/newsfirstlive-kannada/media/post_attachments/wp-content/uploads/2025/01/Sriram_Krishnan.jpg)
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರಿಗೆ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ಕ್ಯಾಪಿಟಲಿಸ್ಟ್, ಉದ್ಯಮಿ ಶ್ರೀರಾಮ ಕೃಷ್ಣನ್ ಅವರು ನೇಮಕವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಅತ್ಯುತ್ತಮ ಸಂಸ್ಥೆಯಾದ ಎಸ್​ಆರ್​ಎಂ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ ಆ್ಯಂಡ್ ಟೆಕ್ನಾಲಜಿ (ಎಸ್​ಆರ್​ಎಂಐಎಸ್​ಟಿ) ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.
/newsfirstlive-kannada/media/post_attachments/wp-content/uploads/2025/01/Sriram_Krishnan_2.jpg)
ಶ್ರೀರಾಮ ಕೃಷ್ಣನ್ ಅವರು ತಮಿಳುನಾಡಿನ ಚೆನ್ನೈ ಮೂಲದವರು ಆಗಿದ್ದಾರೆ. ಮೈಕ್ರೋಸಾಫ್ಟ್​ನ ಮಾಜಿ ಉದ್ಯೋಗಿ ಆಗಿರುವ ಇವರು ಅಮೆರಿಕದಲ್ಲಿ ಎಐನಲ್ಲಿ ಉನ್ನತ ಜ್ಞಾನ ಪಡೆದಿದ್ದಾರೆ. ಅಲ್ಲದೇ ಪ್ಯಾಪಾಲ್ (PayPal)ನ ಸಹಸಂಸ್ಥಾಪಕ ಮತ್ತು ಯಮ್ಮರ್ (Yammer) ಸಿಇಒ ಡೇವಿಡ್ ಒ. ಸ್ಯಾಕ್ಸ್ ಅವರೊಂದಿಗೆ ಸೇರಿ ಎಐನಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ತಮ್ಮದೇ ಹೆಸರಿನಿಂದ ಗುರುತಿಸಿಕೊಂಡಿದ್ದು ಇಂದು ವಿಶ್ವದ್ಯಾಂತ ಶ್ರೀರಾಮ ಕೃಷ್ಣನ್ ಪರಿಚಿತರು.
ಉದ್ಯಮಿ ಶ್ರೀರಾಮ ಕೃಷ್ಣನ್ ಅವರು ತಮಿಳುನಾಡಿನ ಕಟ್ಟನ್ಕುಳತ್ತೂರ್​ನಲ್ಲಿರುವ ಎಸ್​ಆರ್​ಎಂ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ ಆ್ಯಂಡ್ ಟೆಕ್ನಾಲಜಿ (ಎಸ್​ಆರ್​ಎಂಐಎಸ್​ಟಿ) ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಸದ್ಯ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ AI ತಂತ್ರಜ್ಞಾನದ ಹಿರಿಯ ಸಲಹೆಗಾರರಾಗಿ ಶ್ರೀರಾಮ ಕೃಷ್ಣನ್ ನೇಮಕವಾಗುತ್ತಿದ್ದಂತೆ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿ.. ರಾಶಿ ರಾಶಿ ಚಿನ್ನ ಕಂಡು ಶಾಕ್
ಈ ಸಂಬಂಧ ಪ್ರತಿಕ್ರಿಯಿಸಿರುವ ಶ್ರೀರಾಮ್ ಕೃಷ್ಣನ್ ಅವರು ದೇಶಕ್ಕೆ ಸೇವೆ ಸಲ್ಲಿಸಲು, ನನ್ನ ಸಾಮರ್ಥ್ಯ ಗೊತ್ತುಪಡಿಸಲು ನನಗೊಂದು ಅವಕಾಶ ಸಿಕ್ಕಿದೆ. ಡೇವಿಡ್ ಸ್ಯಾಕ್ಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಅವರೊಂದಿಗಿನ ಕೆಲಸ ನನಗೆ ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/11/Donald-Trump.jpg)
ಶ್ರೀರಾಮ್ ಕೃಷ್ಣನ್ ಅವರು 1983ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಉನ್ನತ ವ್ಯಾಸಂಗದಲ್ಲಿ ಮಾಹಿತಿ ತಂತ್ರಜ್ಞಾನ (Information Technology) ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ಎಸ್​ಆರ್​ಎಂ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ ಆ್ಯಂಡ್ ಟೆಕ್ನಾಲಜಿಯಲ್ಲಿ 2005ರಲ್ಲಿ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ಭಾರತದ ಒಂದು ನಗರದಿಂದ ಜಾಗತಿಕ ತಂತ್ರಜ್ಞಾನದ ಹಂತಕ್ಕೆ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us