಂಟ್‌ಗಳು ಹಾಗೂ ಫಾರ್ಮಲ್ ಪ್ಯಾಂಟ್‌ಗಳನ್ನು ಸಿರಿ ಸಂಸ್ಥೆಯು ಉತ್ಪಾದನೆ ಮಾಡುತ್ತಿದೆ. ಅದೇ ರೀತಿ ಮಹಿಳೆಯರಿಗಾಗಿ ಕುರ್ತಿಗಳು, ಟಾಪ್ಸ್, ನೈಟಿ, ಸೀರೆ, ಸ್ಕರ್ಟ್ ಮುಂತಾದವುಗಳನ್ನು ಉತ್ಪಾದಿಸಲಾಗುತ್ತಿದ್ದು, ಹಾವೇರಿ ಜಿಲ್ಲೆಯ ಚಿಕ್ಕಾಂಶಿ, ಧಾರವಾಡ ಜಿಲ್ಲೆಯ ಪಶುಪತಿಹಾಳ, ಕಣವಿಹೊನ್ನಾಪುರ, ಗದಗ ಜಿಲ್ಲೆಯ ಸೊರಟೂರು ಮುಂತಾದ ಸ್ಥಳಗಳಲ್ಲಿ ಸುಸಜ್ಜಿತವಾದಂತಹ ಸಿದ್ಧ ಉಡುಪು ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಸಿರಿ ಸಂಸ್ಥೆಯನ್ನು ಖಾದಿ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಿಸಲ್ಪಟ್ಟಿದ್ದು, ಸಿರಿಯ ಖಾದಿ ಉತ್ಪನ್ನಗಳಿಗೆ ಜನರಿಂದ ಉತ್ತಮ ಬೇಡಿಕೆ ಬರುತ್ತಿದೆ.

ರೆಕ್ಸಿನ್ ಬ್ಯಾಗುಗಳು: ಸ್ಕೂಲ್ ಬ್ಯಾಗ್, ಎಕ್ಸಿಕ್ಯೂಟಿವ್ ಬ್ಯಾಗ್, ಫೈಲ್ ಬ್ಯಾಗ್, ಲಗೇಜ್ ಬ್ಯಾಗ್, ಲ್ಯಾಪ್‌ಟಾಪ್ ಬ್ಯಾಗುಗಳು, ಬೇಡಿಕೆಯ ಮೇರೆಗೆ ವಿವಿಧ ವಿನ್ಯಾಸದ ರೆಕ್ಸಿನ್ ಬ್ಯಾಗ್‌ಗಳನ್ನು ಸಿರಿ ಸಂಸ್ಥೆಯಲ್ಲಿ ತಯಾರಿಸಿ ಕೊಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಹೊಸ್ಮಾರು, ಕೊಕ್ಕಡ, ಕೊಕ್ರಾಡಿ ಮುಂತಾದ ಸ್ಥಳಗಳಲ್ಲಿ ರೆಕ್ಸಿನ್ ಬ್ಯಾಗ್ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದೆ.

ಸಿರಿಧಾನ್ಯ ಸಂಸ್ಕರಣಾ ಘಟಕ: ಧಾರವಾಡ ಜಿಲ್ಲೆೆಯ ರಾಯಪುರದಲ್ಲಿ ಸುಸಜ್ಜಿತವಾದ ಸಿರಿಧಾನ್ಯ ಘಟಕವನ್ನು ಆರಂಭಿಸಿದ್ದು, ಸಿರಿ ಸಂಸ್ಥೆಯು ಸಾವೆ, ಕೊರಲೆ, ನವಣೆ, ರಾಗಿ, ಜೋಳ, ಊದಲು, ಸಜ್ಜೆ, ಹಾರಕ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ರಾಜ್ಯದಾದ್ಯಂತ ಗ್ರಾಹಕರಿಗೆ 1 ಕೆ.ಜಿ ಹಾಗೂ ಬಲ್ಕ್ ಪ್ಯಾಕೆಟ್‌ಗಳಲ್ಲಿ ತಲುಪಿಸಲಾಗುತ್ತಿದೆ.

ಸಿರಿಧಾನ್ಯಗಳ ವಿವಿಧ ಬೇಕರಿ ಉತ್ಪನ್ನಗಳು: ಧಾರವಾಡ ಜಿಲ್ಲೆಯ ರಾಯಪುರದಲ್ಲಿರುವ ಸಿರಿಧಾನ್ಯಗಳ ಸಂಸ್ಕರಣಾ ಘಟಕದಲ್ಲಿ ರಸ್ಕ್, ಬ್ರೆಡ್, ಕುಕ್ಕೀಸ್ ಸೇರಿದಂತೆ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು ನಿವಾರಕ ಹಾಗೂ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ, ಹೃದಯಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಮಿಲೆಟ್ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.

ಸಿರಿ ಮಿಲ್ಲೆಟ್ ಕೆಫೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಏಕೈಕ ಸಿರಿಧಾನ್ಯದ ಉಪಹಾರ ಗೃಹ. ಇಲ್ಲಿ ಶುಚಿ-ರುಚಿಯಾದ ಆರೊಗ್ಯಕರ ಸಿರಿಧಾನ್ಯಗಳ ಭೋಜನ ಮತ್ತು ಖಾದ್ಯಗಳ ಜೊತೆಗೆ ಮಕ್ಕಳಿಗೆ ಆಟದ ಮೈದಾನದ ವ್ಯವಸ್ಥೆಯೂ ಇದೆ.

ಸ್ವಂತ ಮಳಿಗೆಗಳು: ಸಿರಿ ಸಂಸ್ಥೆಯು ತನ್ನದೇ ಆದ 14 ಮಳಿಗೆಗಳನ್ನು ಹೊಂದಿದ್ದು, ಈ ಮೂಲಕ ಸಿರಿ ಉತ್ಪನ್ನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತು ಧಾರವಾಡ, ಹಾಸನ, ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳ ವಠಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.

⦁ ಸಿರಿ ಲೈನ್‌ಸೇಲ್​ಗಳು: ರಾಜ್ಯದಾದ್ಯಂತ 11 ಸಿರಿ ವಾಹನಗಳ ಮೂಲಕ ರಿಟೈಲ್ ಮಳಿಗೆಗಳಿಗೆ ಸಿರಿ ಉತ್ಪನ್ನಗಳನ್ನು ಲೈನ್‌ಸೇಲ್ ಮಾಡಲಾಗುತ್ತಿದೆ. ಅಂತೆಯೇ ಸಿರಿ ಸಂಚಾರಿ ಮಾರಾಟ ವಾಹನದಲ್ಲಿಯೂ ಗ್ರಾಹಕರಿಗೆ ಸಿರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.

ಫ್ರಾಂಚೈಸಿ ಮಳಿಗೆಗಳು :- ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಯುವಕ ಯುವತಿಯರು ನಗರ ಪ್ರದೇಶದಲ್ಲಿ ಸಿರಿ ಫ್ರಾಂಚೈಸಿ ಮಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮೀಣ ಸಿರಿ ಮಳಿಗೆಗಳನ್ನು ತೆರೆದು, ಸಿರಿ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ವ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ.

ವಿತರಕರ ಜಾಲ:- ಸಿರಿ ಸಂಸ್ಥೆಯ ಉತ್ಪನ್ನಗಳನ್ನು ಗ್ರಾಹಕರಿಗೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಸಿರಿ ಸಂಸ್ಥೆಯಿಂದ ವಿತರಕರ ಜಾಲವನ್ನು ವಿಸ್ತರಿಸಲಾಗಿದ್ದು, ಈಗಾಗಲೇ ರಾಜ್ಯದಾದ್ಯಂತ 18 ಸೂಪರ್ ಸ್ಟಾಕಿಸ್ಟಾರರು ಹಾಗೂ 160ಕ್ಕೂ ಅಧಿಕ ವಿತರಕರನ್ನು ಆಯ್ಕೆ ಮಾಡಿ ಇವರುಗಳ ಮುಖಾಂತರ ಸಿರಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ.

publive-image

⦁ ಸಿರಿ ಬ್ರ್ಯಾಂಡ್​ ಅಂಬಾಸಿಡರ್ ಶ್ರೀ ರಮೇಶ್ ಅರವಿಂದ್:

ರಾಜ್ಯದೆಲ್ಲೆಡೆ ಸಿರಿ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವ ಸಲುವಾಗಿ ಎಸ್.ಕೆ.ಡಿ.ಆರ್.ಡಿ.ಪಿ ಬಿ.ಸಿ ಟ್ರಸ್ಟ್ ಸಹಯೋಗದೊಂದಿಗೆ ಸ್ಥಳೀಯ ಹಾಗೂ ಮುಖ್ಯ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆಗಳಲ್ಲಿ, ಟಿ.ವಿ ಮಾಧ್ಯಮಗಳಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ ಬ್ರ್ಯಾಂಡಿಂಗ್​​, ಆಟೋ ರಿಕ್ಷಾ ಬ್ರ್ಯಾಂಡಿಂಗ್​ ಸೇರಿದಂತೆ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಸಿರಿ ಉತ್ಪನ್ನಗಳು, ಸಿರಿ ಧಾನ್ಯ ಮತ್ತು ಸಿರಿಧಾನ್ಯಗಳ ಸಂಸ್ಕರಿತ ಉತ್ಪನ್ನಗಳ ಕುರಿತಾಗಿ ಜಾಹೀರಾತುಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರಖ್ಯಾತ ಸಿನಿಮಾ ತಾರೆ ಶ್ರೀಯುತ ರಮೇಶ್ ಅರವಿಂದರವರನ್ನು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿಯಾಗಿ ನೇಮಿಸಲಾಗಿದ್ದು, ಶ್ರೀ ರಮೇಶ್ ಅರವಿಂದರವರೊಂದಿಗೆ ಚಿತ್ರೀಕರಿಸಲಾಗಿರುವ ಸಿರಿ ಉತ್ಪನ್ನಗಳ ಉತ್ತಮ ಜಾಹೀರಾತುಗಳ ಮುಖಾಂತರ ಸಿರಿ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳು ರಾಜ್ಯದೆಲ್ಲೆಡೆ ಇರುವ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಸಿರಿ ಸಂಸ್ಥೆಯ ಸುಸಜ್ಜಿತ ಕಟ್ಟಡ:

ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರ ಶುಭ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಬೆಳ್ತಂಗಡಿಯಲ್ಲಿ ಖರೀದಿಸಲಾದ ಸುಮಾರು ಏಳು ಎಕರೆ ಪ್ರದೇಶದಲ್ಲಿ ಒಟ್ಟು 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಿರಿ ಸಂಸ್ಥೆಯ ನೂತನ ಸುಸಜ್ಜಿತ ಕಟ್ಟಡ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, ಇನ್ನೆರಡು ತಿಂಗಳಿಗಳಲ್ಲಿ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಇಲ್ಲಿ ಸಿರಿಯ ಎಲ್ಲಾ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಕಡಿಮೆ ಬೆಲೆ, ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಿರಿ ಉತ್ಪನ್ನಗಳನ್ನು ಉತ್ಪಾದಿಸಲು ಯೋಜನೆ ರೂಪಿಸಲಾಗಿದ್ದು, ಅದರಂತೆ ಸಿರಿ ನೂತನ ಕಟ್ಟಡದ ಉದ್ಘಾಟನೆಯ ನಂತರ ಈ ನೂತನ ‘ಸಿರಿ’ ಕಟ್ಟಡದಲ್ಲಿ ಇನ್ನೂ 1000ಕ್ಕೂ ಅಧಿಕ ಸಂಖ್ಯೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶವನ್ನು ನೀಡಲು ಸಾಧ್ಯವಾಗುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯದ ಜನತೆ ಆಕರ್ಷಕ ಬೆಲೆಯಲ್ಲಿ ದೊರೆಯುವ ನಮ್ಮ ಸಿರಿ ಸಂಸ್ಥೆಯ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಿ, ಸಿರಿ ಉತ್ಪನ್ನಗಳ ವಿಶೇಷತೆಯ ಬಗ್ಗೆ ಎಲ್ಲರಿಗೂ ಪ್ರಚಾರಪಡಿಸುವ ಮೂಲಕ ಆರ್ಥಿಕವಾಗಿರುವ ಹಿಂದುಳಿದ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ, ಸಿರಿ ಸಂಸ್ಥೆಯ ಏಳಿಗೆಗಾಗಿ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ಈ ಮೂಲಕ ವಿನಂತಿಸಲಾಗಿದೆ.

ಶ್ರಿ ಕೆ.ಎನ್. ಜನಾರ್ಧನ,
ವ್ಯವಸ್ಥಾಪಕ ನಿರ್ದೇಶಕರು,
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ರಿ.)

Advertisment