/newsfirstlive-kannada/media/post_attachments/wp-content/uploads/2025/05/SSLC-Exam-result-2025.jpg)
SSLC ಮತ್ತು ದ್ವಿತೀಯ PUC ಪರೀಕ್ಷೆ- 01 ರ ಫಲಿತಾಂಶ ಬಂದಾಗಿದೆ. ಹೇಳಿ ಕೊಳ್ಳುವಂತಹ ಸುಧಾರಣೆ ಈ ಬಾರಿಯೂ ಕಂಡಿಲ್ಲ. ವೆಬ್ ಕಾಸ್ಟಿಂಗ್ ಸಿಸಿಟಿವಿ ವ್ಯವಸ್ಥೆ ಹೀಗೆ ನಾನಾ ಕಾರಣ ಶಿಕ್ಷಣ ಇಲಾಖೆ ಕೊಟ್ಟರೂ ಶೇಕಡಾವಾರು ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಿಲ್ಲ. SSLC ಅಲ್ಲಿ 62.34 ವಾರ್ಷಿಕ ಫಲಿತಾಂಶ ಕಂಡರೆ ದ್ವಿತೀಯ ಪಿಯುಸಿ ಅಲ್ಲಿ ಶೇಕಡಾ 69.16ರಷ್ಟು ಫಲಿತಾಂಶ ಕಂಡು ಬಂದಿದೆ. ಫಲಿತಾಂಶ ಹೆಚ್ಚಿಸಿ ಕೊಳ್ಳಲು ಪರೀಕ್ಷಾ ಪಾಸಿಂಗ್ ಪರ್ಸಂಟೇಜ್ ಇಳಿಕೆಗೆ ಶಿಕ್ಷಣ ಇಲಾಖೆ ತಯಾರಿ ಮಾಡ್ತಿದೆ.
ಇದನ್ನೂ ಓದಿ: 2025ರ CET ಫಲಿತಾಂಶ ಪ್ರಕಟ; ಈ ಬಾರಿ ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ
ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅನುತ್ತೀರ್ಣ ಅಂಚಲ್ಲಿರುವ ಸಾಕಷ್ಟು ಮಕ್ಕಳಿಗೆ ಇಲಾಖೆ ನಿರ್ಧಾರ ಉತ್ತೀರ್ಣ ಆಗಲು ನೆರವಾಗುತ್ತೆ ಅಂತಾರೆ ಪೋಷಕರು. ಇದ್ರಿಂದ ಪಾಸಿಂಗ್ ಪರ್ಸಂಟೇಜ್ ಕೂಡ ಜಾಸ್ತಿ ಆಗುತ್ತೆ. ಶಿಕ್ಷಣ ಇಲಾಖೆ 35 ರಿಂದ 33 ಪರ್ಸೆಂಟ್ ಇಳಿಕೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಇದರಿಂದಾಗೋ ಲಾಭ ಏನು?
ಪೋಷಕರ ಪ್ರಕಾರ SSLC ಆಗಲಿ ಅಥವಾ ಪಿಯುಸಿ ಆಗಲಿ ಫಲಿತಾಂಶದಲ್ಲಿ 35 ರಿಂದ 33 ಕ್ಕೆ ಇಳಿಕೆ ಮಾಡಿದ್ರೆ ಮಕ್ಕಳು ಪರೀಕ್ಷೆಯಲ್ಲಿ ಗಂಭೀರತೆ ಕಳೆದು ಕೊಳ್ಳುವುದಿಲ್ಲ. ಬದಲಿಗೆ ಪರೀಕ್ಷೆ ಇನ್ನಷ್ಟು ಸುಲಭ ಅಂತ ಪರೀಕ್ಷೆ ಬಗೆಗೆ ಮಕ್ಕಳ ಮೈಂಡ್ ಸೆಟ್ ಬದಲಾಗುತ್ತೆ. ಪರೀಕ್ಷೆಗೆ ಮಕ್ಕಳ ರೆಡಿ ಮಾಡಲು ಅನೂಕೂಲ ಆಗುತ್ತೆ. ಮಕ್ಕಳ ಮನೋಬಲ ಹೆಚ್ಚಿಸುವುದಕ್ಕೆ ಕೂಡ ನೆರವಾಗುತ್ತೆ. ಜೊತೆಗೆ ಪಾಸಿಟಿವ್ ಇಂಪ್ಯಾಕ್ಟ್ ಆಗುತ್ತೆ. ಅದರೊಂದಿಗೆ ಈಗಾಗಲೇ ಬೇರೆ ಪಠ್ಯಕ್ರಮದಲ್ಲಿ 33 ಅಂಕ ಗಳಿಸಿದರೆ ಪಾಸ್ ಅನ್ನೋ ಲೆಕ್ಕಾಚಾರ ಇರೋದ್ರಿಂದ ರಾಜ್ಯ ಪಠ್ಯ ಕ್ರಮದಲ್ಲಿ ಕೂಡ 33 ಅಂಕ ತರೊದ್ರಿಂದ ಮಕ್ಕಳಲ್ಲಿ ನಾವೆಲ್ಲಾ ಒಂದೇ ಅನ್ನೋ ಭಾವ ಮೂಡುತ್ತೆ ಅಂತಾರೆ ಪೋಷಕರು.
ಇದನ್ನೂ ಓದಿ: ಖಾಸಗಿ ಶಾಲೆಯಲ್ಲೂ ಹೆಣ್ಮಕ್ಕಳಿಗೆ ಮೀಸಲಾತಿ.. 50 ಪರ್ಸೆಂಟ್ ಮೀಸಲು ನಿಯಮ ಏನ್ ಹೇಳುತ್ತದೆ..?
ಈ ಹಿಂದಿನಿಂದಲೂ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಬೇರೆ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲಿಯೂ ಶೇಕಡಾವಾರು 33 ಪರ್ಸೆಂಟ್ ತರಬೇಕು ಅಂತ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಈಗ ಪೋಷಕರು ಕೂಡ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಶಿಕ್ಷಣ ಇಲಾಖೆ ಮುಂದೆ ಏನ್ ಮಾಡುತ್ತೆ ಅಂತ ಕಾದು ನೋಡಬೇಕು.
ಇದನ್ನೂ ಓದಿ: ಕೊರೊನಾ ಭಯ.. ರಾಜ್ಯದ ಜನತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶೇಷ ಮನವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ