/newsfirstlive-kannada/media/post_attachments/wp-content/uploads/2024/05/deatjh4.jpg)
ಉಡುಪಿ: ಶಾಲೆಯಲ್ಲಿ ಟಿಸಿ ಕೊಟ್ಟಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೈಂದೂರಿನಲ್ಲಿ ನಡೆದಿದೆ. ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇನ್ನು, ಮೃತ ವಿದ್ಯಾರ್ಥಿ ನಿತಿನ್ ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಕೂಡ ಉತ್ತೀರ್ಣನಾಗಿದ್ದನು. ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ನಿತಿನ್ ಶಾಲೆಗೆ ಬಂದಿದ್ದನು.
ಇದನ್ನೂ ಓದಿ:Video: ಕಾರಿಗೆ ಮುತ್ತಿಗೆ ಹಾಕಿ CSK ಅಭಿಮಾನಿಗಳ ರೇಗಿಸಿ ತೊಂದರೆ.. ಭಾರೀ ಆಕ್ರೋಶ
ಆದರೆ ಅದೇ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬೈದಿದ್ದಾರೆ ಅಂತ ಸಾವಿಗೂ ಮಿನ್ನ ಡೆತ್ ನೋಟ್ ಬರೆದಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ, ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದೀಗ ಬೈಂದೂರು ಪೊಲೀಸ್ ಠಾಣೆ ಮುಂದೆ ಸಾರ್ವಜನಿಕರು ಸೇರಿದ್ದಾರೆ. ಟಿಸಿ ನೀಡದೆ ಸತಾಯಿಸಿದ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬಂಧಿಸುವಂತೆ ಶಿಕ್ಷಕನ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಬೈಂದೂರು ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ನಲ್ಲಿ ಏನಿದೆ?
ಅಮ್ಮ ಅಮ್ಮ ನಾನು ನಿಮ್ಮ ಹತ್ತಿರ ತುಂಬಾ ಸತ್ಯವನ್ನು ಮುಚ್ಚಿಟ್ಟಿದ್ದೇನೆ. ನಾನು ಶಾಲೆಗೆ ಹೋದಾಗ ನಿನಗೆ ಟಿಸಿ ಕೊಡೋದಕ್ಕೆ ಆಗೋದಿಲ್ಲ. ನೀನು ಸಿಸಿಟಿವಿ ಹಾಗೂ ಬೇರೆ ವಸ್ತುಗಳನ್ನು ಹಾಳು ಮಾಡಿದ್ದೀಯಾ. ನೀನು ನಿನ್ನ ಪೋಷಕರನ್ನು ಕರೆದುಕೊಂಡು ಬರಬೇಕು. ಜತೆಗೆ ಅದಕ್ಕೆ ದಂಡ ಕಟ್ಟಬೇಕು ಅಂತ ಹೇಳಿದ್ದಾರೆ. ಆದರೆ ನನಗೆ ನಿಮ್ಮ ಕಷ್ಟಗಳನ್ನು ನೋಡೋಕೆ ಆಗದೇ, ನಿಮ್ಮ ಹತ್ತಿರ ಏನನ್ನೂ ಹೇಳೋದಕ್ಕೆ ಆಗಲಿಲ್ಲ. ಅವರು ನನಗೆ ಶಾಲೆಯಲ್ಲಿ ತುಂಬಾನೇ ಅವಮಾನ ಮಾಡಿದ್ದಾರೆ. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಗೆ ನಾನೂ ಹೇಳಿದ್ದೆ, ನೀವು ಹೇಳಿದ ವಸ್ತುಗಳನ್ನು ನಾನು ಹಾಳು ಮಾಡಿಲ್ಲ ಅಂತ. ಆದರೆ ಅವರು ನೀನೆ ಇದನ್ನ ಮಾಡಿದ್ದು ಅಂತ ಹೇಳಿದ್ರು. ಅದಕ್ಕೆ ನಾನು ಟಿಸಿ ಕೊಡಿ ಸರ್ ಅಂತ ಹೇಳಿದ್ದೆ. ಆದರೆ ಆ ವಸ್ತಗಳನ್ನು ರಿಪೇರಿ ಮಾಡಿಸು ಆಮೇಲೆ ಟಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ