ಇನ್ಮುಂದೆ ನಾನು ಸುಮ್ಮನಿರಲ್ಲ.. ಪಕ್ಷ ಬಿಡುವ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ಬಿಜೆಪಿಗೆ ಖಡಕ್ ಎಚ್ಚರಿಕೆ!

author-image
admin
Updated On
ಸಿದ್ದು, ಡಿಕೆಶಿಯನ್ನ ಕಟ್ಟಿ ಹಾಕ್ತಾರಾ ವಿಜಯೇಂದ್ರ..? ಬಿಜೆಪಿ ರಾಜ್ಯಾಧ್ಯಕ್ಷರ ಮುಂದಿನ ಚಾಲೆಂಜ್​ಗಳೇನು..?
Advertisment
  • ಇನ್ಮುಂದೆ ನನಗೆ ಅಪಮಾನ ಮಾಡಿದ್ರೆ ನಾನೂ ಸುಮ್ಮನಿರಲ್ಲ
  • ನಾವು ಕೂಡ ಬೀದಿಗಿಳಿದು ಮಾತನಾಡುವ ಮಂದಿನೇ ಎಂದ ರಾಮುಲು
  • ಹೈಕಮಾಂಡ್‌ ಯಾರು ದುಡಿತಾರೋ ಅಂತವರನ್ನ ಗೌರವಿಸಿ ಗುರುತಿಸಬೇಕು

ಗದಗ: ರಾಜ್ಯ ಬಿಜೆಪಿ ನಾಯಕರ ಮೇಲೆ ಮಾಜಿ ಸಚಿವ ಶ್ರೀರಾಮುಲು ಸಿಡಿದೆದ್ದಿದ್ದಾರೆ. ಇತ್ತೀಚೆಗೆ ನಡೆದ ಬೆಳವಣಿಗೆ ಹಾಗೂ ಜನಾರ್ದನ ರೆಡ್ಡಿ ಅವರ ವಾಗ್ಯುದ್ಧ ತಿರುಗೇಟು ನೀಡಿದ್ದಾರೆ. ಇನ್ಮುಂದೆ ನನಗೆ ಅಪಮಾನ ಮಾಡಿದ್ರೆ ನಾನೂ ಸುಮ್ಮನಿರಲ್ಲ. ನಾವು ಕೂಡ ಬೀದಿಗಿಳಿದು ಮಾತನಾಡುವ ಮಂದಿನೇ ಎಂದು ಎಚ್ಚರಿಸಿದ್ದಾರೆ.

ಪರೋಕ್ಷವಾಗಿ ಮಾತನಾಡಿರುವ ಶ್ರೀರಾಮುಲು ಕೆಲವು ಮಂದಿ ಮಾತನಾಡಿ ದೊಡ್ಡವರಾಗಿರುತ್ತಾರೆ. ಅಂತವರ ಬಗ್ಗೆ ಕಿವಿಕೊಡುವ ಅಗತ್ಯವಿಲ್ಲ. ಅಂತವರ ಬಗ್ಗೆ ಕೇಳುವ ಅಗತ್ಯವಿಲ್ಲ. ಯಾರು ಫೀಲ್ಡ್‌ನಲ್ಲಿ ಕೆಲಸ ಮಾಡ್ತಾರೆ ಅಂತವರನ್ನ ಗುರುತಿಸಬೇಕು.

publive-image

ರಾಜ್ಯ ರಾಜಕಾರಣದಲ್ಲಿ 7-8 ಪರ್ಸೆಂಟ್ ಜನರ ವೋಟ್ ಸೆಳೆಯೋ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಆಗಬೇಕು. ಆಗ ಮಾತ್ರ 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಇದನ್ನೆಲ್ಲ ರಾಷ್ಟ್ರೀಯ ನಾಯಕರೇ ಸರಿಪಡಿಸಬೇಕು. ರಾಷ್ಟ್ರೀಯ ನಾಯಕರು ಯಾರು ದುಡಿತಾರೋ ಅಂತವರನ್ನ ಗೌರವಿಸಿ ಗುರುತಿಸಬೇಕು. ಅಂದಾಗ ಮಾತ್ರ ಸ್ವಾಭಿಮಾನ ಬಂದು ಪಕ್ಷಕ್ಕಾಗಿ ದುಡಿಯುತ್ತಾನೆ. ಅತಿ ಹೆಚ್ಚು ವೋಟ್ ತರುತ್ತಾನೆ.

ಇದನ್ನೂ ಓದಿ: ಬಿಜೆಪಿಗೆ ಶ್ರೀರಾಮುಲು ರಾಜೀನಾಮೆ ಹೇಳಿಕೆಗೆ ಡಿಕೆಶಿ ನಂಟು? ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ 

ದೆಹಲಿಗೆ ಹೋಗಿ ಎಲ್ಲಾ ವಿಚಾರವನ್ನು ಹೇಳಿ ಬರುತ್ತೇನೆ. ರಾಮುಲು ಸುಮ್ಮನೆ ಇದ್ರು, ಇದ್ರು ಅಂತಾ ಹೇಳುತ್ತಿದ್ರು. ಇನ್ನು ಮುಂದೆ ಸುಮ್ಮನೆ ಇರೋದಿಲ್ಲ. ಇನ್ನು ಮುಂದೆ ನಾನು ಮಾತಾಡುತ್ತೇನೆ. ಯಾರ ಮುಲಾಜು ಇಲ್ದೇ ಮಾತಾಡುತ್ತೇನೆ. ಮಾತಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಸುಮ್ಮನೆ ಇದ್ದೆ. ಈ ಬಾರಿ ನಮ್ಮಂತಹರನ್ನ ಅಪಮಾನ ಮಾಡಿದ್ರೆ ಯಾವುದನ್ನು ಲೆಕ್ಕ ಮಾಡಲ್ಲ ಎಂದು ರಾಮುಲು ಸ್ಪಷ್ಟಪಡಿಸಿದ್ದಾರೆ.

publive-image

ರಾಮುಲು ಅವರು ಯಾವತ್ತೂ ಪಾರ್ಟಿ ಬಿಟ್ಟು ಹೋಗಲ್ಲ ಇದು ರಾಜ್ಯದ ಜನ್ರಿಗೆ ಗೊತ್ತಿದೆ. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ವಾ. ನಾನು ಹೋಗಬೇಕೆಂದ್ರೆ ನನ್ನನ್ನು ತಡೆಯೋಕೆ ಆಗುತ್ತಾ? ಜೈಲಿನಲ್ಲಿ ಇಡೋದಕ್ಕೆ ಆಗುತ್ತಾ? ಈಗಿನ ಕಾಲದಲ್ಲಿ ಯಾರು ಯಾರ ಮಾತು ಕೇಳೋಲ್ಲ. ಕೆಲಸ ಮಾಡೋಕೆ ನಮಗೆ ಆಕ್ಸಿಜನ್ ಅನ್ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ತುಂಬಬೇಕು. ಎನರ್ಜಿ ತುಂಬಲಿಲ್ಲ, ಕಾನ್ಫಿಡೆನ್ಸ್ ತುಂಬಲಿಲ್ಲ ಅಂದ್ರೆ ಶಕ್ತಿವಂತರು ಇದ್ರು ನಿಸಾಯಕರಾಗುತ್ತಾರೆ. ಕೆಲಸ ಬರಲ್ಲ ಅಂತಾ ಹೇಳಿದ್ರೆ ನಾವು ನಮ್ಮ ಶಕ್ತಿ ತೋರಿಸಬೇಕಾಗುತ್ತೆ ಎಂದು ರಾಮುಲು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment