Advertisment

ಮಫ್ಲರ್​​ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?

author-image
Bheemappa
Updated On
ಮಫ್ಲರ್​​ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
Advertisment
  • ಶಾಲೆಯಲ್ಲಿ 10ನೇ ತರಗತಿಯನ್ನ ವ್ಯಾಸಂಗ ಮಾಡ್ತಿದ್ದ ಬಾಲಕ
  • ಎಂದಿನಂತೆ ಶಾಲೆಗೆ ಹಾಜರಾಗಿ ಮನೆಗೆ ಬಂದಿದ್ದ ವಿದ್ಯಾರ್ಥಿ
  • ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಚಿತ್ರದುರ್ಗ: ಎಸ್​ಎಸ್​ಎಲ್​ಸಿ ಓದುತ್ತಿದ್ದ ವಿದ್ಯಾರ್ಥಿಯೊರ್ವ ಮನೆಯಲ್ಲಿ ಮಫ್ಲರ್​ನಿಂದ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಳಲ್ಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Advertisment

ಇದನ್ನೂ ಓದಿ:ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!

ರಂಗಾಪುರ ಗ್ರಾಮದ ಚಂದ್ರಶೇಖರ್ ಎನ್ನುವರ ಮಗ ಪ್ರಜ್ವಲ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಹೊಳಲ್ಕೆರೆಯ ವಾಗ್ದೇವಿ ಶಾಲೆಯಲ್ಲಿ ವಿದ್ಯಾರ್ಥಿ 10ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದನು. ಇತ್ತೀಚೆಗೆ ಶಾಲೆಯಲ್ಲಿ ನಡೆಸಲಾಗಿದ್ದ ತರಗತಿ ಪರೀಕ್ಷೆಗೆ ಬಾಲಕ ಹಾಜರಾಗಿರಲಿಲ್ಲ. ಹೀಗಾಗಿ ಪೋಷಕರನ್ನು ಕರೆದುಕೊಂಡು ಬರುವಂತೆ ಶಿಕ್ಷಕರು ಬಾಲಕನಿಗೆ ಸೂಚಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನ ಯುವಕ ಜೋಗ ಜಲಪಾತದಲ್ಲಿ ಕಣ್ಮರೆ.. ಶೋಧ ಕಾರ್ಯ

ಅದರಂತೆ ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿ ಓದಿಕೊಳ್ಳುತ್ತೇನೆ ಪೋಷಕರಿಗೆ ಎಂದು ಹೇಳಿ ಮಾಫ್ಲರ್​ನಿಂದ ನೇಣು ಬಿಗಿದುಕೊಂಡಿದ್ದಾನೆ. ಸದ್ಯ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಸಂಬಂಧ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment