ಮಹಾಕುಂಭಮೇಳದಲ್ಲಿ ಸತ್ಸಂಗ, ಗುರುದೇವರೊಡನೆ ಧ್ಯಾನ; ಆರ್ಟ್ ಆಫ್ ಲಿವಿಂಗ್ ಸೇವಾ ಕಾರ್ಯ ಹೇಗಿತ್ತು?

author-image
admin
Updated On
ಮಹಾಕುಂಭಮೇಳದಲ್ಲಿ ಸತ್ಸಂಗ, ಗುರುದೇವರೊಡನೆ ಧ್ಯಾನ; ಆರ್ಟ್ ಆಫ್ ಲಿವಿಂಗ್ ಸೇವಾ ಕಾರ್ಯ ಹೇಗಿತ್ತು?
Advertisment
  • ಪ್ರಯಾಗರಾಜ್‌ನಲ್ಲಿ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರೊಡನೆ ವಿಶ್ವಧ್ಯಾನ
  • ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸ್ವಯಂ ಸೇವಕರಿಂದ ಸೇವೆ
  • 25,000 - 30,000 ಭಕ್ತರಿಗೆ ಪ್ರತಿನಿತ್ಯ ಒಂದು ಟನ್ ಖಿಚಡಿ, ಆಹಾರ ವಿತರಣೆ

ಪ್ರಯಾಗರಾಜ್ ಮಹಾಕುಂಭಮೇಳವು ಆಧ್ಯಾತ್ಮಿಕ ಪರಂಪರೆಗಳ ಮತ್ತು ಸಂಸ್ಕೃತಿಯ ಭವ್ಯ ಸಂಗಮವಾಗಿದೆ. ಈ ಬಾರಿ ಅದಕ್ಕೆ ಮತ್ತೊಂದು ವಿಶೇಷವನ್ನು ಸೇರಿಸಲಾಗಿದೆ. ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ‘ಮಹಾಕುಂಭದಿಂದ ಗುರುದೇವರೊಡನೆ ಧ್ಯಾನ ಮಾಡಿ’ ಕಾರ್ಯಕ್ರಮದಲ್ಲಿ ಸಾವಿರಾರು ಸಾಧಕರು ಭಾಗವಹಿಸಿದರು.

ಫೆಬ್ರವರಿ 4ರ ಸಂಜೆ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಶ್ರೀ ಶ್ರೀ ರವಿಶಂಕರ ಅವರು ಸತ್ಸಂಗವನ್ನು ನಡೆಸಿಕೊಟ್ಟರು. ಈ ಸತ್ಸಂಗದಲ್ಲಿ ಸಾವಿರ ತೀರ್ಥಯಾತ್ರಿಗಳೊಡನೆ ಸಂತರೂ ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮಿಂದೇಳಲು ಬಂದಿದ್ದರು.

publive-image

180 ದೇಶಗಳ ಭಕ್ತರಿಗೆ ಮಹಾಕುಂಭದ ಪವಿತ್ರ ಭೂಮಿಯಿಂದ ಜಾಗತಿಕ ಧ್ಯಾನವನ್ನು ನಡೆಸಿಕೊಟ್ಟರು. ಈ ಧ್ಯಾನವನ್ನು ಗುರುದೇವರ ಅಧಿಕೃತ ಯೂಟ್ಯೂಬ್ ಚಾನೆಲ್‌ ಮತ್ತು ಆರ್ಟ್ ಆಫ್ ಲಿವಿಂಗ್‌ನ ಸತ್ವ ಆಪ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವರು, ಕುಂಭ ಪರ್ವದ ಸಾರವೆಂದರೆ ನಿಮ್ಮೊಳಗಿನ ಪೂರ್ಣತೆಯನ್ನು ತಿಳಿಯುವುದು. ಜ್ಞಾನ, ಭಕ್ತಿ ಮತ್ತು ಕರ್ಮ ಒಂದಾಗಿ ಬಂದಾಗ ಮಾತ್ರ ಇದು ನಡೆಯಲು ಸಾಧ್ಯ. ಇಲ್ಲಿ ಹರಿಯುತ್ತಿರುವ ಗಂಗೆಯು ಜ್ಞಾನದ ಪ್ರತೀಕವಾದರೆ, ಯಮುನೆಯು ಭಕ್ತಿಯ ಪ್ರತೀಕ ಮತ್ತು ಅಗೋಚರವಾಗಿರುವ ಸರಸ್ವತಿಯು ಕರ್ಮದ ಪ್ರತೀಕ’ ಎಂದರು.

publive-image

ಇದನ್ನೂ ಓದಿ: ವಸಂತ ಪಂಚಮಿ; ಸುತ್ತೂರುಶ್ರೀ, ವಚನಾನಂದಶ್ರೀ ನೇತೃತ್ವದಲ್ಲಿ ಕರ್ನಾಟಕದ ಸ್ವಾಮೀಜಿಗಳಿಂದ ಅಮೃತ ಸ್ನಾನ 

ಗುರುದೇವರ ಮಾರ್ಗದರ್ಶನದಲ್ಲಿ ಇದೊಂದು ಪರಿವರ್ತನಕಾರಕವಾದ ಅನುಭವವಾಯಿತು. ಇದು ಐಕ್ಯತೆಯ, ಶಾಂತಿಯ, ಮಾನವತೆಗೆ ಕರುಣೆಯ ಸಂದೇಶವನ್ನು ಕಳುಹಿಸಿತು. ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವು ಇಡ, ಪಿಂಗಳ ಮತ್ತು ಸುಷುಮ್ನ ಶಕ್ತಿ ನಾಡಿಗಳನ್ನು ಪ್ರತಿನಿಧಿಸುತ್ತವೆ. ಧ್ಯಾನದಲ್ಲಿ ನಾವು ಸ್ತಬ್ಧರಾದಾಗ ಅಮರತ್ವದ ಅಮೃತವನ್ನು ಅನುಭವಿಸುತ್ತೇವೆ ಎಂದರು.

ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉಚಿತ ಆಹಾರ, ಆಯುರ್ವೇದದ ಆರೈಕೆ ಮತ್ತು ತೀರ್ಥಯಾತ್ರಿಗಳ ಒಳಿತಿನ ಸೇವೆಯನ್ನು 25 ಸೆಕ್ಟರ್‌ಗಳಲ್ಲೂ ನಡೆಸುತ್ತಿದೆ. ಆರ್ಟ್ ಆಫ್ ಲಿವಿಂಗ್ ನ ಶಿಬಿರದಲ್ಲಿ ಪ್ರತಿನಿತ್ಯ ಒಂದು ಟನ್ ಖಿಚಡಿಯನ್ನು ಪ್ರತಿನಿತ್ಯ ಎರಡು ಸಲ ಸಿದ್ಧಪಡಿಸಿ, 25,000-30,000 ಭಕ್ತರಿಗೆ ಹಂಚಲಾಗುತ್ತಿದೆ.

publive-image

ಇದರ ಜೊತೆಗೆ ಶ್ರೀ ಶ್ರೀ ತತ್ವದ 8 ತಜ್ಞ ನಾಡಿ ವೈದ್ಯರು 5000 ಜನರಿಗೆ ನಾಡಿ ಪರೀಕ್ಷೆಯನ್ನು ನಡೆಸಿ, ಆಯುರ್ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ಫೆಬ್ರವರಿ 4ರ ಬೆಳಗ್ಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಪ್ರಯಾಗರಾಜ್‌ನ ಐತಿಹಾಸಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ: PHOTO: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ರವಿಶಂಕರ್ ಗುರೂಜಿ, ವಚನಾನಂದ ಶ್ರೀಗಳು 

ಆರ್ಟ್ ಆಫ್ ಲಿವಿಂಗ್‌ನ ಶಿಬಿರದಲ್ಲಿ ಗುರುದೇವರ ಸಾನ್ನಿಧ್ಯದಲ್ಲಿ ರುದ್ರ ಪೂಜೆ, ಅರುಣಪ್ರಶ್ನ ಹೋಮ, ಸೂರ್ಯಸೂಕ್ತ ಹೋಮಗಳು ನಡೆದವು. ಕಳೆದ ಸೋಮವಾರದ ಸತ್ಸಂಗದಲ್ಲಿ ಜುನಾ ಅಖಾಡದ ನಾಗಾ ಸಾಧುಗಳು ಮತ್ತಿನ್ನಿತರ ಗಣ್ಯರು ಗುರುದೇವರನ್ನು ಭೇಟಿ ಮಾಡಿದರು.

ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು ಆನ್‌ಲೈನ್‌ನ ಮೂಲಕ ಪಾಲ್ಗೊಂಡಿದ್ದಾರೆ. 250 ಟನ್‌ಗಳಷ್ಟು ಆಹಾರ ಮತ್ತಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸ್ವಯಂ ಸೇವಕರು ವಿತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment