Advertisment

SSLC ವಿದ್ಯಾರ್ಥಿಗಳೇ.. ಇಲ್ಲಿ ಕೇಳಿ.. ಇನ್ಮುಂದೆ 20% ಗ್ರೇಸ್​ ಮಾರ್ಕ್​ ಇರಲ್ಲ!

author-image
AS Harshith
Updated On
SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ 2ನೇ ಸ್ಥಾನ; ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
Advertisment
  • ಕಲಿಕೆಯಲ್ಲಿ ಗುಣಮಟ್ಟ ಸಾಧಿಸಲು ಇಲಾಖೆಯಿಂದ ಸರ್ಕಸ್​​
  • 20% ಮಾರ್ಕ್​ ಕೊಟ್ರೂ ರಿಸಲ್ಟ್​ ಕುಸಿತವಾಗಿರೋದು ಸ್ಪಷ್ಟ
  • ಹಿಂದಿನ ವರ್ಷ ಶೇ.83 ರಷ್ಟು ಫಲಿತಾಂಶ.. 20% ಮಾರ್ಕ್​​

ವೆಬ್ ಕಾಸ್ಟಿಂಗ್, ಲೈವ್ ಸ್ಟ್ರೀಮ್, ಈ ತರಹ ಅನೇಕ ಕಠಿಣ ನಿಯಮ ಜಾರಿ ಮಾಡಿ ಕಳೆದ ಸಾಲಿನ SSLC ಪರೀಕ್ಷೆ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಅನುತ್ತೀರ್ಣದ ಲಿಸ್ಟ್​ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿದ್ರು. ಅಂತಹ ವಿದ್ಯಾರ್ಥಿಗಳ ಪಾಲಿಗೆ ಬರೋಬ್ಬರಿ 20% ಗ್ರೇಸ್ ಮಾರ್ಕ್ಸ್ ಅಂತ ಇಲಾಖೆ ಕೊಟ್ಟಿತ್ತು. ಆದ್ರೀಗ ಅದೇ 20% ಗ್ರೇಸ್​​ ಮಾರ್ಕ್​​ ಅನ್ನ ಕೈ ಬಿಡುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದು ನಿಂತಿದ್ದು, ಕೆಲವೇ ದಿನದಲ್ಲಿ ಅಧಿಕೃತ ಆದೇಶ ಹೊರ ಬೀಳಲಿದೆ.

Advertisment

20% ಗ್ರೇಸ್​​ ಮಾರ್ಕ್ ಇರಲ್ಲ

ಹೌದು, ಕಳೆದ ಶೈಕ್ಷಣಿಕ ಸಾಲು ಅಂದ್ರೆ 2023/2024ರಲ್ಲಿ ಸುಮಾರು 6 ಲಕ್ಷದ 31 ಸಾವಿರದ 204 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ರು. ಆ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶ ಶೇ 73.40 ರಷ್ಟಾಗಿತ್ತು. ಅದಕ್ಕೂ ಹಿಂದಿನ ವರ್ಷ ಶೇ 83 ರಷ್ಟು ಫಲಿತಾಂಶ ಬಂದಿತ್ತು. ಇದ್ರ ಜೊತೆಗೆ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಫಲಿತಾಂಶ ಕುಸಿತ ಆಗಿರುವುದು ಸ್ಪಷ್ಟವಾಗಿತ್ತು. ಒಂದ್ವೇಳೆ ಕೃಪಾಂಕ ಕೊಡದೇ ಹೋಗಿದ್ರೆ ಅದೆಷ್ಟೋ ಕಳಪೆ ರಿಸಲ್ಟ್ ಇಲಾಖೆಗೆ ಬರ್ತಾ ಇತ್ತು ಅನ್ನೋದು ಮುಜುಗರದ ವಿಚಾರ. ಒಟ್ಟಾರೆ ಕಲಿಕೆಯಲ್ಲಿ ಗುಣಮಟ್ಟ ಸಾಧಿಸಲು ಇಲಾಖೆ ಹಲವು ಸರ್ಕಸ್ ಮಾಡ್ತಿದೆ.. ಈ ಪೈಕಿ ಈ ಬಾರಿ ನೋ ಗ್ರೇಸ್ ಮಾರ್ಕ್ಸ್ ಕೂಡ ಒಂದು.

publive-image

ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ವ್ಯವಸ್ಥೆಯನ್ನು  ಕೈ ಬಿಡುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿದೆ. ಕೊನೆಗೂ ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡ್ತಿದ್ದು, ಪ್ರಾಮಾಣಿಕವಾಗಿ ಓದಿ ಕಷ್ಟ ಪಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರದಾನ ಆಗೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment