Advertisment

PUC ಸೇರಲು ಟಿಸಿ ಕೊಟ್ಟಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.. ಡೆತ್​​ನೋಟ್​ನಲ್ಲಿತ್ತು ನೋವಿನ ಕತೆ

author-image
AS Harshith
Updated On
PUC ಸೇರಲು ಟಿಸಿ ಕೊಟ್ಟಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.. ಡೆತ್​​ನೋಟ್​ನಲ್ಲಿತ್ತು ನೋವಿನ ಕತೆ
Advertisment
  • SSLC ಪರೀಕ್ಷೆಯಲ್ಲಿ ಉತ್ತೀರ್ಣನಾಗಿ PUC ಸೇರಲು ಬಯಸಿದ್ದನು
  • ಟಿಸಿ ಕೊಟ್ಟಿಲ್ಲವೆಂದು ಬೇಸರಗೊಂಡಿದ್ದ 16 ವರ್ಷದ ಬಾಲಕ
  • ಬದುಕಿ ಬಾಳಬೇಕಿದ್ದ ಬಾಲಕ ಆತ್ಮಹತ್ಯೆ ಮಾಡುವ ಮೂಲಕ ಸಾವು

ಉಡುಪಿ: ವಿದ್ಯಾರ್ಥಿಯೊರ್ವ ಟಿಸಿ ಕೊಟ್ಟಿಲ್ಲವೆಂದು ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೈಂದೂರಿನಲ್ಲಿ ಬೆಳಕಿಗೆ ಬಂದಿದೆ. ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

Advertisment

ನಿತಿನ್ ಬೈಂದೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನು. ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ನಿತಿನ್ ಶಾಲೆಗೆ ಬಂದಿದ್ದನು.

ಇದನ್ನೂ ಓದಿ:ಗೂಗಲ್​ ಪೇ ಬಳಸ್ತಾ ಇದ್ದೀರಾ? ಜೂನ್​ 4ರಿಂದ ಈ ಆ್ಯಪ್​ ಕೆಲಸ ಮಾಡಲ್ಲ! ಯಾಕೆ?

ನಿತಿನ್​ ಸಾವಿಗೆ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬೈದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಬೇಸರಗೊಂಡು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment