newsfirstkannada.com

ಕಲಬುರಗಿಯಲ್ಲಿ ಮಗುವಿಗೆ ಜನ್ಮ ನೀಡಿದ SSLC ವಿದ್ಯಾರ್ಥಿನಿ.. ಪೋಕ್ಸೋ ಅಡಿ ಬಾಲಕಿಯ ಸಹೋದರ ಅರೆಸ್ಟ್​

Share :

Published January 20, 2024 at 11:31am

Update January 20, 2024 at 11:34am

  ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಗಂಡು ಮಗು ಜನನ

  ಮಗಳಿಗೆ ಮಗು ಜನಿಸಿದ್ದರಿಂದ ಪೋಷಕರು ಫುಲ್ ಶಾಕ್

  ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ದೂರು ದಾಖಲು

ಕಲಬುರಗಿ: ಶಾಲೆಯೊಂದರಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್ 28 ರಂದು ಬಾಲಕಿಗೆ ಹೆರಿಗೆಯಾಗಿದ್ದು ಈ ಸಂಬಂಧ ಸಹೋದರ (ದೊಡ್ಡಪ್ಪನ ಮಗ)ನನ್ನು ಪೊಲೀಸರು ಫೋಕ್ಸೋ ಕಾಯ್ದೆಯಡಿ ಅರೆಸ್ಟ್ ಮಾಡಿದ್ದಾರೆ.

ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹಾಸ್ಟೆಲ್ ಸಿಬ್ಬಂದಿ ಬಾಲಕಿಯ ಪೋಷಕರನ್ನು ಕರೆಸಿ ಬಳಿಕ ಅವರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಬಾಲಕಿಯ ಹೊಟ್ಟೆನೋವು ತೀವ್ರವಾಗಿದ್ದು ಈ ಸಂಬಂಧ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲು ಮಾಡಿದ್ದಾರೆ. ಈ ವೇಳೆ ವೈದ್ಯರು ಹೆರಿಗೆ ಮಾಡಿದ್ದು ಗಂಡು ಮಗು ಜನನವಾಗಿದೆ. ಇದನ್ನು ಕಂಡು ಆಕೆಯ ಪೋಷಕರು ಶಾಕ್​ಗೆ ಒಳಗಾಗಿದ್ದಾರೆ.

ಬಾಲಕಿಯನ್ನು ತಾಯಿಯನ್ನಾಗಿ ಮಾಡಿದವನು ಆಕೆಯ ದೊಡ್ಡಪ್ಪನ ಮಗ. ಅಂದರೆ ಆಕೆಯ ಸಹೋದರನೇ ಈ ದುಷ್ಕೃತ್ಯ ಎಸಗಿರುವುದು ಗೊತ್ತಾಗಿದೆ. ಸೊಲ್ಲಾಪುರದ ಆಸ್ಪತ್ರೆ ಸಿಬ್ಬಂದಿಯ ಮಾಹಿತಿ ಮೇರೆಗೆ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ. ಬಾಲಕಿಯ ಸ್ಥಿತಿಗೆ ಕಾರಣವಾದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದಾರೆ. ಜನಿಸಿರುವ ಮಗು ಆರೋಗ್ಯವಾಗಿದ್ದು ಜಿಲ್ಲೆಯ ಶಿಶು ಕೇಂದ್ರವೊಂದರಲ್ಲಿ ಆರೈಕೆ ಮಾಡಲಾಗುತ್ತಿದೆ.

ಹಾಸ್ಟೆಲ್​ನಲ್ಲಿದ್ದರು ಇಂತಹದನ್ನು ಗಮನಿಸದೆ ಇದ್ದು ನಿರ್ಲಕ್ಷ್ಯತನ ತೋರಿದ ಆರೋಪದ ಮೇಲೆ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಸತಿ ನಿಲಯದ ಪಾಲಕ ಸೇರಿ ಇಬ್ಬರನ್ನು ಅಮಾನತು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಬುರಗಿಯಲ್ಲಿ ಮಗುವಿಗೆ ಜನ್ಮ ನೀಡಿದ SSLC ವಿದ್ಯಾರ್ಥಿನಿ.. ಪೋಕ್ಸೋ ಅಡಿ ಬಾಲಕಿಯ ಸಹೋದರ ಅರೆಸ್ಟ್​

https://newsfirstlive.com/wp-content/uploads/2023/09/Pregnant_woman.jpg

Load More