ಕಲಿಯುಗದ ಮಹದೇಶ್ವರ, ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯ

author-image
admin
Updated On
ಕಲಿಯುಗದ ಮಹದೇಶ್ವರ, ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು ಲಿಂಗೈಕ್ಯ
Advertisment
  • ಶ್ರೀ ಸಾಲೂರು ಬೃಹನ್ಮಠದ ಪರಮ ಪೂಜ್ಯ ಹಿರಿಯ ಗುರುಗಳು
  • ಕುಗ್ರಾಮದಲ್ಲಿ ಶಾಲೆ ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಪೂಜ್ಯರು
  • ಕಲಿಯುಗದ ಮಹದೇಶ್ವರ ಎಂದೇ ಭಕ್ತಮಾನಸದಲ್ಲಿ ನೆಲೆಸಿದ್ದರು

ಮಹದೇಶ್ವರ ಬೆಟ್ಟದ ಶ್ರೀ ಸಾಲೂರುಸ್ವಾಮಿ ಮಠಕ್ಕೊಂದು ಅನನ್ಯವಾದ ಸ್ಥಾನವಿದೆ. ಅದು ಶ್ರೀ ಮಲೆಯ ಮಹದೇಶ್ವರರಿಗೆ ಅನುಗ್ರಹಿಸಿದ ತಪೋವನ. ಭಕ್ತರನ್ನು, ದೇವರ ಗುಡ್ಡರನ್ನು ಆಧ್ಯಾತ್ಮದತ್ತ ಕರೆದೊಯ್ಯುವ ಪುಣ್ಯಧಾಮ. ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಸಾಲೂರುಸ್ವಾಮಿ ಮಠವು ವಿಶ್ವ ಮಾನವ ದೋರಣೆಯುಳ್ಳದ್ದು. ಭಕ್ತಿ ಗೌರವ ಬೋಧಿಸುವ ಸಂಜೀವಿಗಳಿಂದ ಕೂಡಿದೆ.

ಶ್ರೀ ಸಾಲೂರು ಬೃಹನ್ಮಠದ ಪರಮ ಪೂಜ್ಯ ಹಿರಿಯ ಗುರುಗಳಾದ ಪಟ್ಟದ ಶ್ರೀ ಶ್ರೀ ಗುರುಸ್ವಾಮಿಗಳವರು ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ. ಇವರ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ 5:30ಕ್ಕೆ ನೆರವೇರಿಸಲಾಗುತ್ತಿದೆ.

ಶ್ರೀ ಪಟ್ಟದ ಗುರುಸ್ವಾಮಿಗಳ ಪರಿಚಯ
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಜಿ.ಕೆ. ಹೊಸೂರು ಗ್ರಾಮದ ಪಟ್ಟದ ಶ್ರೀ ಗುರುಸ್ವಾಮಿಗಳು ತಮ್ಮ 12ನೆಯ ವಯಸ್ಸಿನಲ್ಲಿಯೇ ಶ್ರೀ ಮಠಕ್ಕೆ ಬಂದು ಕಾಯ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ಎಲೆಮರೆಕಾಯಿಯಂತೆ ದುಡಿದರು.

ಅವರ ತಂದೆ ರುದ್ರಪ್ಪನವರು, ತಾಯಿ ಶರಣೆ ಪುಟ್ಟಮಾದಮ್ಮನವರು ಆಧ್ಯಾತ್ಮ ಸಂಪನ್ನರು ಹಾಗೂ ಶ್ರೀ ಮಹದೇಶ್ವರರ ಮಹಾತ್ಮ, ಶ್ರೀ ಗುರುಮಲ್ಲೇಶ್ವರರ ಮೂಲ ಆಶಯವನ್ನು ಬದುಕಿನುದ್ದಕ್ಕೂ ನಿರಂತರವಾಗಿ ಕಾಪಾಡಿಕೊಂಡು ಬಂದಿರುವ ಕೀರ್ತಿ ಇವರಿಗೆ ಸಲ್ಲತಕ್ಕದ್ದು.

ದಿನಾಂಕ: 29-01-1995 ರಂದು ಪಟ್ಟಾಧಿಕಾರವಾಯಿತು. ಶ್ರೀ ಪಟ್ಟದ ಗುರುಸ್ವಾಮಿಗಳು ಶ್ರೀ ಮಠದ ಜವಾಬ್ದಾರಿ ದಾಸೋಹ ವ್ಯವಸ್ಥೆ, ಕೃಷಿ ಮುಂತಾದ ಕೆಲಸ ಕಾವ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಲಾಯಿತು.

ನಮ್ಮದು ಭಕ್ತರ ಮಠ ಸರ್ವಧರ್ಮ ಸಮನ್ವಯ ಸಾರುವ ಸಾಲೂರು ಮಠ ಸಾಮಾಜಿಕ ಹಿತ ಚಿಂತನೆಯೇ ಇದರ ಮೂಲ ಆಶಯ ಎಂದು ನಂಬಿರುವ ಶ್ರೀ ಸಾಲೂರು ಮಠದ ಗುರು ಪರಂಪರೆ ಪಟ್ಟದ ಶ್ರೀ ಗುರುಸ್ವಾಮಿಗಳವರ ಮೇಲೆ ಅಗಾಧವಾಗಿ ಪರಿಣಾಮವನ್ನುಂಟು ಮಾಡಿದೆ.

ಇದನ್ನೂ ಓದಿ: 2 ಬೈಕ್​ಗಳಿಗೆ ಭಯಾನಕವಾಗಿ KSRTC ಬಸ್ ಡಿಕ್ಕಿ, ಪಲ್ಟಿ.. ಪ್ರಾಣ ಬಿಟ್ಟ ಸಬ್ ಇನ್​​ಸ್ಪೆಕ್ಟರ್ 

ಪೂಜ್ಯ ಶ್ರೀಗಳ ಅಧಿಕಾರಾವದಿಯಲ್ಲಿ ಶ್ರೀ ಮಠದಲ್ಲಿ ನಿತ್ಯ ದಾಸೋಹ ಸೇವೆ, ಶ್ರೀ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಶ್ರೀ ಮಠದ ಅಭಿವೃದ್ಧಿ ಶ್ರೀ ಮಠದ ಅಭಿವೃದ್ಧಿಗೊಸ್ಕರ ಅರ್ಚಕರ ಜೀವನದ ಉದ್ಧಾರ ಜೊತೆಗೆ ಶ್ರೀ ಸಾಲೂರು ಸ್ವಾಮಿ (ಟ್ರಸ್ಟ್) ವತಿಯಿಂದ ಈ ಕ್ಷೇತ್ರದ ಸಮೀಪವಿರುವ ಪೊನ್ನಾಚಿಯಲ್ಲಿ ಗಿರಿಜನ, ದೀನ ದಲಿತರ ಹಿಂದುಳಿದವರ ಉಳಿವಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆ 1999 ರಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕೆಂಪನ ಪಾಳ್ಯದಲ್ಲಿ. ಪ್ರೌಢಶಾಲೆ, ವೃದ್ಧರಿಗೆ ಆಶ್ರಯ ನೀಡಲು 10 ಎಕರೆ ವಿಸ್ತೀರ್ಣದಲ್ಲಿ ಹನೂರಿನ ಸಮೀಪ ವೃದ್ದಾಶ್ರಮವನ್ನು ಸ್ಥಾಪಿಸಿ, ನೂರಾರು ನಿರಾಶ್ರಿತರಿಗೆ ಆಶ್ರಯದಾತರಾಗಿದ್ದಾರೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಹಲವಾರು ಸಂಸ್ಕೃತ ಪಾಠಶಾಲೆಗಳನ್ನು ತೆರೆದಿದ್ದಾರೆ. ಹಬ್ಬ ಜಾತ್ರೆ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಇಲ್ಲಿ ಬಂದು ದಾಸೋಹ ಸ್ವೀಕರಿಸುತ್ತಾರೆ.

ಪಟ್ಟದ ಶ್ರೀ ಗುರುಸ್ವಾಮಿಗಳವರ ಕ್ರಿಯಾಶೀಲ ದೂರ ದೃಷ್ಟಿ ಎಂದರೆ ಮಠದ ಪಾರಂಪರಿಕವಾಗಿ ನಡೆದು ಬಂದಿರುವ ಶ್ರೀಕ್ಷೇತ್ರದ ದೇವಸ್ಥಾನದ ತ್ರಿಕಾಲ ಪೂಜೆಯಲ್ಲಿ ಶ್ರೀ ಮಠದ ವತಿಯಿಂದ ಸ್ವಾಮಿಗಳೊಬ್ಬರನ್ನು ಕಳುಹಿಸಿ ಕೊಡುವುದು, ಇದು ಇಂದಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಮತ್ತೊಂದು ವಿಶೇಷವೆಂದರೆ ಶ್ರೀ ಸಾಲೂರು ಮಠದ ವತಿಯಿಂದ ಗುಂಡೇಗಾಲ ಮಲ್ಲಿಕಾರ್ಜುನಸ್ವಾಮಿಗಳವರ ಸಹೋದರರಾದ ಶ್ರೀ ಪುಟ್ಟೇಗಾಲ ಶ್ರೀಗಳವರನ್ನು ಮಠದ ವತಿಯಿಂದ ಶ್ರೀ ಸ್ವಾಮಿಯ ನಿತ್ಯ ಪೂಜೆಗಾಗಿ ಕಳುಹಿಸಿ ಕೊಡುತ್ತಿದ್ದರು. ಜೊತೆಗೆ ಇವರು ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕಟ್ಟೆ ಮನೆಯ ಜವಬ್ದಾರಿಯನ್ನು ಅವರಿಗೆ ವಹಿಸಿದ್ದರು. ಪುಟ್ಟೇಗಾಲ ಶ್ರೀಗಳು ಶತಾಯುಷಿಗಳು ಸುಮಾರು 80 ವರ್ಷಗಳ ಕಾಲ ಶ್ರೀ ಸ್ವಾಮಿಯವರ ಪೂಜಾ ಕೈಂಕರ್ಯವನ್ನು ಸಲ್ಲಿಸಿ ಎರಡು ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ ಇವರ ಸೇವೆ ಅವಿಸ್ಮರಣೇಯವಾದುದು ಇಂಥ ಪೂಜ್ಯರ ಎಲ್ಲಾ ಕೆಲಸ ಕಾರ್ಯಗಳ ಯಶಸ್ಸಿಗೆ ಶ್ರೀ ಗುರುಸ್ವಾಮಿಗಳವರು ಬೆನ್ನೆಲುಬಾಗಿ, ಇವರ ಯಶಸ್ವಿಗೆ ಕಾರಣ ಕರ್ತರಾಗಿದ್ದಾರೆ. ಅಷ್ಟೇ ಅಲ್ಲದೆ ಪೂಜ್ಯರು ಶ್ರೀಮಠದ ಎದುರಿನ ಗವಿಯ ಅಭಿವೃದ್ಧಿ, ನಿತ್ಯ ಪೂಜೆ ಮುಂತಾದ ಭಕ್ತರ ಕೈಂಕರ್ಯಗಳನ್ನು ಮಾಡಿದ್ದಾರೆ.

ಪಟ್ಟದ ಶ್ರೀ ಗುರುಸ್ವಾಮಿಗಳವರು ಸಾಲೂರು ಮಠದ ಗುರುಪರಂಪರೆಯಲ್ಲಿ ಹೆಚ್ಚಿನ ವರ್ಷಗಳ ಕಾಲ ಸೇವೆಗೈದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕಿಂಕರ ಶಂಕರನಾದಂತೆ ಸಾಲೂರು ಮಠದ ಅಭಿನವ ಅಲ್ಲಮಪ್ರಭುಗಳಂತಿದ್ದ ಪಟ್ಟದ ಶ್ರೀ ಮಹದೇವಸ್ವಾಮಿಗಳವರ ಭವಿಷ್ಯದ ಎಲ್ಲಾ ಕನಸುಗಳು ಮತ್ತು ಭಕ್ತರ ಆಶೋತ್ತರಗಳನ್ನು ಇವರು ಪೂರ್ಣಗೊಳಿಸಿ ಕಲಿಯುಗದ ಮಹದೇಶ್ವರರೆನಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment