newsfirstkannada.com

VIDEO: ಗವಿಸಿದ್ದೇಶ್ವರ ಜಾತ್ರೆಗೆ ಭಕ್ತ ಸಾಗರ; ಮಹಾರಥೋತ್ಸವದ ಅದ್ಭುತ ದೃಶ್ಯ ತಪ್ಪದೇ ನೋಡಿ

Share :

Published January 27, 2024 at 6:48pm

Update January 27, 2024 at 7:42pm

    ಮಹಾ ರಥೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

    ಅಚ್ಚುಮೆಚ್ಚಿನ ಗವಿಸಿದ್ದೇಶ್ವರ ಜಾತ್ರೆಗೆ ಬಂದ ಜನಸಾಗರ

    ಮೂಲೆ ಮೂಲೆಗಳಿಂದ ಜಾತ್ರೆಗೆ ಹರಿದು ಬಂದ ಭಕ್ತರು

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಮಠದ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀಗಳು ಚಾಲನೆ ಕೊಟ್ಟಿದ್ದಾರೆ. ಮೂಲೆ ಮೂಲೆಗಳಿಂದ ಅಜ್ಜನ ಜಾತ್ರೆಗೆ ಭಕ್ತರು ಹರಿದು ಬಂದಿದ್ದಾರೆ.

ಧ್ವಜಾರೋಹಣ ಮೂಲಕ ರಥೋತ್ಸವಕ್ಕೆ ಸುತ್ತೂರುಮಠದ ಶ್ರೀಗಳು ಚಾಲನೆ ನೀಡಿದ್ದಾರೆ. ಈ ಅಜ್ಜನ ಜಾತ್ರಾ ಮಹೋತ್ಸವ 3 ದಿನಗಳ ಕಾಲ ನಡೆಯಲಿದೆ. 208ನೇ ಮಹಾರಥೋತ್ಸವ ಇದಾಗಿದ್ದು, ಮೊದಲ ದಿನವೇ ಜಾತ್ರೆಗೆ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. ಎಲ್ಲಿ ನೋಡಿದರೂ ಭಕ್ತರು ಕಿಕ್ಕಿರಿದು ತುಂಬಿಕೊಂಡಿದ್ದಾರೆ.

ಮಠದ ಸುತ್ತಲೂ ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇನ್ನೂ ಮಠಕ್ಕೆ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ರಥದ ಹಗ್ಗವನ್ನು ಎಳೆಯಲು ಭಕ್ತರು ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿರೋ ದೃಶ್ಯ ಕಂಡು ಬಂತು. ಅದ್ಧೂರಿಯಾಗಿ ಕೊಪ್ಪಳದ ಅಜ್ಜನ ಮಹಾರಥೋತ್ಸವ ಜರುಗಿದೆ. ಮಹಾ ರಥೋತ್ಸವದಲ್ಲಿ ಗವಿಮಠದ ಅಭಿನವ ಶ್ರೀಗಳು ಆಶೀರ್ವಚನ ನೀಡಿದ್ದಾರೆ. ನಮಗೆ ನೋಡಲಿಕ್ಕೆ ಎರಡು ಸಾಗರ ಸಿಗುತ್ತವೆ. ಒಂದು ಜಲಸಾಗರ ಇನ್ನೊಂದು, ಅಜ್ಜನ‌ ಜಾತ್ರೆಯ ಜನಸಾಗರ. ಈ ಜಾತ್ರೆಯಲ್ಲಿ ಜನರ ಶಕ್ತಿ ಸೇರಿಸಿದಕ್ಕೆ ಮೂರು ಹೆಸರನ್ನು ನೀಡಲಾಗಿದೆ. ಅಜ್ಜನ ಜಾತ್ರೆ ನೋಡಬನ್ನಿ. ತಾವು ಸಮಧಾನದಿಂದ ಮನೆಮುಟ್ಟಬೇಕು.ನೀವು ಸಮಾಧಾನದಿಂದ ಮನೆ ಮುಟ್ಟಿದ್ರೆ ಅದೇ ಜಾತ್ರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗವಿಸಿದ್ದೇಶ್ವರ ಜಾತ್ರೆಗೆ ಭಕ್ತ ಸಾಗರ; ಮಹಾರಥೋತ್ಸವದ ಅದ್ಭುತ ದೃಶ್ಯ ತಪ್ಪದೇ ನೋಡಿ

https://newsfirstlive.com/wp-content/uploads/2024/01/gavi.jpg

Load More