newsfirstkannada.com

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಸ್ಕಾಲರ್​ಶಿಪ್​ಗೆ ಅಪ್ಲೇ ಮಾಡಿ, ಕೊನೆ ದಿನಾಂಕ ಯಾವಾಗ?

Share :

Published September 3, 2024 at 1:11pm

Update September 3, 2024 at 2:55pm

    ಪೋಷಕರ ಆದಾಯ 1 ಲಕ್ಷ ರೂ.ಗಳಿಗಿಂತ ಕಡಿಮೆ ಇರಬೇಕು

    ಸ್ಕಾಲರ್​ಶಿಪ್​ಗೆ ಯಾರು ಯಾರು ಅರ್ಜಿಗಳನ್ನು ಹಾಕಬಹುದು?

    ಬ್ಯಾಂಕ್​​ ಅಕೌಂಟ್​ಗೆ ಆಧಾರ್ ಕಾರ್ಡ್​ ಲಿಂಕ್ ಆಗಿರಬೇಕು

2024-25ನೇ ಸಾಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಯೋಜನೆಯಡಿ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್‌ಶಿಪ್​ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಆನ್​ಲೈನ್​​ ಮೂಲಕ ಅಪ್ಲೇ ಮಾಡಬಹುದು. ಬೌದ್ಧ, ಜೈನ್, ಸಿಖ್, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಸ್ಕಾಲರ್​ಶಿಪ್​ಗೆ ಅರ್ಜಿಗಳನ್ನು ಹಾಕಬಹುದು.

ಇದನ್ನೂ ಓದಿ: SSLC, PUC, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಕಾನ್​​ಸ್ಟೆಬಲ್, ಹೆಡ್​ ಕಾನ್​​ಸ್ಟೆಬಲ್​ ಹುದ್ದೆಗೆ ಕಾಲ್ ಫಾರ್ಮ್

1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಆದರೆ ಈ ಹಿಂದೆ ಸಲ್ಲಿಸಿದ್ದ ವಿದ್ಯಾರ್ಥಿಗಳ ಅರ್ಜಿಗಳನ್ನು ರಿನೆವೆಲ್ ಎಂದು ಪರಿಗಣಿಸುವುದರಿಂದ ಅಪ್ಲೇ ಮಾಡಬೇಕಿಲ್ಲ. ಒಂದು ವೇಳೆ ಹಿಂದಿನ ವರ್ಷದ ಸ್ಕಾಲರ್​ಶಿಪ್ ಬಂದಿಲ್ಲ ಎಂದರೆ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಹಾಕಿ. ಎಲ್ಲ ವಿದ್ಯಾರ್ಥಿಗಳ ಬ್ಯಾಂಕ್​ ಅಕೌಂಟ್​ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಜೊತೆಗೆ ಎನ್​​ಪಿಸಿಎಲ್ ಮ್ಯಾಪಿಂಗ್ ಆ್ಯಕ್ಟಿವ್ ಆಗಿರಬೇಕು. 1 ರಿಂದ 8ನೇ ತರಗತಿಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಅಪ್ಲೇ ಮಾಡಬಹುದು. ಇದಕ್ಕೆ ಬೇರೆ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ.

ಅಪ್ಲೇ ಮಾಡಲು ದಾಖಲೆಗಳು ಏನೇನು ಬೇಕು..?

  • ವಿದ್ಯಾರ್ಥಿಯ ಶಾಲಾ ನೋಂದಣಿ
  • ವಿದ್ಯಾರ್ಥಿಯ ಇ-ಮೇಲ್ ಐಡಿ
  • ಹಾಸ್ಟೆಲ್​ನಲ್ಲಿರುವ ವಿವರಗಳು ಬೇಕು
  • ಆಧಾರ್ ಕಾರ್ಡ್
  • ಪೋಷಕರ ಮೊಬೈಲ್ ನಂಬರ್
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ (₹1 ಲಕ್ಷಕ್ಕೂ ಹೆಚ್ಚು ಇರಬಾರದು)
  • ಮನೆಯ ವಿಳಾಸ

ಇದನ್ನೂ ಓದಿ: ನೀಟ್ ಪರೀಕ್ಷೆ ಪಾಸ್ ಮಾಡಿ MBBSಗೆ ಆಯ್ಕೆಯಾದ ಬುಡಕಟ್ಟು ವಿದ್ಯಾರ್ಥಿ; ದೇಶದ ಇತಿಹಾಸದಲ್ಲೇ ಮೊದಲು!

ವಿದ್ಯಾರ್ಥಿಗಳು ಭೇಟಿ ನೀಡಬೇಕಾದ ವೆಬ್​​ಸೈಟ್​ ವಿಳಾಸ:

ಅತ್ಯಂತ ಪ್ರಮುಖವಾದ ದಿನಾಂಕಗಳು, ಗಮನಿಸಿ

  • ಅರ್ಜಿ ಹಾಕಲು ಆರಂಭ ದಿನಾಂಕ- 29 ಆಗಸ್ಟ್​ 2024
  • ಅರ್ಜಿ ಹಾಕಲು ಕೊನೆ ದಿನಾಂಕ- 31 ಅಕ್ಟೋಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಸ್ಕಾಲರ್​ಶಿಪ್​ಗೆ ಅಪ್ಲೇ ಮಾಡಿ, ಕೊನೆ ದಿನಾಂಕ ಯಾವಾಗ?

https://newsfirstlive.com/wp-content/uploads/2024/09/JOBS-1.jpg

Load More