ರಾಯರ ಭಕ್ತರಿಗೆ ಶುಭ ಸುದ್ದಿ.. ಶೀಘ್ರದಲ್ಲೇ ಬರಲಿದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ

author-image
Veena Gangani
Updated On
ರಾಯರ ಭಕ್ತರಿಗೆ ಶುಭ ಸುದ್ದಿ.. ಶೀಘ್ರದಲ್ಲೇ ಬರಲಿದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ
Advertisment
  • ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ ಸ್ಟಾರ್ ನಟ ಪರೀಕ್ಷಿತ್
  • ರಾಯರ ಪವಾಡಗಳ ಕಥೆ ಹೇಳುವಂತಹ ಅದ್ಭುತ ಧಾರಾವಾಹಿ
  • ಸಿನಿಮಾ ಟ್ರೈಲರ್ ಮಾದರಿಯಲ್ಲಿ ರಾಯರ ಪ್ರೋಮೋ ರಿಲೀಸ್

ಶ್ರೀ ರಾಘವೇಂದ್ರ ಮಹಾತ್ಮೆ.. ರಾಯರ ಪವಾಡಗಳ ಕಥೆ ಹೇಳುವಂತಹ ಅದ್ಭುತವಾದ ಧಾರಾವಾಹಿ. ಜೀ ವಾಹಿನಿಯ ಕನಸಿನ ಕೂಸು ಈ ಪ್ರಾಜೆಕ್ಟ್​. ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ, ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರು ಸಾರ್ವಭೌಮರ ಕತೆಯಾಗಿದೆ.

publive-image

ಅಣ್ಣಯ್ಯ ಧಾರಾವಾಹಿ ಲಾಂಚಿಂಗ್​ ಟೈಮ್​ನಲ್ಲೇ ವಾಹಿನಿ ರಾಯರ ಕುರಿತಾದ ಧಾರಾವಾಹಿ ಬಗ್ಗೆ ಮಾಹಿತಿ ನೀಡಿತ್ತು. ವರ್ಷದಿಂದ ಈ ಪ್ರಾಜೆಕ್ಟ್​​ಗೆ ಕೆಲಸ ನಡಿತಿದೆ.

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

ಪ್ರತಿ ಗುರುವಾರ ಚಿಕ್ಕ ಚಿಕ್ಕ ಟೀಸರ್​ ಬಿಡುಗಡೆ ಮಾಡ್ತಾ ಬಂದಿತ್ತು ತಂಡ. ಯಾವಾಗ ಬರುತ್ತೆ ಧಾರಾವಾಹಿ? ವರ್ಷ ಉರಳಿದ್ರು ಪ್ರೋಮೋನೇ ಬಿಟ್ಟಿಲ್ವಲ್ಲಾ ಅಂತ ಅಭಿಮಾನಿಗಳು ಕಾಯ್ತಾ ಇದ್ರು. ಈಗ ಅದಕ್ಕೆ ಕಾಲ ಕೂಡಿಬಂದಿದೆ.

publive-image

ಸಿನಿಮಾ ಟ್ರೈಲರ್ ಮಾದರಿಯಲ್ಲಿ ಪ್ರೋಮೋವನ್ನು ರಿಲೀಸ್ ಮಾಡಿದೆ ವಾಹಿನಿ. ಟ್ರೇಲರ್​ ನೋಡಿದ್ರೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವಂತಿದೆ. ರಾಯರ ಭಕ್ತರಿಗೆ ಆರಾಧಕರಿಗೆ ಅದ್ಭುತ ಅನುಭವ ನೀಡೋದರಲ್ಲಿ ಯಾವುದೇ ಅನುಮಾನ ಇಲ್ಲ.

publive-image

ವಿಶೇಷ ಅಂದ್ರೇ ದಶಕಗಳ ಹಿಂದೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ರಾಯರ ಪಾತ್ರ ಮಾಡಿದ್ದ ನಟ ಪರೀಕ್ಷಿತ್​ ಜೀ ಧಾರಾವಾಹಿಯಲ್ಲೂ ಮುಂದುವರೆಯುತ್ತಿದ್ದಾರೆ.

publive-image

ರಾಯರ ಪಾತ್ರದಲ್ಲಿ ಅಲ್ಲ, ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಧಾರಾವಾಹಿ ತೆರೆಗೆ ಬರಲಿದೆ ಗುರುರಾಯರ ಪಾತ್ರ ಯಾರು ಮಾಡ್ತಾರೆ ಅನ್ನೋದು ಸದ್ಯದ ಕೂತುಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment