/newsfirstlive-kannada/media/post_attachments/wp-content/uploads/2025/03/srirastu-subhamastu-serial1.jpg)
ಶ್ರೀರಸ್ತು ಶುಭಮಸ್ತು ಒಂದೋಳ್ಳೆ ಕೌಟಂಬಿಕ ಸ್ಟೋರಿ. ತುಳಿಸಿ ಮಾಧವನ ಕುಟುಂಬ ಒಗ್ಗಟ್ಟನಿಂದ ಸಾಗ್ತಿದೆ. ಮಕ್ಕಳ ನಡುವೆ ಸೌಹಾರ್ದತೆ ಮೂಡಿದ್ದು, ದೀಪಿಕಾ ಹಾಗೂ ಪೂರ್ಣಿ ಕೂಡ ಒಂದಾಗಿದ್ದಾರೆ. ಈ ತುಂಬು ಕುಟುಂಬಕ್ಕೆ ಹೊಸ ಅತಿಥಿ ಬಂದಿರೋ ನಿಮಗೆ ಗೊತ್ತೇ ಇದೆ. ಅದೇ ತುಳಿಸಿ ಮಗು.
ಇದನ್ನೂ ಓದಿ:ರಕ್ಷಕ್ಗೆ ಕಪ್ಪು ಮಸಿ ಹಾಕ್ತೀವಿ.. ಹಿಂದೂ ಮುಖಂಡ ಖಡಕ್ ಎಚ್ಚರಿಕೆ!
ಮಗು ಬಂದ್ಮೇಲೆ ಪ್ರತಿ ದೃಶ್ಯಗಳು ಲವಿಲವಿಕೆಯಿಂದ ಕೂಡಿವೆ. ಮಗು ಮನೆಗೆ ನಗು ತರುತ್ತೆ ಅನ್ನೋದು ಖಂಡಿತ ಸತ್ಯ. ತೆರೆಮೇಲೆ ಹೇಗೆ ಸಂಭ್ರಮಿಸ್ತಿದ್ದಾರೋ.. ಅಷ್ಟೇ ಖುಷಿ, ಸಂಭ್ರಮ ಶೂಟಿಂಗ್ ವೇಳೆ ನಡೀತಿರುತ್ತೆ. ಮಗು ಜೊತೆ ಆಟ ಆಡೋದೇ ಫುಲ್ ಟೈಮ್ ಡ್ಯುಟಿ ಆಗಿದೆ.
ಮಗು ಬಂದಿರೋ ಖುಷಿ ಜೊತೆಗೆ ಶ್ರೀರಸ್ತು ಶುಭಮಸ್ತು 700 ಸಂಚಿಕೆಗಳನ್ನ ಪೂರೈಸಿದೆ. ಕೇಕ್ ಕಟ್ ಮಾಡೋ ಮೂಲಕ ಇಡೀ ತಂಡ ಸೆಲೆಬ್ರೇಟ್ ಮಾಡಿದೆ. ನೆಗೆಟಿವ್ ಪಾತ್ರಗಳಲ್ಲೇ ಒಳ್ಳೆಯವರಾಗಿ ಬದಲಾಗಿವೆ. ಇನ್ನು ಉಳಿದಿರೋದು ಶ್ರಾವರಿ ಮಾತ್ರ. ಈ ಪಾತ್ರದ ಮುಖವಾಡ ಕಳಚಿತಿನಿ ಅಂತ ತುಳಿಸಿ ಸವಾಲ್ ಹಾಕಿದ್ದಾಳೆ. ಸದ್ಯದಲ್ಲೇ ಶ್ರಾವರಿ ಬಣ್ಣ ಬಯಲಾಗಲಿದೆ ಅಂದಂಗಾಯ್ತು.
ಇದೇಲ್ಲಾ ನೋಡ್ತಿದ್ರೇ ಇನ್ನೊಂದು ಡೌಟ್ ಶುರುವಾಗುತ್ತೆ ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗಲಿದ್ಯಾ? ಇದಕ್ಕೆ ಪುಷ್ಟಿ ಕೊಡುವಂತೆ ಹೊಸ ಧಾರಾವಾಹಿಗಳು ಬರೋದಕ್ಕೆ ಸಜ್ಜಾಗಿವೆ. ಕಿರಣ್ ರಾಜ್ ಅಭಿನಯದ ಕರ್ಣ ರೆಡಿಯಾಗ್ತಿದೆ. ಅದೇ ರೀತಿ ರಾಯರ ಪವಾಡಗಳ ಕಥೆ ಹೊಂದಿರೋ ಶ್ರೀ ರಾಘವೇಂದ್ರ ವೈಭವ ಕೂಡ ಅನೌನ್ಸ್ ಆಗಿದೆ.
ಹೀಗಾಗಿ ಶ್ರೀರಸ್ತು ಶುಭಮಸ್ತು ಮುಕ್ತಾಯ ಕಾಣಬಹುದು ಎನ್ನಲಾಗ್ತಿದೆ. ಒಟ್ಟಿನಲ್ಲಿ ಮಗು ಇರೋ ಸಂಚಿಕೆಗಳು ವೀಕ್ಷಕರಿಗೆ ಖುಷಿ ಕೊಟ್ಟಿವೆ. ಜೊತೆಗೆ ಹೈ ಕಾಂಪಿಟೇಶನ್ ಇರೋ ಪರಿಸ್ಥಿತಿಯಲ್ಲಿ 700 ಸಂಚಿಕೆ ಪೊರೈಸಿರೋದು ಸಾಮಾನ್ಯದ ಮಾತಲ್ಲ. ನಮ್ಮ ಕಡೆಯಿಂದ ಇಡಿ ತಂಡಕ್ಕೆ ಅಭಿನಂದನೆಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ