/newsfirstlive-kannada/media/post_attachments/wp-content/uploads/2023/09/9_11_BOARD_EXAMS_1.jpg)
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, 2023-24ನೇ ಸಾಲಿನ ಮಾರ್ಚ್/ ಏಪ್ರಿಲ್ 2024ರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತಿಯ PUC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ದ್ವಿತಿಯ ಪಿಯುಸಿ ಪರೀಕ್ಷೆಯು ಮಾರ್ಚ್​​ 2 ರಂದು ಪ್ರಾರಂಭವಾಗಿ ಮಾರ್ಚ್​ 22ಕ್ಕೆ ಮುಗಿಯಲಿವೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗಳು ನಡೆಯಲಿವೆ.
ಪಿಯುಸಿ ಪರೀಕ್ಷೆ ಮುಗಿದ 3ನೇ ದಿನಕ್ಕೆ SSLC ಪರೀಕ್ಷೆ ಆರಂಭವಾಗಲಿದೆ. ಮಂಡಳಿ ರಿಲೀಸ್ ಮಾಡಿರುವ ಟೈಮ್​​ ಟೇಬಲ್​​​ನಲ್ಲಿ ಮಾರ್ಚ್​ 25 ರಂದು SSLC ಎಕ್ಸಾಮ್ ಪ್ರಾರಂಭವಾಗಿ ಏಪ್ರಿಲ್​ 6 ರಕ್ಕೆ ಕೊನೆ ಪರೀಕ್ಷೆ ನಡೆಯಲಿದೆ.
ಸದ್ಯ ಬಿಡುಗಡೆ ಮಾಡಿರುವ ಟೈಮ್​ ಟೇಬಲ್​ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು 15 ದಿನಗಳ ಒಳಗೆ ಸಲ್ಲಿಸಬಹುದು. ಡಿಸೆಂಬರ್ 1 ರಿಂದ ಡಿಸೆಂಬರ್​ 15ರ ಒಳಗೆ ಆಕ್ಷೇಪಣೆಗಳನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು. [email protected]ಗೆ ಇ-ಮೇಲ್ ಮಾಡಬಹುದು ಎಂದು ಮಂಡಳಿ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us