/newsfirstlive-kannada/media/post_attachments/wp-content/uploads/2025/05/SSLC-Exam-result-2025.jpg)
2025ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶದಲ್ಲಿ ಕೇರಳದ ಮಕ್ಕಳು ಮತ್ತೊಮ್ಮೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಬಾರಿ ಶೇಕಡಾ 99.5ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಸ್ ಆಗಿರೋದು ವಿಶೇಷವಾಗಿದೆ. ಅಷ್ಟೇ ಅಲ್ಲ 61,449 ಮಕ್ಕಳು SSLC ಪರೀಕ್ಷೆಯಲ್ಲಿ A+ ಮಾರ್ಕ್ಸ್ ಪಡೆದುಕೊಂಡಿದ್ದಾರೆ.
ಕೇರಳದಲ್ಲಿ ಈ ಬಾರಿ 4 ಲಕ್ಷದ 27 ಸಾವಿರದ 021 ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4 ಲಕ್ಷ 24 ಸಾವಿರದ 583 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪಡೆದಿದ್ದಾರೆ. ಕೇವಲ 2,438 ಮಕ್ಕಳು ಮಾತ್ರ ಇಡೀ ರಾಜ್ಯದ SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಇದನ್ನೂ ಓದಿ: ತಾಯಿಗೆ ಅನಾರೋಗ್ಯ, ತಂಗಿ ಮದುವೆಗೆ ಬಂದಿದ್ದ ಯೋಧ ಸೇನೆಗೆ ವಾಪಸ್.. ಭಾವುಕ ಕ್ಷಣ
ಕೇರಳದ 2,331 ಶಾಲೆಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪ್ರಕಟವಾಗಿದೆ. ಕಣ್ಣೂರು ಜಿಲ್ಲೆ ಇಡೀ ರಾಜ್ಯದಲ್ಲೇ ನಂ.1 ಸ್ಥಾನ ಪಡೆದಿದ್ದರೆ ತಿರುವನಂತಪುರಂ ಕೊನೆ ಸ್ಥಾನದಲ್ಲಿ ಉಳಿದಿದೆ.
ಕೇರಳದಲ್ಲಿ ಪ್ರತಿಬಾರಿಯೂ SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪ್ರಕಟವಾಗುತ್ತದೆ. ಈ ಬಾರಿಯೂ ಶೇ. 99.5ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿ ಗಮನ ಸೆಳೆದಿದ್ದಾರೆ. ಕೇರಳದ ಶಿಕ್ಷಣ ಇಲಾಖೆ ಕಳೆದ ಮಾರ್ಚ್ 3ರಿಂದ ಮಾರ್ಚ್ 26ರವರೆಗೆ SSLC ಪರೀಕ್ಷೆ ನಡೆಸಿತ್ತು. ಕೇರಳದ 2,964 ಪರೀಕ್ಷಾ ಕೇಂದ್ರಗಳು ಸೇರಿದಂತೆ ಲಕ್ಷದ್ವೀಪದ 9, ಗಲ್ಫ್ ದೇಶದ 7 ಕಡೆಗಳಲ್ಲಿ SSLC ಪರೀಕ್ಷೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ