Advertisment

ಶಾಕಿಂಗ್ ನ್ಯೂಸ್.. 50 ವರ್ಷಗಳಲ್ಲೇ ಶ್ರೀನಗರದಲ್ಲಿ ಅತಿಹೆಚ್ಚು ಚಳಿಯ ದಾಖಲೆ; ಜಮ್ಮು-ಕಾಶ್ಮೀರ ಕಥೆ ಏನು?

author-image
Gopal Kulkarni
Updated On
ಶಾಕಿಂಗ್ ನ್ಯೂಸ್.. 50 ವರ್ಷಗಳಲ್ಲೇ ಶ್ರೀನಗರದಲ್ಲಿ ಅತಿಹೆಚ್ಚು ಚಳಿಯ ದಾಖಲೆ; ಜಮ್ಮು-ಕಾಶ್ಮೀರ ಕಥೆ ಏನು?
Advertisment
  • ಭೀಕರ ಚಳಿಗೆ ಗಡಗಡ ನಡುಗುತ್ತಿರುವ ಜಮ್ಮು ಕಾಶ್ಮೀರದ ರಾಜಧಾನಿ
  • ಬೇಸಿಗೆ ರಾಜಧಾನಿಯಲ್ಲಿ ದಾಖಲಾದ -8.5 ಡಿಗ್ರಿ ಸೆಲ್ಸಿಯಸ್ ತಾಪಮಾನ
  • 50 ವರ್ಷಗಳ ಬಳಿಕ ಶ್ರೀನಗರದಲ್ಲಿ ಈ ಮಟ್ಟಿಗೆ ತಾಪಮಾನ ಇಳಿಕೆಯಾಗಿದೆ​

ಭಾರತದ ಬೇಸಿಗೆಯ ರಾಜಧಾನಿ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಈ ಬಾರಿ ವಿಪರೀತ ಚಳಿಗೆ ಪತರಗುಟ್ಟಿ ಹೋಗಿದೆ. ಕಳೆದ 50 ವರ್ಷಗಳಲ್ಲಿ ಹಿಂದೆಂದೂ ಕಾಣದ ಚಳಿ ಈಗ ದಾಖಲಾಗಿದೆ. ಶ್ರೀನಗರ ಐದು ದಶಕಗಳ ಬಳಿಕ ಅತಿಯಾದ ಚಳಿಯ ರಾತ್ರಿಗೆ ಅದು ಸಾಕ್ಷಿಯಾಗಿದೆ. ತಾಪಮಾನ ಈಗಾಗಲೇ -8.5 ಡಿಗ್ರಿ ಸೆಲ್ಸಿಯಸ್​ ಹೋಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisment

ಶುಕ್ರವಾರ ಶ್ರೀನಗರದಲ್ಲಿನ ತಾಪಮಾನ ಸುಮಾರು -8.5ಗೆ ತಲುಪಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರ ರಾತ್ರಿ ಶ್ರೀನಗರದಲ್ಲಿ ಸುಮಾರು ಮೈನಸ್ 8.5 ರಷ್ಟು ತಾಪಮಾನ ದಾಖಲಾಗಿದ್ದು, 1974ರಲ್ಲಿ ಡಿಸೆಂಬರ್​​​ನಲ್ಲಿ ಅತ್ಯಂತ ಕಡಿಮೆ ತಾಪಮಾನ ಶ್ರೀನಗರದಲ್ಲಿ ದಾಖಲಾಗಿತ್ತು. ಅಂದು ದಾಖಲಾದ ಸುಮಾರು -10.3 ಡಿಗ್ರಿ ಸೆಲ್ಸಿಯಷ್ಟು ದಾಖಲಾಗಿದ್ದ ತಾಪಮಾನವೇ ಇಲ್ಲಿಯವರೆಗೂ ಹೆಚ್ಚು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:ಬೌ, ಬೌ ಆಯ್ತು ಈಗ ಕಾ, ಕಾ.. ಕಾಗೆ ಮಾಂಸದಲ್ಲಿ ಬಿರಿಯಾನಿ ಮಾಡಿ ತಿನ್ನಿಸುತ್ತಿದ್ದ ದಂಪತಿ ಬಂಧನ!

ಅದಾದ ನಂತರ ಅಂದ್ರೆ ಈ 50 ವರ್ಷಗಳ ಬಳಿಕ ಅದೇ ಮಾದರಿಯ ತಾಪಮಾನ ಶುಕ್ರವಾರ ರಾತ್ರಿ ಶ್ರೀನಗರದಲ್ಲಿ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಶ್ರೀನಗರ ಅತ್ಯಂತ ಭೀಕರ ಪ್ರಮಾಣದ ಚಳಿಯನ್ನು ಅನುಭವಿಸುತ್ತಿದೆ. ಇತ್ತ ಅನಂತನಾಗ್ ಜಿಲ್ಲೆಯ ಚಳಿಯ ಪ್ರಮಾಣ ಶ್ರೀನಗರವನ್ನು ಕೂಡ ಮೀರಿಸಿದೆ. ಶುಕ್ರವಾರ ಇಲ್ಲಿ ಸುಮಾರು -10.5 ರಷ್ಟು ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisment

ಈ ರೀತಿಯ ಚಳಿಗಾಲ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ನೀರು ಹೆಪ್ಪುಗಟ್ಟುತ್ತದೆ. ನಲ್ಲಿಯಲ್ಲಿ ಬರುವ ನೀರು ಕೂಡ ಬರುವುದಿಲ್ಲ. ಹೀಗಾಗಿ ಅಲ್ಲಿಯ ಜನರು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಮೂರು ನಾಲ್ಕು ವರ್ಷಗಳ ಬಳಿಕ ಈಗ ಈ ಪರಿಯ ಚಳಿಯ ಅನುಭವವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment