SSLC ಪರೀಕ್ಷೆ.. ಮಕ್ಕಳೇ ಭಯ ಬಿಡಿ ಈ 5 ಟಿಪ್ಸ್‌ ಮರೆಯದೇ ಫಾಲೋ ಮಾಡಿ; ಆಲ್ ದಿ ಬೆಸ್ಟ್!

author-image
admin
Updated On
ನಾಳೆ ಇಂದ SSLC ಪರೀಕ್ಷೆ; ಎಷ್ಟು ಲಕ್ಷ ಬಾಲಕರು, ಬಾಲಕಿಯರು ಎಕ್ಸಾಂ ಬರೆಯುತ್ತಿದ್ದಾರೆ?
Advertisment
  • ಪರೀಕ್ಷಾ ಕೇಂದ್ರವನ್ನು 15 ನಿಮಿಷ ಮುಂಚಿತವಾಗಿಯೇ ತಲುಪಿ
  • ಒಟ್ಟು 8 ಲಕ್ಷದ 96 ಸಾವಿರದ 447 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
  • ಪರೀಕ್ಷೆ ಅನ್ನೋ ಒತ್ತಡಕ್ಕೆ ಒಳಗಾಗ್ಬೇಡಿ.. ಕೂಲ್‌ ಆಗಿ ಪರೀಕ್ಷೆ ಬರೀರಿ!

ಇಂದು ರಾಜ್ಯದಲ್ಲಿ SSLC ಪರೀಕ್ಷೆ. ಮಕ್ಕಳ ಪಾಲಿಗೆ ಇದೊಂದು ರೀತಿ ಅಗ್ನಿ ಪರೀಕ್ಷೆ ಇದ್ದ ಹಾಗೆ. ಯಾಕಂದ್ರೆ ಈ ಪರೀಕ್ಷೆಯ ಬಳಿಕವೇ ಯಾವ ಕಡೆ ಹೆಜ್ಜೆ ಇಡ್ಬೇಕು ಭವಿಷ್ಯದಲ್ಲಿ ಅನ್ನೋದನ್ನ ವಿದ್ಯಾರ್ಥಿಗಳು ನಿರ್ಧರಿಸೋದು. ಹಾಗಾದ್ರೆ ಇಂದಿನಿಂದ ಆರಂಭವಾಗ್ತಿರೋ ಪರೀಕ್ಷೆಗೆ ತಯಾರಿ ಹೇಗಿದೆ ಗೊತ್ತಾ?

ಹಾಲ್‌ ಟಿಕೆಟ್‌​ ನಂಬರ್​​ ರಿಜಿಸ್ಟರ್​​ ಆಗಿದೆ. ಡೆಸ್ಕ್​​ನಲ್ಲೂ ನಂಬರ್​ ಬಿದ್ದಿದೆ. 10ನೇ ತರಗತಿ ಮಕ್ಕಳು ಬುಕ್​ ಹಿಡಿದು ಅಗ್ನಿ ಪರೀಕ್ಷೆ ಎದುರಿಸೋಕೆ ರೆಡಿಯಾಗ್ಬಿಟ್ಟಿದ್ದಾರೆ.

publive-image

ಇಂದಿನಿಂದ ರಾಜ್ಯಾದ್ಯಂತ ಸುಮಾರು 2 ಸಾವಿರದ 818 ಪರೀಕ್ಷಾ ಕೇಂದ್ರಗಳಲ್ಲಿ 8 ಲಕ್ಷ 96 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸೋ ಪರೀಕ್ಷೆಗೆ ಯಾವುದೇ ವಿಘ್ನ ಉಂಟಾದಂತೆ ಸಕಲ ತಯಾರಿಯೂ ನಡೆದಿದೆ.

ಇದನ್ನೂ ಓದಿ: ಶನಿವಾರ ಕರ್ನಾಟಕ ಬಂದ್ ಆಗುತ್ತಾ? ಇಲ್ವಾ? ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿ ತಟ್ಟುತ್ತಾ? 

ವಿದ್ಯಾರ್ಥಿಗಳೇ 5 ಅಂಶ ಮರೆಯದಿರಿ!

  1. ಪರೀಕ್ಷಾ ಕೇಂದ್ರ 15 ನಿಮಿಷ ಮುಂಚಿತವಾಗಿಯೇ ತಲುಪಿ
  2.  ನಿಮ್ಮ ಹಾಲ್‌ ಟಿಕೆಟ್ ನಂಬರ್‌ ಪರೀಕ್ಷಾ ಕೇಂದ್ರ ಇರುವುದನ್ನು ಖಚಿತಪಡಿಸಿಕೊಳ್ಳಿ
  3. ಹಾಲ್ ಟಿಕೆಟ್ ನಂಬರ್ ಯಾವ ಕೊಠಡಿಯಲ್ಲಿದೆ ಎಂಬ ಮಾಹಿತಿ ಪಡೆಯಿರಿ
  4. ಪ್ರವೇಶ ಪತ್ರ, ಪೆನ್ನುಗಳು ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಜೊತೆಗೆ ತೆಗೆದುಕೊಂಡು ಹೋಗಿ
  5. ಪರೀಕ್ಷೆಯ ಆರಂಭದಿಂದ ಸಮಯ ಮುಗಿಯುವವರೆಗೂ ತಾಳ್ಮೆ ಹಾಗೂ ದಣಿವಾಗದಂತೆ ಚೈತನ್ಯದಿಂದಿರಿ

publive-image

ಇಂದಿನಿಂದ SSLC ಪರೀಕ್ಷೆ
ರಾಜ್ಯದ ವಿವಿಧ ಜಿಲ್ಲೆಗಳ 15 ಸಾವಿರದ 881 ಶಾಲೆಗಳಲ್ಲಿ ಒಟ್ಟು 8 ಲಕ್ಷದ 42 ಸಾವಿರದ 817 ವಿದ್ಯಾರ್ಥಿಗಳು 10ನೇ ತರಗತಿ ವ್ಯಾಸಂಗ ಮಾಡ್ತಿದ್ದಾರೆ. ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 8 ಲಕ್ಷದ 96 ಸಾವಿರದ 447 ವಿದ್ಯಾರ್ಥಿಗಳು ಎಸ್​​ಎಸ್​​ಎಲ್​ಸಿ ಪರೀಕ್ಷಗೆ ನೋಂದಣಿ ಮಾಡ್ಕೊಂಡಿದ್ದಾರೆ. ಅದ್ರಲ್ಲಿ 3 ಲಕ್ಷದ 35 ಸಾವಿರದ 468 ಬಾಲಕರು, 3 ಲಕ್ಷದ 78 ಸಾವಿರದ 389 ಬಾಲಕಿಯರು ಮತ್ತು ಐವರು ತೃತೀಯ ಲಿಂಗಿಗಳು ಇದ್ದಾರೆ.

ಮಲ್ಲೇಶ್ವರಂನ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಪರೀಕ್ಷೆಗೆ ಎಲ್ಲಾ ಅಂತಿಮ ತಯಾರಿ ನಡೆದಿದ್ದು, ಶಾಲಾ ಪ್ರಿನ್ಸಿಪಾಲ್​ ಪ್ರತಿ ಕೊಠಡಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆ ಎದುರಿಸ್ತಿರೋ ಮಕ್ಕಳಿಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​. ಅಯ್ಯೋ ಪರೀಕ್ಷೆ ಅನ್ನೋ ಒತ್ತಡಕ್ಕೆ ಒಳಗಾಗ್ಬೇಡಿ. ಚೆನ್ನಾಗಿ ಓದಿ.. ಕೂಲ್‌ ಆಗಿ ಪರೀಕ್ಷೆ ಬರೀರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment