newsfirstkannada.com

ಬೌದ್ಧ ಧರ್ಮದ ಸಂಪ್ರದಾಯದಂತೆ ಶ್ರೀನಿವಾಸ್​ ಪ್ರಸಾದ್ ಅಂತ್ಯಕ್ರಿಯೆ; ಮಾಜಿ ಸಚಿವರಿಗೆ ಕೊನೆಯ ಸಂಸ್ಕಾರ ಎಲ್ಲಿ ಮಾಡ್ತಾರೆ?

Share :

Published April 29, 2024 at 10:35am

Update April 29, 2024 at 10:38am

    ಸಂಸದ ಶ್ರೀನಿವಾಸ್​ ಪ್ರಸಾದ್​​ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ

    76 ವರ್ಷ ವಯಸ್ಸಿನ ಮಾಜಿ ಸಚಿವ ಅನಾರೋಗ್ಯದಿಂದ ಬಳಲುತ್ತಿದ್ದರು

    ತಂದೆ ಅಂತಿಮ ಸಂಸ್ಕಾರದ ಬಗ್ಗೆ ಪುತ್ರಿ ಪ್ರತಿಮಾ ಏನಂದ್ರು?

ಮೈಸೂರು: ಸಂಸದ ಶ್ರೀನಿವಾಸ್​ ಪ್ರಸಾದ್​​ ಕೊನೆಯುಸಿರೆಳೆದಿದ್ದಾರೆ. 76 ವರ್ಷ ವಯಸ್ಸಿನ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶ್ರೀನಿವಾಸ್ ಪ್ರಸಾದ್ ಇವರ ಅಂತ್ಯಕ್ರಿಯೆ ನಾಳೆ ನೆರವೇರಲಿದೆ.

ಶ್ರೀನಿವಾಸ್ ಪ್ರಸಾದ್ ಅವರ ಪುತ್ರಿ ಪ್ರತಿಮಾ ತಂದೆಯ ಅಂತ್ಯಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ, ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನದ ತನಕ ಜಯಲಕ್ಷ್ಮಿಂ ಪುರಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ 1 ಗಂಟೆಗೆ ಅಶೋಕ್ ಪುರಂನ ಎನ್.ಟಿ.ಎಂ ಶಾಲೆಗೆ ಮೃತದೇಹ ರವಾನಿಸಲಾಗುತ್ತದೆ. ಬಳಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಮೋದಿ ಕಂಬನಿ, ಟ್ವೀಟ್ ಮಾಡಿ ಏನಂದ್ರು ಪ್ರಧಾನಿ..?

ಬಳಿಕ ಮಾತನಾಡಿದ ಪ್ರತಿಮಾ, ಬೆಳಿಗ್ಗೆ ಅಶೋಕ ಪುರಂನಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ‌ ಮಾನಂದವಾಡಿ ರಸ್ತೆಯಲ್ಲಿರುವ ಟ್ರಸ್ಟ್ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಬೌದ್ಧ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಿದ್ದೇವೆ. ಮೈಸೂರಿನ ಸಿಲ್ಕ್ ಫ್ಯಾಕ್ಟರಿ ಸರ್ಕಲ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೌದ್ಧ ಧರ್ಮದ ಸಂಪ್ರದಾಯದಂತೆ ಶ್ರೀನಿವಾಸ್​ ಪ್ರಸಾದ್ ಅಂತ್ಯಕ್ರಿಯೆ; ಮಾಜಿ ಸಚಿವರಿಗೆ ಕೊನೆಯ ಸಂಸ್ಕಾರ ಎಲ್ಲಿ ಮಾಡ್ತಾರೆ?

https://newsfirstlive.com/wp-content/uploads/2024/04/Srinivas-Prasad-2.jpg

Load More