/newsfirstlive-kannada/media/post_attachments/wp-content/uploads/2025/05/SSLC-results-2.jpg)
ಬೆಂಗಳೂರು: 2024-25ನೇ ಸಾಲಿನ SSLC ಪರೀಕ್ಷೆ-1 ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಶೇಕಡಾ 66.14 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆಗೆ 7 ಲಕ್ಷ 90 ಸಾವಿರದ 890 ವಿದ್ಯಾರ್ಥಿಗಳು ಹಾಜರಾಗಿದ್ದರು. 5 ಲಕ್ಷ 23 ಸಾವಿರದ 075 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ.
SSLC ಪರೀಕ್ಷೆ-1ರ ಫಲಿತಾಂಶದಲ್ಲಿ ಈ ಬಾರಿಯೂ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಗಂಡು ಮಕ್ಕಳಲ್ಲಿ 58.07%, ಹೆಣ್ಣು ಮಕ್ಕಳು 74.00% ರಷ್ಟು ಪಾಸ್ ಆಗಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬರೋಬ್ಬರಿ 3 ಲಕ್ಷ 17 ಸಾವಿರದ 189 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
SSLC ಪರೀಕ್ಷೆಯಲ್ಲಿ ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದು ಗಮನ ಸೆಳೆದಿದ್ದಾರೆ. ಈ 22 ವಿದ್ಯಾರ್ಥಿಗಳು ಈ ಬಾರಿ ರಾಜ್ಯಕ್ಕೆ ಟಾಪ್ ಬಂದಿದ್ದಾರೆ.
ಇದನ್ನೂ ಓದಿ: SSLC ಫಲಿತಾಂಶ: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ: 625ಕ್ಕೆ 625 ತೆಗೆದ ಮಕ್ಕಳು ಎಷ್ಟು?
625/625 ಅಂಕ ಪಡೆದ ಟಾಪ್ ವಿದ್ಯಾರ್ಥಿಗಳು
1. ಅಖಿಲಾ ಅಹ್ಮದ್ ನಡಾಪ್ - ವಿಜಯಪುರ
2. ಭಾವನಾ - ಬೆಂಗಳೂರು ಗ್ರಾಮಾಂತರ
3. ಧನಲಕ್ಷ್ಮಿ ಎಂ - ಬೆಂಗಳೂರು ಉತ್ತರ
4. ಧನುಷ್ - ಮೈಸೂರು
5. ಧೃತಿ - ಮಂಡ್ಯ
6. ಜಾಹ್ನವಿ - ಬೆಂಗಳೂರು ದಕ್ಷಿಣ
7. ಮಧುಸೂದನ್ ರಾಜು - ಬೆಂಗಳೂರು ಉತ್ತರ
8. ಮೊಹಮ್ಮದ್ ಮಸ್ತೂರ್ ಆದಿಲ್ - ತುಮಕೂರು
9. ಮೌಲ್ಯ ಡಿ ರಾಜ್ - ಚಿತ್ರದುರ್ಗ
10. ನಮನ - ಶಿವಮೊಗ್ಗ
11. ನಮಿತಾ - ಬೆಂಗಳೂರು ದಕ್ಷಿಣ
12. ನಂದನ್ - ಚಿತ್ರದುರ್ಗ
13. ನಿತ್ಯಾ ಎಂ ಕುಲಕರ್ಣಿ - ಶಿವಮೊಗ್ಗ
14. ರಂಜಿತಾ - ಬೆಂಗಳೂರು ಗ್ರಾಮಾಂತರ
15. ರೂಪ ಚನ್ನಗೌಡ ಪಾಟೀಲ್ - ಬೆಳಗಾವಿ
16. ಶಹಿಷ್ಣು - ಶಿವಮೊಗ್ಗ
17. ಶಗುಫ್ತಾ ಅಂಜುಮ್ - ಸಿರಸಿ
18. ಸ್ವಸ್ತಿ ಕಾಮತ್ - ಉಡುಪಿ
19. ತನ್ಯಾ - ಮೈಸೂರು
20. ಉತ್ಸವ್ ಪಾಟೀಲ್ - ಹಾಸನ
21. ಯಶವಂತ್ ರೆಡ್ಡಿ - ಮಧುಗಿರಿ
22. ಯುಕ್ತಿ - ಬೆಂಗಳೂರು ದಕ್ಷಿಣ
ಇದರ ಜೊತೆಗೆ 65 ವಿದ್ಯಾರ್ಥಿಗಳು 624 ಅಂಕ ಹಾಗೂ 108 ವಿದ್ಯಾರ್ಥಿಗಳು 623, 189 ವಿದ್ಯಾರ್ಥಿಗಳು 622, 259 ವಿದ್ಯಾರ್ಥಿಗಳು 621 ಮತ್ತು 327 ವಿದ್ಯಾರ್ಥಿಗಳು 620 ಅಂಕಗಳನ್ನು ತೆಗೆದು ಉತ್ತೀರ್ಣರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ