ಪ್ರೀತಿಸಿದ ಹುಡುಗಿಗೋಸ್ಕರ ಉತ್ತರ ಪತ್ರಿಕೆಯಲ್ಲಿ SSLC ವಿದ್ಯಾರ್ಥಿ ವಿಚಿತ್ರ ಮನವಿ; ಏನೇನು ಗೊತ್ತಾ?

author-image
admin
Updated On
ಪ್ರೀತಿಸಿದ ಹುಡುಗಿಗೋಸ್ಕರ ಉತ್ತರ ಪತ್ರಿಕೆಯಲ್ಲಿ SSLC ವಿದ್ಯಾರ್ಥಿ ವಿಚಿತ್ರ ಮನವಿ; ಏನೇನು ಗೊತ್ತಾ?
Advertisment
  • ದಯವಿಟ್ಟು ನನ್ನ ಪಾಸ್ ಮಾಡಿಬಿಡಿ ಅಂತಾ 500 ರೂ. ಆಫರ್‌!
  • ಸರ್.. ಈ ಹಣವನ್ನು ಇಟ್ಕೊಂಡು ನೀವು ಚಹಾ ಕುಡಿಯಿರಿ..
  • ನನ್ನ ಗರ್ಲ್​ಫ್ರೆಂಡ್ SSLC ಪಾಸ್ ಆದ್ರಷ್ಟೇ ಲವ್ ಮಾಡುತ್ತಾಳಂತೆ

ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಚೆನ್ನಾಗಿ ಪರೀಕ್ಷೆ ಬರೆದು SSLC ರಿಸಲ್ಟ್‌ಗೋಸ್ಕರ ಕಾಯುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆಗೆ ಬರೆದಿರೋ ಉತ್ತರನೇ ಸಖತ್‌ ಡಿಫರೆಂಟ್ ಆಗಿದೆ.
ನಾನು SSLC ಅಲ್ಲಿ ಪಾಸ್​ ಆದ್ರೆ ಮಾತ್ರ ಲವ್ ಮಾಡ್ತೀನಿ ಅಂತ ನನ್ ಹುಡುಗಿ ಹೇಳಿದ್ದಾಳೆ. ದಯವಿಟ್ಟು ನನ್ನ ಪಾಸ್ ಮಾಡಿಬಿಡಿ ಅಂತಾ ಆನ್ಸರ್​ ಶೀಟ್​ನಲ್ಲಿ 500 ರೂಪಾಯಿ ಕೂಡ ಇಟ್ಟಿದ್ದಾನೆ.

publive-image

ಬೆಳಗಾವಿ ಚಿಕ್ಕೋಡಿ SSLC ಪರೀಕ್ಷಾ ಮೌಲ್ಯಮಾಪನದ ವೇಳೆ ಇಂಥದ್ದೊಂದು ವಿಚಿತ್ರ ಉತ್ತರ ಪತ್ರಿಕೆಯೊಂದು ಪತ್ತೆಯಾಗಿದೆ. ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ಈ ವಿಚಿತ್ರ ರೀತಿಯ ಬೇಡಿಕೆ ಇಟ್ಟಿದ್ದಾನೆ.

publive-image

ಇದನ್ನೂ ಓದಿ: ಸದ್ದಿಲ್ಲದೇ ಸ್ಯಾಂಡಲ್‌ವುಡ್ ನಟಿ ಅರ್ಚನಾ ಜೊತೆ IPL ಸ್ಟಾರ್ ಕ್ರಿಕೆಟರ್ ನಿಶ್ಚಿತಾರ್ಥ; ಫೋಟೋ ಇಲ್ಲಿವೆ! 

ನನ್ನ ಗರ್ಲ್​ಫ್ರೆಂಡ್, ನೀನು ಪಾಸ್ ಆದ್ರಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಹೀಗಾಗಿ ಪ್ಲೀಸ್ ಪಾಸ್ ಮಾಡಿ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ ಎಂದು ಬರೆದು, ಅದರ ಜೊತೆಗೆ 500 ರೂಪಾಯಿ ಗರಿಗರಿ ನೋಟು ಕೂಡ ಇಟ್ಟಿದ್ದಾನೆ.

publive-image

ಈ ಹಣ ಇಟ್ಕೊಂಡು ನೀವು ಚಹಾ ಕುಡಿಯಿರಿ ಸರ್.. ನನ್ನ ಪಾಸ್ ಮಾಡಿ ಅಂತಾ ಬರೆದಿದ್ದಾನೆ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಅನ್ನೋ ಬರಹದ ಆನ್ಶರ್ ಶೀಟ್ ಕೂಡ ಮೌಲ್ಯಮಾಪನದ ವೇಳೆ ಕಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment