/newsfirstlive-kannada/media/post_attachments/wp-content/uploads/2024/11/pilot-Srishti-Tuli-1.jpg)
ಮುಂಬೈ: ಬಾಯ್ ಫ್ರೆಂಡ್ ಮಾತು, ನಿಂದನೆಗೆ ಮನನೊಂದ ಪೈಲಟ್ ಪ್ರಾಣ ಬಿಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಜೀವ ಬಿಟ್ಟ ಪೈಲಟ್ ಹೆಸರು ಸೃಷ್ಟಿ ಟುಲಿ. ಪೈಲಟ್ ಸೃಷ್ಟಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಯ್‌ಫ್ರೆಂಡ್ ಆದಿತ್ಯ ಪಂಡಿತ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.
ಸೃಷ್ಟಿ ಟುಲಿ ಅವರು ಉತ್ತರ ಪ್ರದೇಶ ಗೋರಖ್‌ಪುರ ಮೂಲದವರು. ಗೋರಖ್‌ಪುರದ ಮೊಟ್ಟ ಮೊದಲ ಮಹಿಳಾ ಪೈಲಟ್ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದರು. ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಸೃಷ್ಟಿ ಮುಂಬೈನ ಮರೋಲ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ನಾನ್ ವೆಜ್ ಊಟಕ್ಕೆ ಜಗಳ!
ಎರಡು ದಿನಗಳ ಹಿಂದೆ ಪೈಲಟ್ ಸೃಷ್ಟಿ ಹಾಗೂ ಬಾಯ್‌ಫ್ರೆಂಡ್ ಆದಿತ್ಯ ಪಂಡಿತ್ ಒಂದು ಪಾರ್ಟಿಗೆ ಹೋಗಿದ್ದರು. ಅಲ್ಲಿ ಸೃಷ್ಟಿಗೆ ನಾನ್ ವೆಜ್ ಊಟ ಮಾಡದಂತೆ ಆದಿತ್ಯ ಪಂಡಿತ್ ತಡೆದು ಅಪಮಾನಿಸಿದ್ದಾನೆ ಎನ್ನಲಾಗಿದೆ.
ನವೆಂಬರ್ 25ರಂದು ಬಾಯ್‌ಫ್ರೆಂಡ್ ಆದಿತ್ಯ ಸಾರ್ವಜನಿಕವಾಗಿ ಸೃಷ್ಟಿಯನ್ನು ಅಪಮಾನ ಮಾಡಿದ್ದಕ್ಕೆ ನೊಂದು ಸೃಷ್ಟಿಗೆ ಜೀವ ಕಳೆದುಕೊಂಡಿದ್ದಾರೆ. ಸೃಷ್ಟಿಗೆ ಮಾನಸಿಕ ಕಿರುಕುಳ ನೀಡಿ, ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಆದಿತ್ಯ ಪಂಡಿತ್ ಅವರು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅಜ್ಮೀರ್ ದರ್ಗಾವೂ ಹಿಂದೂ ದೇವಸ್ಥಾನದ ಮೇಲೆ ಕಟ್ಟಲಾಗಿದೆ -ಕೋರ್ಟ್ ಕಟಕಟೆಯಲ್ಲಿ ಮತ್ತೊಂದು ವಿವಾದ
ಸೃಷ್ಟಿ ಅವರ ಚಿಕ್ಕಪ್ಪ ವಿವೇಕ್ ಟುಲಿ ಅವರು ಸೃಷ್ಟಿಗೆ ದೆಹಲಿ ಮೂಲದ ಆದಿತ್ಯ ಪೈಲಟ್ ಟ್ರೇನಿಂಗ್ ವೇಳೆ ಪರಿಚಯ ಆಗಿದ್ದ. ಆದರೆ ಆದಿತ್ಯ ಪೈಲಟ್ ಟ್ರೇನಿಂಗ್ ಪೂರ್ತಿಗೊಳಿಸಿಲ್ಲ. ಆಕೆಯ ಬಗ್ಗೆ ಅಸೂಯೆ ಇತ್ತು. ಸೃಷ್ಟಿ ಬ್ಯಾಂಕ್ ಖಾತೆಯಿಂದ ಆದಿತ್ಯ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆಯಾಗಿದೆ. ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಸೃಷ್ಟಿ ಸ್ಟ್ರಾಂಗ್ ಆಗಿದ್ದರಿಂದ ಪೈಲಟ್ ಆಗಿದ್ದಳು. ಇದೊಂದು ಉದ್ದೇಶಿತ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೃಷ್ಟಿ ಪೋಷಕರು 20 ನಿಮಿಷದ ಕೊನೆ ವಿಡಿಯೋ, 3 ಪುಟದ ಡೆತ್ ನೋಟ್‌ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಸೃಷ್ಟಿ ಅವರ ಬಾಯ್‌ಫ್ರೆಂಡ್ ಆದಿತ್ಯರನ್ನು ಬಂಧಿಸಿರುವ ಪೊಲೀಸರು 4 ದಿನ ಕಸ್ಟಡಿಗೆ ಪಡೆದಿದ್ದಾರೆ. ಆದಿತ್ಯ ಅವರು ಸೃಷ್ಟಿಗೆ ನಾನ್ ವೆಜ್ ಮಾಡದಂತೆ ತಡೆದು ಅವಮಾನಿಸಿದ್ದು ಈ ಘಟನೆಗೆ ಕಾರಣ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ