ಇಂಟ್ರೆಸ್ಟಿಂಗ್ ಆಗಿದೆ ಗುರುರಾಯರ ಪಾತ್ರ.. ಭಕ್ತಿ-ಭಾವದ ಅನುಭವ ನೀಡೋಕೆ ಸಜ್ಜಾದ ತಂಡ!

author-image
Veena Gangani
Updated On
ಇಂಟ್ರೆಸ್ಟಿಂಗ್ ಆಗಿದೆ ಗುರುರಾಯರ ಪಾತ್ರ.. ಭಕ್ತಿ-ಭಾವದ ಅನುಭವ ನೀಡೋಕೆ ಸಜ್ಜಾದ ತಂಡ!
Advertisment
  • ಕರ್ಣ ಲಾಂಚ್​ ಬೆನ್ನಲ್ಲೇ ಗುರು ರಾಘವೇಂದ್ರ ಮಹಾತ್ಮೆ ತೆರೆಗೆ
  • ರಾಯರ ಪವಾಡಗಳನ್ನು ಸಾರೋ ಭಕ್ತಿ ಪ್ರಧಾನ ಧಾರಾವಾಹಿ
  • ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಟ್ಟ ಅದ್ಭುತ ಕಲಾವಿದ ಪರೀಕ್ಷಿತ್

ಜೀ ಕನ್ನಡ ವಾಹಿನಿಯ ಬಹುನಿರೀಕ್ಷಿತ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ. ರಾಯರ ಪವಾಡಗಳನ್ನ ಸಾರುವ ಭಕ್ತಿ ಪ್ರಧಾನ ಧಾರಾವಾಹಿ. ಈಗಾಗಲೇ ಬೇರೆ, ಬೇರೆ ವಾಹಿನಿಗಳಲ್ಲಿ ರಾಯರ ಕುರಿತು ಸಾಕಷ್ಟು ಧಾರಾವಾಹಿ, ಸಿನಿಮಾಗಳು ತೆರೆಕಂಡಿವೆ. ಆದ್ರೆ ಪ್ರತಿ ಬಾರಿ ಗುರುಗಳ ಬಗ್ಗೆ ಕಥೆ ಮೂಡಿಬಂದಾಗಲೂ ಅದೇನೋ ರೋಮಾಂಚನದ ಅನುಭವ.

ಇದನ್ನೂ ಓದಿ:ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ

publive-image

ರಾಯರ ಆರಾಧಕರಿಗೆ ವಿಭಿನ್ನ ದೃಶ್ಯ ವೈಭವವನ್ನ ಕಟ್ಟಿಕೊಡಲು ಸಜ್ಜಾಗಿದೆ ಜೀ ವಾಹಿನಿ. ಕಥೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನ ವಾಹಿನಿಯೇ ಹೊತ್ತಿದೆ. ಮಹಾತ್ಮರ ಕಥೆ ನೋಡೋದಕ್ಕೆ ವೀಕ್ಷಕರು ಕಾಯ್ತಿದ್ದಾರೆ. ಅದ್ರಲ್ಲೂ ಮುಖ್ಯವಾಗಿ ರಾಯರ ಪಾತ್ರ ಯಾರು ಮಾಡಲಿದ್ದಾರೆ ಅನ್ನೋದೇ ಕೌತುಕ ಮೂಡಿಸಿದೆ. ಈ ಹಿಂದೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಮೂಡಿಬಂದಿದ್ದ ಶ್ರೀ ಗುರು ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ನಟ ಪರೀಕ್ಷಿತ್ ಅದ್ಭುತವಾಗಿ ಅಭಿನಯಿಸಿದ್ರು.

publive-image

ವೀಕ್ಷಕರು ಇವತ್ತಿಗೂ ಇವ್ರನ್ನ ಭಕ್ತಿ ಭಾವದಿಂದ ನೋಡ್ತಾರೆ. ಈ ಸೀರಿಯಲ್​ ನಂತರ ಆಕಾಶ ದೀಪ ಧಾರಾವಾಹಿ ಮಾಡಿದ್ರು. ಅದು ಸೂಪರ್ ಹಿಟ್​ ಆಯ್ತು. ನಂತರ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಹಲವು ವರ್ಷಗಳ ನಂತರ​ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದ್ರೇ ರಾಯರ ಪಾತ್ರದಲ್ಲಿ ಅಲ್ಲ. ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

publive-image

ಇನ್ನೂ, ಮಹಾ ವಿಷ್ಣು ಪಾತ್ರಕ್ಕೆ ಅಮಿತ್​ ಕಶ್ಯಪ ಬಣ್ಣ ಹಚ್ಚಿದ್ದಾರೆ. "ಶ್ರೀ ವಿಷ್ಣು ದಶಾವತಾರ"ದಲ್ಲಿ ಮೊದಲ ಬಾರಿ ನಟನೆ ಮಾಡಿದ್ರು, ಅಲ್ಲಿಂದ ತೆಲುಗು ಕಡೆ ಮುಖ ಮಾಡಿದ್ದ ನಟ, ರಾಧಾ ಕಲ್ಯಾಣ ಎಂಬ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ್ರು. ನಂತರ ಇದೇ ಧಾರಾವಾಹಿ ಕನ್ನಡಕ್ಕೆ ಡಬ್​ ಆಯ್ತು. ರಾಯರ ಪಾತ್ರದ ಬ್ಗಗೆ ಸಹಜವಾಗಿಯೇ ಕುತೂಹಲ ಇದೆ. ಯಾರು ಈ ಪಾತ್ರ ಮಾಡ್ತಾರೆ ಅನ್ನೋದೇ ಸದ್ಯದ ಪ್ರಶ್ನೆ. ಮೂಲಗಳ ಪ್ರಕಾರ ಇನ್ನು ಯಾರು ಫಿಕ್ಸ್ ಆಗಿಲ್ಲ. ಕಲಾವಿದರ ಹುಡುಕಾಟದಲ್ಲಿದೆ ತಂಡ. ಧಾರಾವಾಹಿ ಕುರಿತು ಮತ್ತೊಂದು ಅದ್ಭುತವಾದ ಪ್ರೋಮೋ ಸಿದ್ಧವಾಗಿದ್ದು, ಇದೇ ವಾರ ರಿಲೀಸ್​ ಮಾಡಲಿದೆ ವಾಹಿನಿ.

publive-image

ಶ್ರೀರಸ್ತು ಶುಭಮಸ್ತು ಮುಕ್ತಾಯವಾಗೋ ಸಂಭವವಿದೆ. ಕರ್ಣ ಲಾಂಚ್​ ಆದ ಬೆನ್ನಲ್ಲೇ ಶ್ರೀ ಗುರುರಾಘವೇಂದ್ರ ಮಹಾತ್ಮೆ ಲಾಂಚ್​ಗೆ ಸಿದ್ಧವಾಗಲಿದೆ ತಂಡ. ಉಳಿದಂತೆ ಇನ್ನು ತಯಾರಿ ನಡಿತಿದ್ದು, ಮಂತ್ರಾಲಯದಲ್ಲೇ ಧಾರಾವಾಹಿಯ ಮೊದಲ ಹೆಜ್ಜೆ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದ್ರೇ ಮೇ ತಿಂಗಳಿನಲ್ಲಿ ತೆರೆಗೆ ಬರಲಿದ್ದಾರೆ ರಾಯರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment