/newsfirstlive-kannada/media/post_attachments/wp-content/uploads/2024/04/Bagalkote.jpg)
ಬಾಗಲಕೋಟೆ: ಐಫೋನ್ ಕೊಡಿಸಲು ವಿಳಂಬವಾದ ಕಾರಣ 10 ತರಗತಿ ಬಾಲಕ ಮನೆಬಿಟ್ಟು ಹೋದ ಘಟನೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 15 ವರ್ಷದ ಶ್ರವಣಕುಮಾರ್ ಗುರುನಾಥ್ ತಳವಾರ್ ಮನೆಬಿಟ್ಟು ಹೋಗಿದ್ದಾನೆ.
ಕಳೆದೊಂದು ವರ್ಷದಿಂದ ಶ್ರವಣಕುಮಾರ್ ತಂದೆಯ ಫೋನ್ ಯೂಸ್ ಮಾಡ್ತಿದ್ದ. ಬಳಿಕ 15 ಸಾವಿರ ಮೌಲ್ಯದ ಹೊಸ ಫೋನನ್ನು ಹೆತ್ತವರು ಕೊಡಿಸಿದ್ದರು. ಹೀಗಾಗಿ ಮೊಬೈಲ್ ನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಗೀಳು ಹೆಚ್ಚಿಸಿಕೊಂಡಿದ್ದನು.
ಇತ್ತೀಚೆಗೆ ಐಫೋನ್ ಕೊಡಿಸುವಂತೆ ಪೋಷಕರ ಜೊತೆಗೆ ಹಠ ಬಿದ್ದದನು. ಮಗನ ಹಠಕ್ಕೆ ದುಬಾರಿ ಬೆಲೆ ಫೋನನ್ನು ಕೊಡಿಸುತ್ತೀವೆ ಎಂದಿದ್ದರು. ಆದರೆ ವಿಳಂಬವಾದ ಹಿನ್ನೆಲೆ ಕಳೆದ ಶನಿವಾರ ಬಾಲಕ ಮನೆ ಬಿಟ್ಟು ಹೋಗಿದ್ದಾನೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಅಕ್ಕಿ ತುಂಬಿದ ಲಾರಿ.. ಹಳ್ಳಕ್ಕೆ ಚೆಲ್ಲಿದ ಮೂಟೆ.. ಚಾಲಕನ ಸ್ಥಿತಿ?
ಮನೆಬಿಟ್ಟು ಹೋದ ಮಗನಿಗಾಗಿ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ತಂದೆ ಗುರುನಾಥ್, ತಾಯಿ ಸುವರ್ಣ ಮಗ ಬೇಗ ಮನೆ ಸೇರು ಎಂದು ಮಾಧ್ಯಮಗಳ ಮೊರೆ ಹೋಗಿದ್ದಾರೆ. ಕಾಣೆಯಾದ ಮಗನ ಬಗ್ಗೆ ದೂರು ಕೂಡ ನೀಡಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ