/newsfirstlive-kannada/media/post_attachments/wp-content/uploads/2025/05/SSLC-results-3.jpg)
ಚಿತ್ರದುರ್ಗ: ರಾಜ್ಯದ SSLC ಪರೀಕ್ಷೆ-1ರಲ್ಲಿ ಈ ಬಾರಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದಿರೋದು ಮತ್ತೊಂದು ವಿಶೇಷವಾಗಿದೆ. ಈ 22 ಮಕ್ಕಳಲ್ಲಿ ಚಿತ್ರದುರ್ಗ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಅಂಕವನ್ನು ಪಡೆದಿದ್ದಾರೆ.
2025ರ SSLC ಪರೀಕ್ಷೆ-1ರಲ್ಲಿ ಚಿತ್ರದುರ್ಗ ಜಿಲ್ಲೆಗೆ 23ನೇ ಸ್ಥಾನ ಸಿಕ್ಕಿದೆ. ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಹಿರಿಯೂರು ನಗರದ ನಂದನ್ ಹಾಗೂ ಮೌಲ್ಯ ಇಬ್ಬರು 625 ಕ್ಕೆ 625 ಅಂಕಗಳಿಸಿದ್ದಾರೆ. ವಿದ್ಯಾರ್ಥಿನಿ ಮೌಲ್ಯ ತಂದೆ, ತಾಯಿ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರು. ಮೌಲ್ಯ ತಂದೆ ದೇವರಾಜ್ ಅವರು ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ನಂದನ್ ತಂದೆ ಓಂಕಾರೇಶ್ವರ ಪಿಗ್ಮಿ ಕಲೆಕ್ಟರ್ ಆಗಿದ್ದಾರೆ.
ಇದನ್ನೂ ಓದಿ: ಯಾವುದೇ ಟ್ಯೂಷನ್ ಹೋಗಿಲ್ಲ.. SSLCಯಲ್ಲಿ ರಾಜ್ಯಕ್ಕೆ ಟಾಪ್ ಬಂದಿರೋ ಜಾಹ್ನವಿ ಹೇಳಿದ್ದೇನು?
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಳೆಕೋಟೆ ಕ್ರಾಸ್‌ನ SJCR ಶಾಲೆಯ ವಿದ್ಯಾರ್ಥಿನಿ ರಂಜಿತಾ 625ಕ್ಕೆ 625 ಅಂಕ ಪಡೆದಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಭಾವನಾ ಕೂಡ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಭಾವನಾ ನೀಲಗಿರೇಶ್ವರ ವಿದ್ಯಾನಿಕೇತನ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ