ಭಾರತೀಯ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕನ್ ಏರ್​ಲೈನ್ಸ್ ಹೊಸ ಐಡಿಯಾ! ರಾಮಾಯಣದ ಜಾಹಿರಾತು ವಿಡಿಯೋ ಬಿಡುಗಡೆ

author-image
Gopal Kulkarni
Updated On
ಭಾರತೀಯ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕನ್ ಏರ್​ಲೈನ್ಸ್ ಹೊಸ ಐಡಿಯಾ! ರಾಮಾಯಣದ ಜಾಹಿರಾತು ವಿಡಿಯೋ ಬಿಡುಗಡೆ
Advertisment
  • ರಾಮಾಯಣಕ್ಕೆ ಸಂಬಂಧಪಟ್ಟ ಸ್ಥಳಗಳನ್ನು ಉಲ್ಲೇಖಿಸಿದ ಶ್ರೀಲಂಕನ್ ಏರ್​​ಲೈನ್ಸ್​
  • ಹೊಸದಾಗಿ ಬಿಡುಗಡೆಗೊಂಡ ಒಂದು ವಿಡಿಯೋದಲ್ಲಿ ಧಾರ್ಮಿಕ ಕ್ಷೇತ್ರದ ದೃಶ್ಯಗಳು
  • ಭಾರತೀಯ ಪ್ರವಾಸಿಗರನ್ನು ಹಾಗೂ ನೆಟ್ಟಿಗರನ್ನು ಸೆಳೆಯುವುದಕ್ಕಾಗಿ ವಿಡಿಯೋ

ಭಾರತಕ್ಕೂ ಹಾಗೂ ಶ್ರೀಲಂಕಾಗೂ ತ್ರೇತಾಯುಗದಿಂದಲೂ ಒಂದು ನಂಟು ಇದೆ. ರಾಮಾಯಣ ಈ ಎರಡು ದೇಶಗಳನ್ನು ಸಹಸ್ರ ಸಹಸ್ರ ವರ್ಷಗಳಿಂದ ಬೆಸೆದುಕೊಂಡು ಬಂದಿದೆ. ಅದೇ ಒಂದು ರಾಮಾಯಣದ ಎಳೆಯನ್ನು ಭಾರತೀಯ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕನ್ ಏರ್​ಲೈನ್ಸ್ ಬಳಸಿಕೊಂಡಿದೆ. ರಾಮಾಯಣದ ಒಂದು ವಿಡಿಯೋ ಆ್ಯಡ್​ನ್ನು ಶ್ರೀಲಂಕನ್ ಏರ್​ಲೈನ್ಸ್ ಬಿಡುಗಡೆ ಮಾಡಿದ್ದು. ರಾಮಾಯಣಕ್ಕೂ ಹಾಗೂ ಶ್ರೀಲಂಕಾಗೂ ಇರುವ ನಂಟನ್ನು ಬಿಂಬಿಸುವುದರ ಜೊತೆಗೆ ರಾಮಾಯಣದೊಂದಿಗೆ ಗುರುತಿಸಿಕೊಂಡ ಪೌರಾಣಿಕ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್​ ಬಗ್ಗೆ NASA ಕಳವಳ.. ಬೇರೆಯದ್ದೇ ಕತೆ ಹೇಳ್ತಿದೆ ಈ ಫೋಟೋ..

ಈ ಒಂದು ವಿಡಿಯೋದಲ್ಲಿ ರಾಮಾಯಣಕ್ಕೆ ಸಂಬಂಧಿಸದ ಅನೇಕ ವಿಷಯಗಳು ಇವೆ. ಶ್ರೀಲಂಕಾದ ಎಲ್ಲಾ ಬಳಿ ಇರುವ ರಾವಣನ ಗುಹೆ, ಸೀತಾಮಾತೆಯನ್ನು ರಾವಣ ಇರಿಸಿದ್ದ ಎಂದು ನಂಬಲಾಗಿರುವ ಅಶೋಕವನ ಹಾಗೆಯೇ ಸೀತಾ ಅಮ್ಮನ್ ಮಂದಿರ ಇವೆಲ್ಲದರ ಬಗ್ಗೆಯೂ ವಿವರಣೆಯನ್ನು ಈ ಒಂದು ವಿಡಿಯೋದಲ್ಲಿ ನೀಡಲಾಗಿದೆ.
ಇನ್ನು ಈ ವಿಡಿಯೋದಲ್ಲಿ ಶ್ರೀರಾಮ ವಾನರ ಸೇನೆಯೊಂದಿಗೆ ಕಟ್ಟಿದ ರಾಮಸೇತುವೆಯ ಬಗ್ಗೆಯೂ ಕೂಡ ಉಲ್ಲೇಖವಿದೆ. ತಮಿಳುನಾಡಿನ ರಾಮೇಶ್ವರಂನಿಂದ ಶ್ರೀಲಂಕಾದವರೆಗೂ ಹಬ್ಬಿರುವ ಈ ಸೇವೆಯ ಬಗ್ಗೆ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ಒಂದು ವಿಡಿಯೋದಲ್ಲಿ ಪುಟ್ಟ ಮಗುವೊಂದು ಅವರ ಅಜ್ಜಿಯ ಬಳಿ ರಾಮಸೇತು ಈಗಲೂ ಇದೆಯಾ ಎಂದು ಕೇಳುವ ಹಾಗೂ ಅದಕ್ಕೆ ಅಜ್ಜಿ ಹೌದು ಮಗು ನಾವು ಈಗಲೂ ಅದನ್ನು ನೋಡಬಹುದು ಎಂದು ಹೇಳಿರುವ ದೃಶ್ಯಗಳಿವೆ.ಅದರ ಜೊತೆಗೆ ಅಜ್ಜಿ ರಾಮಾಯಣದಲ್ಲಿ ಬರುವ ಎಲ್ಲಾ ಪ್ರದೇಶಗಳು ನಿಜವೇ ಅವು ಇಂದಿಗೂ ಇವೆ. ಅಂದಿನ ಲಂಕಾವನ್ನು ಇಂದು ನಾವು ಶ್ರೀಲಂಕಾ ಎಂದು ಕರೆಯುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


">November 10, 2024


ಸದ್ಯ ಶ್ರೀಲಂಕನ್ ಏರ್​ಲೈನ್ಸ್ ಬಿಡುಗಡೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯುತ್ತಿದೆ. ಅನೇಕ ಇದನ್ನು ಹಾಡಿ ಕೊಂಡಾಡುತ್ತಿದ್ದಾರೆ. ಅನ್ಶುಲ್ ಕುಮಾರ್ ಎಂಬ ವ್ಯಕ್ತಿ ಮುಂದಿನ ವರ್ಷ ನಾನು ಸ್ನೇಹಿತರ ಜೊತೆ ಟೊಕಿಯೋಗೆ ಹೋಗುವ ಪ್ಲಾನ್ ಮಾಡಿದ್ದೇ ಆದ್ರೆ ಈ ವಿಡಿಯೋ ನೋಡಿದ ಮೇಲೆ ಶ್ರೀಲಂಕಾಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅನ್ಶುಲ್ ಕುಮಾರ್ ರೀತಿಯೇ ಈ ವಿಡಿಯೋವನ್ನು ನೋಡಿದ ಅನೇಕ ನೆಟ್ಟಿಗರು ಶ್ರೀಲಂಕಾದತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ನೋ ಸೆಕ್ಸ್‌, ನೋ ಚೈಲ್ಡ್ ಬರ್ತ್‌; ಟ್ರಂಪ್ ಗೆಲುವಿಗೆ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರ 4B ಸೇಡು; ಏನಿದು?

ಇದು ಶ್ರೀಲಂಕಾದ ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚು ಹೆಚ್ಚು ಭಾರತೀಯ ಪ್ರವಾಸಿಗರನ್ನ ಶ್ರೀಲಂಕಾಗೆ ಸೆಳೆಯುವ ಒಂದು ಭಾಗವಾಗಿದೆ, ಈ ಹಿಂದೆಯೇ ಉಭಯ ದೇಶಗಳು ರಾಮಾಯಣ ಟ್ರಯಲ್ ಪ್ರೊಜೆಕ್ಟ್ ಯೋಜನೆ ಹಾಕಿಕೊಂಡಿದ್ದವು. ಉಭಯ ದೇಶಗಳ ನಡುವೆ ಇರುವ ಪಾರಂಪರಿಕ ಹಾಗೂ ಸಂಸ್ಕೃತಿಗಳ ಬೆಸುಗೆಯ ಬಗ್ಗೆ ಬೆಳಕು ಚೆಲ್ಲಿ, ಶ್ರೀಲಂಕಾ ಹಾಗೂ ಭಾರತದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ನಿರ್ಣಯಕ್ಕೂ ಕೂಡ ಬರಲಾಗಿತ್ತು. 2023ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾದ ಅಧ್ಯಕ್ಷ ರನೀಲ್ ವಿಕ್ರಮಸಿಂಘೆ ಅವರ ಭೇಟಿಯ ವೇಳೆ ಈ ವಿಷಯದ ಬಗ್ಗೆ ಚರ್ಚೆಗಳಾಗಿದ್ದವು ಅದರ ಭಾಗವಾಗಿಯೇ ಈಗ ಈ ಒಂದು ವಿಡಿಯೋ ಬಿಡುಗಡೆಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment