SSLC ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್.. ಯಾವ್ಯಾವ ವಿಷಯ ಸೋರಿಕೆ ಆಗಿವೆ?

author-image
Bheemappa
Updated On
ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?
Advertisment
  • ಸೋಶಿಯಲ್ ಮೀಡಿಯಾದಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್
  • ಪರೀಕ್ಷೆ ನಡೆಯುವ 1 ದಿನ ಮೊದಲೇ ಸೋರಿಕೆಯಾದ ಪೇಪರ್
  • SSLC ಮುಖ್ಯ ಪರೀಕ್ಷೆಗಳು ಆರಂಭವಾಗುವುದು ಯಾವಾಗ?

ಬೆಂಗಳೂರು: 10ನೇ ತರಗತಿಯ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ತರಿಸಿದೆ.

ರಾಜ್ಯದಲ್ಲಿ ಫೆಬ್ರವರಿ 25 ರಿಂದ ಎಸ್​ಎಸ್​ಎಲ್​ಸಿ ಪೂರ್ವಭಾವಿ ಪರೀಕ್ಷೆಗಳು ಆರಂಭವಾಗಿವೆ. ಮಾರ್ಚ್​ 3 ಸೋಮವಾರ ವಿಜ್ಞಾನ ಪರೀಕ್ಷೆ ನಡೆದಿದೆ. ಆದರೆ ಈ ವಿಷಯದ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಆರೋಪವಿದೆ. ವಿಜ್ಞಾನ, ಸಮಾಜ ವಿಷಯಗಳ ಪ್ರಶ್ನಿ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ ಎನ್ನಲಾಗಿದೆ.

ಇದನ್ನೂ ಓದಿ:ಸೂರ್ಯ- ಶಿವಶ್ರೀ ಕಲ್ಯಾಣ; ವಿವಾಹ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು..? ಟಾಪ್ 10 ಫೋಟೋಸ್

publive-image

ಎಸ್​ಎಸ್​ಎಲ್​ಸಿ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ತರಿಸಿದೆ. ಏಕೆಂದರೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 21 ರಿಂದ ಮುಖ್ಯ ಪರೀಕ್ಷೆ ನಡೆಯಲಿದೆ. ಇದರ ಬಗ್ಗೆ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳದಿದ್ದರೇ ಶಿಕ್ಷಣ ಇಲಾಖೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆ ಎದುರಾಗುವ ಮೊದಲೇ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡರೇ ಮಕ್ಕಳಿಗೆ ಒಳ್ಳೆಯದಾಗುತ್ತದೆ.

ಸಮಾಜ, ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಗಳು ಯೂಟ್ಯೂಬ್‌, ಇನ್​ಸ್ಟಾ ಸೇರಿದಂತೆ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಇವುಗಳನ್ನು ಈಗಾಗಲೇ ಸಾಕಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆಗಳ ಲೀಕ್ ಆಗಿರುವುದು ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮುಖ್ಯ ಪರೀಕ್ಷೆಗೆ ಮೊದಲೇ ಇಲಾಖೆಯು ಜಾಗ್ರತೆ ವಹಿಸಬೇಕಾಗಿದೆ.

10ನೇ ತರಗತಿಯ ಮುಖ್ಯ ಪರೀಕ್ಷೆಯ ವೇಳಾಪಟ್ಟಿ-

ಮಾರ್ಚ್ 21- ಪ್ರಥಮ ಭಾಷೆ
ಮಾರ್ಚ್ 24- ಗಣಿತ
ಮಾರ್ಚ್ 26- ದ್ವಿತೀಯ ಭಾಷೆ
ಮಾರ್ಚ್ 29- ಸಮಾಜ ವಿಜ್ಞಾನ
ಏಪ್ರಿಲ್ 2- ವಿಜ್ಞಾನ
ಏಪ್ರಿಲ್ 4- ತೃತೀಯ ಭಾಷೆ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment