Advertisment

ಧಾರಾಕಾರ ಮಳೆ, ಮೈಸೂರು- ಬೆಂಗಳೂರು ಹೆದ್ದಾರಿಗೆ ಹರಿದು ಬಂದ ನೀರು.. ಕೆರೆಯಂತಾದ ಹೈವೇ

author-image
Bheemappa
Updated On
ಧಾರಾಕಾರ ಮಳೆ, ಮೈಸೂರು- ಬೆಂಗಳೂರು ಹೆದ್ದಾರಿಗೆ ಹರಿದು ಬಂದ ನೀರು.. ಕೆರೆಯಂತಾದ ಹೈವೇ
Advertisment
  • ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕೆರೆಯಂತಾದ ಹೈವೇ
  • ಬೈಕ್ ಸವಾರರು ಮಳೆ ನೀರಿನಲ್ಲಿ ಹೋಗಲು ಹಿಂದೇಟು
  • ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ನಿಂತ ಮಳೆನೀರು

ಮಂಡ್ಯ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿ ಅವಾಂತರ ಸೃಷ್ಟಿಸಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು ಜನರು ಹೈರಾಣಾಗಿದ್ದಾರೆ. ಅಲ್ಲದೇ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹಳೆ ಮೈಸೂರು- ಬೆಂಗಳೂರು ಹೆದ್ದಾರಿಗೆ ಹೆಚ್ಚಿನ ಮಟ್ಟದಲ್ಲಿ ಮಳೆನೀರು ಹರಿದು ಬಂದು ಸಮಸ್ಯೆ ತಂದೊಡ್ಡಿದೆ.

Advertisment

ಶ್ರೀರಂಗಪಟ್ಟಣದ ಅಗ್ನಿಶಾಮಕ ದಳದ ಎದುರುಗೆ ಇರುವ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆನೀರು ಹೆಚ್ಚಿನ ಮಟ್ಟದಲ್ಲಿ ನಿಂತಿದೆ. ಇದರಿಂದ ಆ ರಸ್ತೆಯಲ್ಲಿ ಓಡಾಡುವಂತ ವಾಹನ ಸವಾರರು ಸಮಸ್ಯೆ ಎದುರಿಸುವಂತೆ ಅಗಿದೆ. ಹೆದ್ದಾರಿಯಲ್ಲಿ 2 ಅಡಿಯಷ್ಟು ನೀರುನಿಂತಿದ್ದರಿಂದ ಬೈಕ್ ಸವಾರರು ಹೋಗಬೇಕೋ, ಬೇಡ್ವೋ ಎನ್ನುವ ಗೊಂದಲದಲ್ಲಿ ತೊಡಗಿದ್ದಾರೆ. ಇನ್ನು ಕಾರು, ಬಸ್​, ಲಾರಿಯಂತಹ ವಾಹನಗಳು ನಿಂತಿರು ಮಳೆನೀರಿನಲ್ಲೇ ಹೋಗುತ್ತಿವೆ.

ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ

publive-image

ಶ್ರೀರಂಗಪಟ್ಟಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ ಮೈಸೂರು- ಬೆಂಗಳೂರು ಹೆದ್ದಾರಿ ಮಳೆನೀರಿನಿಂದ ತುಂಬಿತ್ತು. ಇಂದು ಬೆಳಗ್ಗೆವರೆಗೆ ನೀರು ಹೆಚ್ಚಾಗಿ ನಿಂತಿದ್ದರಿಂದ ವಾಹನಗಳು ಮೆಲ್ಲಗೆ ಚಲಿಸಿದ್ದಾವೆ. ಸದ್ಯ ರಸ್ತೆಯಲ್ಲಿದ್ದ ನೀರು ತೆರವು ಮಾಡಲಾಗಿದ್ದು ಇದೀಗ ಎಂದಿನಂತೆ ವಾಹನ ಸಂಚಾರ ಪ್ರಾರಂಭವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment