Advertisment

ಏನೇ ಆಗಲಿ ಹೆದರಲ್ಲ.. ಯುವ ಡಿವೋರ್ಸ್‌ ಅರ್ಜಿಗೆ ಶ್ರೀದೇವಿ ಕೊಟ್ರು ಹೊಸ ಟ್ವಿಸ್ಟ್‌; ಹೇಳಿದ್ದೇನು?

author-image
admin
Updated On
ಏನೇ ಆಗಲಿ ಹೆದರಲ್ಲ.. ಯುವ ಡಿವೋರ್ಸ್‌ ಅರ್ಜಿಗೆ ಶ್ರೀದೇವಿ ಕೊಟ್ರು ಹೊಸ ಟ್ವಿಸ್ಟ್‌; ಹೇಳಿದ್ದೇನು?
Advertisment
  • ಪತ್ನಿಯಿಂದ ನನಗೆ ಮಾನಸಿಕ ಕಿರುಕುಳ ಅಂತ ಯುವ ಆರೋಪ
  • ಪತಿಗೆ ಬೇರೊಂದು ಸಂಬಂಧ ಇದೆ ಅಂತ ಶ್ರೀದೇವಿ ತಿರುಗೇಟು
  • ಡಿವೋರ್ಸ್ ಅರ್ಜಿ ವಿಚಾರಣೆಗೂ ಮುನ್ನವೇ ಶ್ರೀದೇವಿ ಅಟ್ಯಾಕ್‌!

ಜೂನಿಯರ್ ಪವರ್​ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ತಿದ್ದ ಯುವ ಅಲಿಯಾಸ್​​ ಗುರು ರಾಜಕುಮಾರ್ ವೈವಾಹಿಕ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ. ಸ್ಯಾಂಡಲ್​ವುಡ್​ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ದಾಖಲಾದಾಗಲೇ ಇದು ಬಿರುಗಾಳಿಯಂತೆ ಎಲ್ಲೆಡೆ ಹಬ್ಬಿತ್ತು. ಅಚ್ಚರಿಗೂ ಆಘಾತಕ್ಕೂ ಈ ವಿಷಯ ಕಾರಣ ಆಗಿತ್ತು. ಅದಕ್ಕೆ ಕಾರಣ, ಪತ್ನಿಯಿಂದ ಮಾನಸಿಕ ಕಿರುಕುಳ ಅಂತ ಯುವ ಆರೋಪಿಸಿದ್ದು, ಇದಕ್ಕೆ ಕೌಂಟರ್​ ಎನ್ನುವಂತೆ ಪತಿಗೆ ಬೇರೊಂದು ಸಂಬಂಧ ಇದೆ ಅಂತ ಶ್ರೀದೇವಿ ಗಂಭೀರ ಆರೋಪ ಮಾಡಿದ್ದರು.

Advertisment

ಇದನ್ನೂ ಓದಿ: ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಕೋರ್ಟ್‌ ಮಹತ್ವದ ಆದೇಶ; ಏನದು? 

ಯುವ-ಶ್ರೀದೇವಿಗೆ ಕೌನ್ಸೆಲಿಂಗ್.. ಆಗಸ್ಟ್​​ 23ಕ್ಕೆ ಹಾಜರಾಗಲು ಆದೇಶ
ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ದಾಂಪತ್ಯದ ಬಿರುಕು ಬೆಟ್ಟದಷ್ಟು ಬೆಳೆದಿದ್ದು, ವಕೀಲರನ್ನಿಟ್ಟು ಕೋರ್ಟ್​ನಲ್ಲಿ ಹೋರಾಡುವ ಹಂತಕ್ಕೆ ತಲುಪಿದೆ. ಇವತ್ತು ಅದ್ರ ಮುಂದುವರೆದ ಭಾಗವಾಗಿ, ಕೌಟುಂಬಿಕ ನ್ಯಾಯಾಲಯಕ್ಕೆ ಯುವ ಹಾಗೂ ಶ್ರೀದೇವಿ ಪರ ವಕೀಲರು ಹಾಜರಾಗಿದ್ದರು.

publive-image

ಇಬ್ಬರ ವಾದ ಆಲಿಸಿದ ನ್ಯಾಯಾಲಯ ಮೀಡಿಯೇಷನ್ ಕೌನ್ಸಲಿಂಗ್​ಗೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಆಗಸ್ಟ್ 23ಕ್ಕೆ ಮೀಡಿಯೇಷನ್ ಕೌನ್ಸೆಲಿಂಗ್​ ಇರಲಿದ್ದು, ಇದು ಮುಕ್ತಾಯವಾದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಆನಂತರವೇ ವಿಚ್ಚೇದನದ ಆಕ್ಷೇಪಣೆಯ ವಾದ ಕೇಳೋದಾಗಿ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ಆದೇಶ ನೀಡಿದ್ದಾರೆ.

Advertisment

publive-image

ಡಿವೋರ್ಸ್ ಅರ್ಜಿ ವಿಚಾರಣೆಗೆ ಮುನ್ನ ಶ್ರೀದೇವಿ ಮಹತ್ವದ ಪೋಸ್ಟ್
ಏನೇ ಎದುರಾದರೂ ಹೆದರಲ್ಲ ಅಂತಾ ಬರೆದುಕೊಂಡಿರೋ ಶ್ರೀದೇವಿ
ಕೋರ್ಟ್​ನಲ್ಲಿ ಯುವ-ಶ್ರೀದೇವಿ ಡಿವೋರ್ಸ್ ಅರ್ಜಿ ವಿಚಾರಣೆಗೂ ಮುನ್ನವೇ ಶ್ರೀದೇವಿ ಮಹತ್ವದ ಪೋಸ್ಟ್ ಒಂದನ್ನ ಮಾಡಿದ್ದಾರೆ.

‘ನನ್ನ ದಾರಿಗೆ ಏನೇ ಎದುರಾದರೂ ಹೆದರಲ್ಲ’

ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಾಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ.

ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ. ಆದರೂ ಸಹ, ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಕ್ರೌರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ.

ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ, ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ.

ಕಳೆದ 7 ತಿಂಗಳು ತೀವ್ರ ಒತ್ತಡ ಮತ್ತು ಆಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ ವಿಶೇಷವಾಗಿ ನನ್ನೊಂದಿಗೆ ದುಃಖಿಸಿ ಸಾಂತ್ವನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ.

ಹಾರ್ವಡ್​​ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ. ಈ ಸಮಯವು, ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ. ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ.
ಶ್ರೀದೇವಿ ಭೈರಪ್ಪ

ಇದನ್ನೂ ಓದಿ: ದರ್ಶನ್​ ಬೆನ್ನಿಗೆ ನಿಂತ ಸುಮಲತಾ ಅಂಬರೀಷ್​.. ಕೊನೆಗೂ ಮೊದಲ ಮಗನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ರು! 

Advertisment

ನಟ ಯುವರಾಜಕುಮಾರ್ ಹಾಗೂ ಶ್ರೀದೇವಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಈ ಬಿರುಕು ಯಾಕೋ ಸದ್ಯಕ್ಕೆ ಸರಿ ಹೋಗುವ ಲಕ್ಷಣ ಕಾಣಿಸುತ್ತಾ ಇಲ್ಲ. ಸದ್ಯ ಕೋರ್ಟ್​ ಆಗಸ್ಟ್​​ 23ರ ನಂತರವೇ ಇಬ್ಬರ ತೀರ್ಮಾನ ಕೇಳೋದಾಗಿ ಹೇಳಿದ್ದು, ಕೌನ್ಸಲಿಂಗ್​ ಇಬ್ಬರ ದಾಂಪತ್ಯ ಸರಿಪಡಿಸುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment