/newsfirstlive-kannada/media/post_attachments/wp-content/uploads/2025/05/bangarappa-sslc1.jpg)
2024-25ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 66.14ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ!
ಗಂಡು ಮಕ್ಕಳು - 58.07%
ಹೆಣ್ಣು ಮಕ್ಕಳು - 74.00%
ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು 7 ಲಕ್ಷ 90 ಸಾವಿರದ 890. ಅದರಲ್ಲಿ 5 ಲಕ್ಷ 23 ಸಾವಿರದ 075 ಮಕ್ಕಳು ಈ ಬಾರಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
SSLC ಪರೀಕ್ಷೆಯಲ್ಲಿ ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದು ಗಮನ ಸೆಳೆದಿದ್ದಾರೆ. ಇದರ ಜೊತೆಗೆ 65 ವಿದ್ಯಾರ್ಥಿಗಳು 624 ಅಂಕ ಹಾಗೂ 108 ವಿದ್ಯಾರ್ಥಿಗಳು 623, 189 ವಿದ್ಯಾರ್ಥಿಗಳು 622, 259 ವಿದ್ಯಾರ್ಥಿಗಳು 621 ಮತ್ತು 327 ವಿದ್ಯಾರ್ಥಿಗಳು 620 ಅಂಕಗಳನ್ನು ತೆಗೆದು ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: BREAKING: SSLC ಪರೀಕ್ಷೆ-1 ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ