Advertisment

39 ಸಾವಿರಕ್ಕೂ ಅಧಿಕ ಸರ್ಕಾರಿ ಉದ್ಯೋಗಗಳು.. ಜಸ್ಟ್ SSLC ಪಾಸ್ ಆಗಿದ್ರೆ ಸಾಕು, ಜಾಬ್ ಸಿಗುತ್ತೆ

author-image
Bheemappa
Updated On
39 ಸಾವಿರಕ್ಕೂ ಅಧಿಕ ಸರ್ಕಾರಿ ಉದ್ಯೋಗಗಳು.. ಜಸ್ಟ್ SSLC ಪಾಸ್ ಆಗಿದ್ರೆ ಸಾಕು, ಜಾಬ್ ಸಿಗುತ್ತೆ
Advertisment
  • ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅವಕಾಶ
  • ಸಾವಿರಲ್ಲ, 10 ಸಾವಿರವಲ್ಲ 39 ಸಾವಿರಕ್ಕೂ ಹೆಚ್ಚು ಉದ್ಯೋಗ
  • ಈಗಾಗಲೇ ಅರ್ಜಿಗಳು ಆರಂಭ, ಅಭ್ಯರ್ಥಿಗಳು ಅಪ್ಲೇ ಮಾಡಿ

ಕೇಂದ್ರ ಸರ್ಕಾರದಡಿ ಕೆಲಸ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಇಡೀ ದೇಶದ್ಯಾಂತ ಸಾಕಷ್ಟು ಹುದ್ದೆಗಳನ್ನು ಈಗಾಗಲೇ ಕಾಲ್​ಫಾರ್ಮ್ ಮಾಡಲಾಗಿದೆ. ಕೆಲಸ ಇಲ್ಲ.. ಕೆಲಸ ಇಲ್ಲ ಎಂದು ಸಾಕಷ್ಟು ಓದಿ ಮನೆಯಲ್ಲಿ ಕುಳಿತ ಅಭ್ಯರ್ಥಿಗಳಿಗೆ ಇದೊಂದು ಸದಾವಕಾಶವಾಗಿದೆ. ಕೇಂದ್ರ ಸರ್ಕಾರದ ಭದ್ರತಾ ಇಲಾಖೆಗಳಲ್ಲಿ ಖಾಲಿ ಇರುವಂತ ಉದ್ಯೋಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನ ಮಾಡಲಾಗಿದೆ.

Advertisment

ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅರೆಸೇನಾ ಸಂಸ್ಥೆಗಳಿಗೆ ಭಾರೀ ಸಂಖ್ಯೆಯಲ್ಲಿ ಕೆಲಸಗಾರರು ಬೇಕಾಗಿದ್ದಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಳಿಗೆ ಆಹ್ವಾನ ಮಾಡಲಾಗಿದೆ. ಇಷ್ಟ ಇರುವಂತ ವಿದ್ಯಾರ್ಥಿಗಳು ಹಾಗೂ ಆಭ್ಯರ್ಥಿಗಳು ಈ ಉದ್ಯೋಗಗಳಿಗೆ ಅಪ್ಲೆ ಮಾಡಬಹುದು. ಕೇಂದ್ರ ಸರ್ಕಾರದ ಕೆಲಸವೆಂದರೆ ಇನ್ನು ಸಂಬಳದ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲ ಎಂದು ಹೇಳಬಹುದು.

ಇದನ್ನೂ ಓದಿ: ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!

ಸ್ಟಾಪ್​ ಸೆಲೆಕ್ಷನ್ ಕಮಿಟಿ (ಎಸ್​​ಎಸ್​ಸಿ)ಯು ಕಾನ್​​ಸ್ಟೆಬಲ್, ಸಿಪಾಯಿ ಹಾಗೂ ರೈಫಲ್‌ಮ್ಯಾನ್ (ಜನರಲ್ ಡ್ಯುಟಿ) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ಈ ಹುದ್ದೆಗಳ ನೋಟಿಫಿಕೇಶನ್ ರಿಲೀಸ್ ಮಾಡಿದ್ದು, ಅರ್ಜಿಗಳು ಕೂಡ ಆರಂಭವಾಗಿವೆ. ಹೀಗಾಗಿ ತಕ್ಷಣದಿಂದಲೇ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.

Advertisment

publive-image

ಉದ್ಯೋಗಗಳಿಗೆ ಅಲೆಯುತ್ತಿರುವ ಯುವಕ, ಯುವತಿಯರಿಗೆ ಇದೊಂದು ಕಾಲ್​ಫಾರ್ಮ್ ಅಕ್ಷಯ ಪಾತ್ರೆಯಂತೆ. ಒಂದು ಸಾವಿರ ಅಲ್ಲ, ಎರಡು ಸಾವಿರವಲ್ಲ ಬರೋಬ್ಬರಿ 39,481 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನ ಕರೆಯಲಾಗಿದೆ. ಈ ಹುದ್ದೆಗಳಿಗೆ ಬೇಕಾದ ವಿದ್ಯಾಭ್ಯಾಸ 10ನೇ ತರಗತಿ ಪಾಸ್ ಆಗಿದ್ದರೇ ಸಾಕು. ಇನ್ನು ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಇತ್ಯಾದಿಗಳ ಮಾಹಿತಿ ಕಳಗೆ ನೀಡಿರುವ ಲಿಂಕ್​​ನಲ್ಲಿದೆ. ಸಂಪೂರ್ಣವಾಗಿ ಈ ಆರ್ಟಿಕಲ್ ಅನ್ನು ಮನನ ಮಾಡಿಕೊಳ್ಳಬೇಕು.

ಮಹಿಳೆಯರಿಗೆ ಎಷ್ಟು ಸಾವಿರ ಉದ್ಯೋಗಗಳಿವೆ..?

ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅರೆಸೇನಾ ಸಂಸ್ಥೆಗಳಾದ ಬಿಎಸ್​ಎಫ್​, ಸಿಐಎಸ್​ಎಫ್, ಸಿಆರ್​ಪಿಎಲ್​, ಎಸ್​ಎಸ್​ಬಿ, ಐಟಿಬಿಪಿ, ಎಆರ್, ಎಸ್​ಎಸ್​ಎಫ್​ ಹಾಗೂ ಎನ್​​ಸಿಎಫ್​​ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲೆಂದು ಇದೀಗ ಅರ್ಜಿಗಳನ್ನು ಅಹ್ವಾನಿಸಿದೆ. ಇದರಲ್ಲಿ 35,612 ಪುರುಷರಿಗೆ ಉದ್ಯೋಗ ಹಾಗೂ 3,869 ಮಹಿಳಾ ಉದ್ಯೋಗಗಳಿವೆ. ಇದರಿಂದ ಯುವಕ, ಯುವತಿಯರು ಇಬ್ಬರು ಅಪ್ಲೇ ಮಾಡಬಹುದಾಗಿದೆ. ಈ ಅರ್ಜಿಗಳು ಇದೇ ಸೆಪ್ಟೆಂಬರ್ 05 ರಿಂದ ಪ್ರಾರಂಭವಾಗಿದ್ದು ಅಕ್ಟೋಬರ್​ 14 ಕೊನೆ ದಿನಾಂಕವಾಗಿದೆ.

ಇದನ್ನೂ ಓದಿ:ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?

Advertisment

ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮೂಲಕ ನಡೆಸಲಾಗುತ್ತದೆ. ಅಭ್ಯರ್ಥಿಗಳು ಸಂಪೂರ್ಣ ವಿವರಗಳು ಮತ್ತು ಅರ್ಹತಾ ಅವಶ್ಯಕತೆಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕವಾಗಿರುವುದರಿಂದ, ಅಭ್ಯರ್ಥಿಗಳು ಕಂಪ್ಯೂಟರ್ ಬೇಸ್ ಟೆಸ್ಟ್ (CBT) ಮತ್ತು ದೈಹಿಕ ಪರೀಕ್ಷೆಗಳಿಗೆ ಅರ್ಜಿ ಹಾಕಿದಾಗಿನಿಂದ ಶ್ರದ್ಧೆಯಿಂದ ತಯಾರಿ ನಡೆಸಬೇಕು.

ಅಭ್ಯರ್ಥಿಗಳು ಅಪ್ಲೇ ಮಾಡುವ ಲಿಂಕ್- https://ssc.gov.in/login

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment